ಸಿದ್ದು, ಡಿಕೆಶಿ ಇಬ್ಬರಿಗೂ ಮುಸ್ಲಿಮರೇ ಬೇಕು: ಪ್ರತಾಪ್ ಸಿಂಹ

Public TV
1 Min Read
Pratap Sinha

– ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತಾಲಿಬಾನ್ ಸರ್ಕಾರ ಬರುತ್ತೆ
-ಕಾಂಗ್ರೆಸ್‍ನಲ್ಲಿ ಈಗ ಎರಡು ಟೀಂ ಇದೆ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಮುಸ್ಲಿಮರೇ ಬೇಕು ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್ ನಾಯಕತ್ವದ ಕುರಿತು ಮಾತನಾಡಿದ ಅವರು, ಸಿದ್ದು, ಡಿಕೆಶಿ ಇಬ್ಬರಿಗೂ ಸಾಬ್ರೇ ಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತಾಲಿಬಾನ್ ಸರ್ಕಾರ ಬರುತ್ತೆ. ಸಿದ್ದರಾಮಯ್ಯ ಅವರಿಗೆ ಸಿಎಂ ಆಗಿದ್ದಾಗ ಯಧುವಂಶದವರು ನೆನಪಾಗಲಿಲ್ಲ. ಯಧುವಂಶ ನಿರ್ವಂಶ ಮಾಡಲು ಹೊರಟ ಅವರು ಟಿಪ್ಪು ಜಯಂತಿ ಮಾಡಿದ್ರು ಎಂದು ಆಕ್ರೋಶ ಹೊರಹಾಕಿದರು.

SIDDU DKSHI

ಸಿದ್ದರಾಮಯ್ಯ ಅವರಿಗೆ ಕಾನೂನು ಪದವಿ ಕೊಟ್ಟ ವಿ.ವಿ ನಾಲ್ವಡಿ ಅವರು ಕಟ್ಟಿಸಿದ್ದು. ನಾಲ್ವಡಿ ಅವರು KRS ಡ್ಯಾಂ ಕಟ್ಟಿ, ನೀರು ಕೊಟ್ರು. ಆದರೂ ಅವರಿಗೆ ನೆನಪಾಗಿದ್ದು, ಹೈದರಾಲಿ ಮಗ ಟಿಪ್ಪು ಮಾತ್ರ. ಸಿದ್ದರಾಮಯ್ಯ ಅವರು 5 ವರ್ಷದಲ್ಲಿ ಏನು ಘನಂಧಾರಿ ಕೆಲಸ ಮಾಡಿದ್ರು. ಡಿಕೆಶಿ ವಿರುದ್ಧ ಒಳಗಿಂದಲೇ ಸಂಚು ಮಾಡ್ತಿದ್ದಾರೆ. ಡಿಕೆಶಿ ಅವರನ್ನು ತುಳಿದು ಮತ್ತೆ ಸಿಎಂ ಆಗಲು ಹೊರಟಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೆ ಸಕ್ರಿಯವಾಯ್ತ ದರೋಡೆ ಪ್ರಕರಣಗಳು?

Pratap Sinha 1

ಕಾಂಗ್ರೆಸ್ಸಿನಲ್ಲಿ ಇವತ್ತು ಎರಡು ಟೀಂ ಇದೆ. ಒಂದು ಸಿದ್ದರಾಮಯ್ಯ ಟೀಂ, ಮತ್ತೊಂದು ಡಿ.ಕೆ.ಶಿವಕುಮಾರ್ ಟೀಂ. ಸಿದ್ದರಾಮಯ್ಯ ಅವರ ಟೀಂನ ವೈಸ್ ಕ್ಯಾಪ್ಟನ್ ಗೋರಿಪಾಳ್ಯದ ಬಸ್ಸು ಮತ್ತು ಜಮೀರಣ್ಣ. ಡಿ.ಕೆ.ಶಿವಕುಮಾರ್ ಟೀಂನ ವೈಸ್ ಕ್ಯಾಪ್ಟನ್ ನಲಪಾಡ್. ಈ ಹಿಂದೆ ಫರ್ಜೀ ಕೆಫೆಯಲ್ಲಿ ನಲಪಾಡ್ ಅವರು ಪುಂಡಾಟಿಕೆ ಮಾಡಿದ್ದರು. ಇವರಿಬ್ಬರಿಗೂ ಸಾಬ್ರೇ ಬೇಕು, ಕಾಂಗ್ರೆಸ್ಸಿನಲ್ಲಿ ಹಿಂದೂಗಳಿಗೆ ಯಾರಿದ್ದಾರೆ ಎಂದು ಪ್ರಶ್ನಿಸಿದರು.

BJP CONGRESS FLAG

ಹಿಂದೂಗಳ ಪರವಾಗಿ ಧನಿ ಎತ್ತುವವರು ಕಾಂಗ್ರೆಸ್ಸಿನಲ್ಲಿ ಯಾರಿದ್ದಾರೆ? ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ತಾಲಿಬಾನಿ ಸರ್ಕಾರ ಬರುತ್ತೆ ಹೊರತು ಕನ್ನಡಿಗರ ಸರ್ಕಾರ ಬರಲ್ಲ. ಈ ಬಗ್ಗೆ ನಾವು ಇವತ್ತಿನಿಂದಲೇ ಎಚ್ಚೆತ್ತುಕೊಳ್ಳಬೇಕು. ಮತ್ತೆ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಾವು, ನೀವೆಲ್ಲ ಕೆಲಸ ಮಾಡೋಣ ಎಂದು ಕರೆಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *