BBMP ಚುನಾವಣೆ ಘೋಷಣೆ ಮಾಡುವಂತೆ ಆಯೋಗಕ್ಕೆ ಕಾಂಗ್ರೆಸ್ ಮನವಿ

Public TV
1 Min Read
BBMP 2

ಬೆಂಗಳೂರು: ಸುಪ್ರೀಂಕೋರ್ಟ್ ದೇಶದ ಎಲ್ಲ ಸ್ಥಳೀಯ ಸಂಸ್ಥೆಗಳು ಚುನಾವಣೆ ನಡೆಸಬೇಕು ತೀರ್ಪು ನೀಡಿದ ಹಿನ್ನೆಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ ಬಿಬಿಎಂಪಿ ಚುನಾವಣೆ ಘೋಷಣೆ ಮಾಡಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿರವರು, ಶಾಸಕರಾದ ರಿಜ್ವಾನ್ ಆರ್ಹದ್, ವಿಧಾನಪರಿಷತ್ ಸದಸ್ಯರುಗಳಾದ ಯು.ಬಿ.ವೆಂಕಟೇಶ್, ಪಿ.ಆರ್.ರಮೇಶ್, ಮಾಜಿ ಲೋಕಸಭಾ ಸದಸ್ಯರಾದ ವಿ.ಎಸ್.ಉಗ್ರಪ್ಪ ಮತ್ತು ಮಾಜಿ ಮಹಾಪೌರರಾದ ಗಂಗಾಬಿಕೆ ಮಲ್ಲಿಕಾರ್ಜುನ್, ಮಾಜಿ ಆಡಳಿತ ಪಕ್ಷದ ನಾಯಕರುಗಳಾದ ಎಮ್.ಶಿವರಾಜು, ಅಬ್ದುಲ್ ವಾಜಿದ್, ರಿಜ್ವಾನ್ ನವಾಬ್, ಸತ್ಯನಾರಾಯಣ್ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್, ಬೆಂಗಳೂರುನಗರ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರುಗಳಾದ ರಾಜ್ ಕುಮಾರ್, ಶೇಖರ್,ಜಿ.ಕೃಷ್ಣಪ್ಪ ಅವರು ಮನವಿ ಸಲ್ಲಿಸಿದರು.

ramalinga reddy

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿರವರು ಮಾತನಾಡಿ, ಬೆಂಗಳೂರುನಗರ ವಾರ್ಡ್ ವಿಂಗಡನೆ ಮಾಡಲು ಕಾಂಗ್ರೆಸ್ ಪಕ್ಷ ಸಹಕಾರ ನೀಡಲಾಯಿತು. ಅದರೆ ಬಿಜೆಪಿ ಪಕ್ಷ ತಮಿಷ್ಟದ ತಕ್ಕಂತೆ ವಾರ್ಡ್ ವಿಂಗಡನೆ ಮಾಡಲು ಹೋರಟಿತು. ಬಿಬಿಎಂಪಿ ಚುನಾವಣೆ ಮೀಸಲಾತಿಯನ್ನ ಕಾಂತ್ ರಾಜ್ ಆಯೋಗ ತೀರ್ಮಾನದಂತೆ ಕೈಗೊಳ್ಳಲಿ. ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ರಾಜ್ಯ ಸರ್ಕಾರ ಚುನಾವಣೆ ನಡೆಸಲಿ. ಭಕ್ತವತ್ಸಲ ಸಮಿತಿ ವರದಿ ಕಾಯುವುದು ಬೇಡ ಇದರಿಂದ ಚುನಾವಣೆ ವಿಳಂಬವಾಗುತ್ತದೆ ಎಂದು ಹೇಳಿದರು.

Congress flag 2 e1573529275338

ಎಮ್.ಶಿವರಾಜುರವರು ಮಾತನಾಡಿ, ರಾಜ್ಯ ಸರ್ಕಾರ 20 ತಿಂಗಳು ಕಳೆದರೆ ಡಿಲಿಮಿಟಿಶನ್ ಮೀನಾಮೇಷ ಎಣಿಸುತ್ತಿದೆ. ಸುಪ್ರೀಂಕೋರ್ಟ್ ಆದೇಶದಂತೆ ಚುನಾವಣೆ ಆಯೋಗ ಚುನಾವಣೆ ದಿನಾಂಕ ಘೋಷಣೆ ಮಾಡಲಿ ಮತ್ತು ರಾಜ್ಯ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗದ ಮೀಸಲಾತಿ ನಿರ್ಣಯ ಮಾಡಿ ಚುನಾವಣೆ ನಡೆಸಲಿ ಎಂದು ತಿಳಿಸಿದರು. ಇದನ್ನೂ ಓದಿ: ರಮ್ಯಾ ಆರೋಗ್ಯ ಸ್ಥಿತಿ ಸರಿಯಿಲ್ಲ, ತಪಾಸಣೆ ಮಾಡ್ಲಿ ಅನ್ನೋ ನಲಪಾಡ್ ಹೇಳಿಕೆ ಸರಿಯಲ್ಲ: ರಿಜ್ವಾನ್ ಅರ್ಷದ್

Supreme Court

ಅಬ್ದುಲ್ ವಾಜಿದ್ ರವರು ಮಾತನಾಡಿ, ಸುಪ್ರೀಂಕೋರ್ಟ್ ಸ್ಥಳೀಯ ಚುನಾವಣೆ ಬಗ್ಗೆ ಸ್ಪಷ್ಟವಾಗಿ ಆದೇಶ ನೀಡಿದ್ದಾರೆ. ಕಳೆದ ಎರಡು ವರ್ಷದಿಂದ ಜನಪ್ರತಿನಿಧಿಗಳು ಅಭಿವೃದ್ದಿ ಕುಂಠಿತವಾಗಿದೆ. ಪ್ರಜಾಪ್ರಭುತ್ವ ರಕ್ಷಣೆಗೆ ತತಕ್ಷಣ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಿ ಎಂದು ಮನವಿ ಮಾಡಲಾಗಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *