ಸನ್ನಿ ಲಿಯೋನ್ ಮೂರು ಮಕ್ಕಳ ತಾಯಿ, ನೂರಾರು ಕೋಟಿ ಒಡತಿ : ಜಸ್ಟ್ @ 40

Public TV
2 Min Read
suny leaon 1

ಮಾದಕ ಚೆಲುವೆ, ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಇಂದು 41ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಒಂದಷ್ಟು ಸಮಾಜಮುಖಿ ಕೆಲಸಗಳ ಮೂಲಕ ಅರ್ಥಪೂರ್ಣವಾಗಿ ಬರ್ತಡೇ ಆಚರಿಸಿಕೊಂಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

suny leaon 3

13 ಮೇ 1981ರಲ್ಲಿ ಕೆನಡಾದಲ್ಲಿ ಜನಿಸಿರುವ ಈ ಚೆಲುವೆಗೆ ತಂದೆ ತಾಯಿ ಇಟ್ಟ ಹೆಸರು ಕರಂಜಿತ್ ಕೌರ್. ಜರ್ಮನಿಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದವಳಿಗೆ ನೀಲಿ ಚಿತ್ರ ಜಗತ್ತು ಸೆಳೆದದ್ದು ಕೇವಲ ಬಡತನದ ಕಾರಣಕ್ಕಾಗಿ. ಮಗಳು ಜಗತ್ತೇ ಗುರುತಿಸುವಂತಹ ವ್ಯಕ್ತಿಯಾಗಬೇಕು ಎನ್ನುವುದು ಪಾಲಕರ ಆಸೆಯಾಗಿತ್ತು. ಸ್ವತಃ ಸನ್ನಿಗೆ ನರ್ಸ್ ಆಗುವ ಕನಸು. ಆದರೆ, ವಿಧಿ ಕರೆದುಕೊಂಡು ಹೋಗಿದ್ದು ಕತ್ತಲೆಯ ಜಗತ್ತಿಗೆ.

suny leaon 5

ನೀಲಿ ಚಿತ್ರಗಳಲ್ಲಿ ಸನ್ನಿ ನಟಿಸುತ್ತಿದ್ದರೂ, ಅಲ್ಲಿಯೂ ಮಡಿವಂತಿಕೆಯನ್ನೇ ಕಾಪಾಡಿಕೊಂಡು ಬಂದರು. ಅದು ಇಷ್ಟವಿಲ್ಲದ ವೃತ್ತಿಯಾಗಿದ್ದರಿಂದ ಅಲ್ಲಿಂದ ಬೇಗ ಕಳಚಿಕೊಂಡು ಬಂದು ಬಿಟ್ಟರು. ಅದೇ ವೃತ್ತಿಯಲ್ಲೇ ಇದ್ದ ಹುಡುಗನನ್ನೇ ಮದುವೆ ಮಾಡಿಕೊಂಡು ಸದ್ಯ ಸುಖಿ ಸಂಸಾರಿ. ಮತ್ತು ಕೆಟ್ಟ ದಿನಗಳನ್ನು ಮರೆತು, ಹೊಸ ಬದುಕನ್ನು ಕಟ್ಟಿಕೊಂಡ ಗಟ್ಟಿಗಿತ್ತಿ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

suny leaon 6

ನೀಲಿ ಚಿತ್ರಗಳನ್ನು ಮಾಡುವಾಗ ಬದುಕು ಅಷ್ಟೊಂದು ಸರಳವಾಗಿ ಇರಲಿಲ್ಲ. ಅವು ನನ್ನ ಕಷ್ಟದ ದಿನಗಳು ಆಗಿದ್ದವು. ಒಂದು ಕಷ್ಟವನ್ನು ಸರಿ ಪಡಿಸಿಕೊಳ್ಳಲು ಮತ್ತೊಂದು ಕಷ್ಟವನ್ನೇ ಆಯ್ಕೆ ಮಾಡಿಕೊಂಡೆ. ಆದರೆ, ಆ ಬದುಕಿನ ಬಗ್ಗೆ ನನಗೆ ಯಾವುದೇ ದೂರುಗಳಲ್ಲಿ ಅಲ್ಲಿಂದಲೇ ನಾನು ಅನ್ನ ತಿಂದಿದ್ದೇನೆ. ಆ ವೃತ್ತಿಯ ಬಗ್ಗೆ ಅಗೌರವ ತೋರಿಸಲಾರೆ ಎಂದು ಅಡಲ್ಟ್ ಇಂಡಸ್ಟ್ರಿ ಕುರಿತು ಈ ಹಿಂದೆಯೇ ಮಾತನಾಡಿದ್ದಾರೆ ಸನ್ನಿ. ಆದರೆ, ಅಲ್ಲಿಂದ ಕಳಚಿಕೊಂಡು ಬರುವುದು ಅಸಾಧ್ಯವಾಗಿತ್ತು. ಆದರೂ, ದಾಟಿ ಬಂದೆ ಎಂದೂ ತಮ್ಮ ಕಹಿ ನೆನಪುಗಳನ್ನು ಸಾಕಷ್ಟು ಬಾರಿ ಹಂಚಿಕೊಂಡಿದ್ದಾರೆ.

suny leaon 2

ಸದ್ಯ ಸನ್ನಿ ಮೂರು ಮಕ್ಕಳ ತಾಯಿ. ತಮ್ಮದೇ ಆದ ಕಂಪೆನಿಯನ್ನು ಕಟ್ಟಿಕೊಂಡಿದ್ದಾರೆ. ಸುಗಂಧ ದ್ರವ್ಯ ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸುತ್ತಾರೆ. ಜತೆಗೆ ಬಾಲಿವುಡ್, ಕನ್ನಡ ಸೇರಿದಂತೆ ಹಲವು ಚಿತ್ರಗಳಲ್ಲೂ ಸನ್ನಿ ನಟಿಸಿದ್ದಾರೆ. ಮಾಡೆಲಿಂಗ್, ಕಿರುತೆರೆ ಜಗತ್ತಿನಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

suny leaon 4 1

ಅನಾಥ ಮಕ್ಕಳನ್ನು ದತ್ತು ಪಡೆದುಕೊಂಡು ಸುಖಿ ಅಮ್ಮ ಆಗಿದ್ದಾರೆ. ನೆರೆ, ಯುದ್ಧ ಸಂದರ್ಭದಲ್ಲಿ ಧಾರಾಳವಾಗಿ ಸಹಾಯ ಮಾಡಿ, ಕಷ್ಟದಲ್ಲಿ ಇದ್ದವರಿಗೆ ನೆರವಾಗಿದ್ದಾರೆ. ಹೀಗಾಗಿಯೇ ಅನೇಕ ಕಡೆ ಸನ್ನಿ ಲಿಯೋನ್ ಅಭಿಮಾನಿ ಸಂಘಗಳನ್ನು ಕಾಣಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *