ನೇಪಾಳ ಪ್ರವಾಸ – ಲುಂಬಿನಿಗೆ ಪ್ರಧಾನಿ ಮೋದಿ ಭೇಟಿ, ಬುದ್ಧನಿಗೆ ಭಕ್ತಿಭಾವದ ನಮನ

Public TV
1 Min Read
MODI VISIT LUMBINI

ಕಠ್ಮಂಡು: ನೇಪಾಳದ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ (ಲುಂಬಿನಿ ವನ) ಭೇಟಿ ನೀಡಿ ಭಕ್ತಿಭಾವದ ನಮನ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಹಾಗೂ ಅವರ ಪತ್ನಿ ಡಾ.ಅರ್ಜು ರಾಣಾ ದೇವುಬಾ ಅವರೊಂದಿಗೆ ಇಲ್ಲಿನ ಮಾಯಾ ದೇವಿ ದೇವಾಲಯದ ಆವರಣದಲ್ಲಿರುವ ಬುದ್ಧನ ಜನ್ಮದ ಗುರುತಿನ ಕಲ್ಲಿಗೆ ಗೌರವ ಸಲ್ಲಿಸಿದ್ದಾರೆ. ಈ ವೇಳೆ ಬೌದ್ಧ ವಿಧಿ ವಿಧಾನಗಳ ಪ್ರಕಾರ ಪೂಜಾ ಕೈಂಕರ್ಯವನ್ನೂ ನೆರವೇರಿಸಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಮೀಸಲಾತಿ ನಿಲ್ಲಿಸುತ್ತೇವೆ – ತೆಲಂಗಾಣ ಸರ್ಕಾರದ ವಿರುದ್ಧ ಶಾ ಗುಡುಗು

ಅಲ್ಲದೇ ಪ್ರಧಾನಿ ಮೋದಿ ಅವರು, ದೆಹಲಿ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟಕ್ಕೆ (IBC) ಸೇರಿದ ಜಾಗದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಭಾಗವಹಿಸಿದರು. ಇದನ್ನೂ ಓದಿ: 18ನೇ ಶತಮಾನದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂಗೆ ಸಂತನ ಪಟ್ಟ!

ಈ ನಡುವೆ, ಉಭಯ ನಾಯಕರು ದೇವಾಲಯದ ಪಕ್ಕದಲ್ಲಿರುವ ಅಶೋಕ ಸ್ತಂಭದ ಬಳಿಯ ದೀಪಗಳನ್ನು ಬೆಳಗಿಸಿದರು. ಕ್ರಿಸ್ತಪೂರ್ವ 249 ರಲ್ಲಿ ಚಕ್ರವರ್ತಿ ಅಶೋಕನಿಂದ ಈ ಸ್ತಂಭವು ಸ್ಥಾಪಿಸಲ್ಪಟ್ಟಿದೆ. ಲುಂಬಿನಿಯು ಭಗವಾನ್ ಬುದ್ಧನ ಜನ್ಮಸ್ಥಳವಾಗಿದೆ ಎಂಬುದನ್ನು ಹೇಳುವ ಮೊದಲ ಶಿಲಾಶಾಸನವನ್ನು ಈ ಸ್ತಂಭ ಹೊಂದಿದೆ.

ಇದೇ ವೇಳೆ, 2014ರಲ್ಲಿ ಮೋದಿ ಲುಂಬಿನಿ ವನಕ್ಕೆ ಕೊಡುಗೆಯಾಗಿ ನೀಡಿದ್ದ ಬೋಧಿ ವೃಕ್ಷದ ಸಸಿಗೆ ಉಭಯ ನಾಯಕರು ನೀರೆರೆದರು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ಖಾತೆಯಲ್ಲಿ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.

2014ರಿಂದ ಈವೆರೆಗೆ 5ನೇ ಬಾರಿಗೆ ನೇಪಾಳಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಜಲವಿದ್ಯುತ್, ಅಭಿವೃದ್ಧಿ ಮತ್ತು ಸಂಪರ್ಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಲು ಅವರು ನೇಪಾಳ ಪ್ರಧಾನಿ ಬಹದ್ದೂರ್ ದೇವುಬಾ ಅವರೊಂದಿಗೆ ಸಭೆ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *