ರಾಜಕೀಯ ವಿಶ್ಲೇಷಣೆಯಿಂದ ರಮ್ಯಾ ದೂರ ಉಳಿಯಬೇಕು: ಚನ್ನರಾಜ ಹಟ್ಟಿಹೊಳಿ

Public TV
1 Min Read
RAMYA HATTIHOLI

ಬೆಳಗಾವಿ: ಮಾಜಿ ಸಂಸದೆ ರಮ್ಯಾ ಅವರು ರಾಜಕೀಯ ವಿಶ್ಲೇಷಣೆಯಿಂದ ದೂರ ಉಳಿಯಬೇಕು ಎಂದು ಕಾಂಗ್ರೆಸ್ ಎಂಎಲ್‍ಸಿ ಚನ್ನರಾಜ ಹಟ್ಟಿಹೊಳಿ ಆಕ್ರೋಶ ಹೊರಹಾಕಿದ್ದಾರೆ.

ನಗರದಲ್ಲಿ ಅಶ್ವತ್ಥ್ ನಾರಾಯಣ್ ಹಾಗೂ ಎಂ.ಬಿ.ಪಾಟೀಲ್ ಭೇಟಿ ಬಗ್ಗೆ ಡಿಕೆಶಿ ಹೇಳಿಕೆಗೆ ರಮ್ಯಾ ಪ್ರತಿಕ್ರಿಯೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಮ್ಯಾ ಅವರು ಬಹಳ ದಿನಗಳಿಂದ ರಾಜಕಾರಣದಿಂದ ದೂರ ಉಳಿದಿದ್ದಾರೆ. ಈಗ ಮತ್ತೆ ಏಕಾಏಕಿ ಬಂದು ಅವರೇಕೆ ಸ್ಟೇಟ್‍ಮೆಂಟ್ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್‌ ಕುಮಾರ್‌ ನೇಮಕ

dk shivakumar mb patil

ಎಂ.ಬಿ.ಪಾಟೀಲ್ ಸಾಹೇಬ್ರು ಬಹಳ ದೊಡ್ಡವರು, ಡಿಕೆಶಿ ಸಾಹೇಬ್ರು ಬಹಳ ದೊಡ್ಡವರು. ವೈಯಕ್ತಿಕವಾಗಿ ನಾವು ಅನೇಕ ಸಾರಿ ಯಡಿಯೂರಪ್ಪ ಸಾಹೇಬ್ರ ಭೇಟಿಯಾಗಿದ್ದೇವೆ. ವೈಯಕ್ತಿಕವಾಗಿ ಬೊಮ್ಮಾಯಿ ಸಾಹೇಬರನ್ನು ಭೇಟಿಯಾಗಿದ್ದೇವೆ. ವೈಯಕ್ತಿಕ ಸಂಬಂಧ ಬೇರೆ ರಾಜಕಾರಣ ಸಂಬಂಧ ಬೇರೆ. ಎಂ.ಬಿ.ಪಾಟೀಲ್ ಅಶ್ವತ್ಥ್ ನಾರಾಯಣ್ ಭೇಟಿಯಾಗಿದ್ರಲ್ಲಿ ಏನು ತಪ್ಪಿಲ್ಲ. ಅವರೆಲ್ಲ ಬಹಳ ದೊಡ್ಡವರು, ಭೇಟಿಯಾದ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನನ್ನ ಮಗ ಹಾಗೂ ಅವರ ಮನೆಯಲ್ಲಿರೋರಿಗೆ ಫ್ರೆಂಡ್ಶಿಪ್ ಇದೆ. ನಾವು ಅವರ ಮನೆಗೆ ಊಟಕ್ಕೆ ಹೋಗ್ತೇವೆ, ಅವರು ನಮ್ಮ ಮನೆಗೆ ಊಟಕ್ಕೆ ಬರ್ತಾರೆ ಎಂದಿದ್ದಾರೆ.

ASHWATH NARAYAN 1

ಒಟ್ಟಿನಲ್ಲಿ ಅಶ್ವತ್ಥ್ ನಾರಾಯಣ್ – ಎಂ.ಬಿ.ಪಾಟೀಲ್ ಭೇಟಿ ಬಗ್ಗೆ ಬೇರೆ ಅರ್ಥ ಕಲ್ಪಿಸೋದು ಸಮಂಜಸವಲ್ಲ ಎಂದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಲೋಕಾರ್ಪಣೆಯಾಗಲಿದೆ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ

Share This Article
Leave a Comment

Leave a Reply

Your email address will not be published. Required fields are marked *