ಮಡಿಕೇರಿ: ಪುತ್ರಿಯ ವಿವಾಹ ಮುಗಿಸಿ ಪತಿಯ ಮನೆಗೆ ಕಳುಹಿಸಿದ ಕೆಲವೇ ಹೊತ್ತಿನಲ್ಲಿ ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದಿದೆ.
ಕಿಬ್ಬೆಟ್ಟ ಗ್ರಾಮದ ಕೃಷಿಕ ಚಿನ್ನಪ್ಪ (60) ಮೃತ ವ್ಯಕ್ತಿ. ಕಲ್ಯಾಣ ಮಂಟಪದಲ್ಲಿ ತಮ್ಮ ದ್ವಿತೀಯ ಪುತ್ರಿಯ ವಿವಾಹ ಸಮಾರಂಭವನ್ನು ಮುಗಿಸಿ ವಧು-ವರರನ್ನು ಗೋಕಾಕ್‌ಗೆ ಕಳುಹಿಸಿದ ನಂತರ ಘಟನೆ ನಡೆದಿದೆ. ಇದನ್ನೂ ಓದಿ: ಕೆಪಿಸಿಸಿ ವಕ್ತಾರ ದಿವಾಕರ್ ಆಪ್ ಸೇರ್ಪಡೆ
ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣವೇ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಕಿಬ್ಬೆಟ್ಟ ಗ್ರಾಮದಲ್ಲಿ ನಡೆಯಲಿದೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಲ್ಲಿ ಈಗ ನೀರವ ಮೌನ ಆವರಿಸಿದೆ. ಇದನ್ನೂ ಓದಿ: ನಟಿ ರಮ್ಯಾ ಕುರ್ಚಿಗೆ ಟವಲ್ ಹಾಕಲು ಬಂದಿದ್ದಾರೆ: ನಲಪಾಡ್ ಕಿಡಿ