ಜೆಡಿಎಸ್ ಭದ್ರ ಕೋಟೆಯಲ್ಲಿ ಬಿಜೆಪಿ ಶಕ್ತಿ ಪ್ರರ್ಶನಕ್ಕೆ ಸಿದ್ಧತೆ

Public TV
1 Min Read
BJP FLAG

ಮಂಡ್ಯ: ಜೆಡಿಎಸ್ ಭದ್ರ ಕೋಟೆ ಎನಿಸಿಕಕೊಂಡಿರುವ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಶತಾಯಗತಾಯ ಕಮಲವನ್ನು ಅರಳಿಸಬೇಕೆಂದು ಬಿಜೆಪಿ ಸಾಕಷ್ಟು ಸರ್ಕಸ್ ಮಾಡ್ತಾ ಇದೆ. ಈ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್‍ವೊಂದನ್ನು ಬಿಜೆಪಿ ಮಾಡಿಕೊಂಡಿದೆ.

JDS 1

ಇಷ್ಟು ವರ್ಷಗಳ ಕಾಲ ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ನಾಮಕಾವಸ್ತೆಗೆ ಮಾತ್ರ ಅಭ್ಯರ್ಥಿ ಹಾಕಿ, ನಮಗೂ ಮಂಡ್ಯಗೂ ಸಂಬಂಧವಿಲ್ಲ ಎಂದು ಸುಮ್ಮನೆ ಇತ್ತು. ಆದರೆ ಕಳೆದ ಕೆಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಗೆಲುವು ಸಾಧಿಸಿದ ಬಳಿಕ ಮಂಡ್ಯ ಜಿಲ್ಲೆಯಲ್ಲಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಆಸೆ ಬಿಜೆಪಿಗೆ ಬಂದಿದೆ. ಹೀಗಾಗಿ ಮಂಡ್ಯದಲ್ಲಿ ತಳ ಮಟ್ಟದಿಂದ ಪಕ್ಷ ಕಟ್ಟಲು ಬಿಜೆಪಿ ಮುಂದಾಗಿದ್ದು, ಇದರ ಜವಾಬ್ದಾರಿಯನ್ನು ಮಾಜಿ ಸಚಿವ ಯೋಗೇಶ್ವರ್‍ಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಮಟ್ಟಗಳಲ್ಲಿ ಪಕ್ಷದ ಕಾರ್ಯಕ್ರಮ ಮಾಡಿ ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಕೆಲಸವಾಗುತ್ತಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಮಾತ್ರವಲ್ಲ ಹೆಬ್ಬಾಳ್ಕರ್ ಕೂಡಾ ಸಾಲ ಉಳಿಸಿಕೊಂಡಿದ್ದಾರೆ : ಸೋಮಶೇಖರ್

AMITSHAH

ಮುಂದಿನ ತಿಂಗಳು ಮಂಡ್ಯದಲ್ಲಿ ಬೃಹತ್ ಬಿಜೆಪಿ ಸಮಾವೇಶ ಜರುಗಲಿದ್ದು, ಈ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸೇರದಂತೆ ಮೊದಲಾದವರು ಆಗಮಿಸಲಿದ್ದಾರೆ. ಈ ಸಮಾವೇಶ ಯಶಸ್ವಿಯಾಗಬೇಕೆಂದು ಸದ್ಯ ಮಂಡ್ಯ ಜಿಲ್ಲೆಯ ತಾಲೂಕು ಹಾಗೂ ಹೋಬಳಿಯ ಮಟ್ಟದಲ್ಲಿ ಬಿಜೆಪಿ ಸಣ್ಣ ಸಮಾವೇಶಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಜೆಡಿಎಸ್‍ನಲ್ಲಿದ್ದ ಲಕ್ಷ್ಮೀ ಅಶ್ವಿನ್‍ಗೌಡ, ಅಶೋಕ್ ಜಯರಾಂ ಬಿಜೆಪಿಗೆ ಕರೆತರಲಾಗಿದೆ. ಮುಂದಿನ ತಿಂಗಳು ನಡೆಯುವ ಬೃಹತ್ ಸಮಾವೇಶದಲ್ಲಿ ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಇಂಡುವಾಳು ಸಚ್ಚಿದಾನಂದ ಸೇರದಂತೆ ಮೊದಲಾದವರು ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿ ಇವೆ.

Sumalatha JDS MLA 5

ಜೆಡಿಎಸ್ ಭದ್ರಕೋಟೆ ಎಂದು ಬಿಂಬಿತವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಿಸಬೇಕೆಂದು ಬಿಜೆಪಿ ಕಲಿಗಳು ತಮ್ಮದೇ ಆದ ಸ್ಟಾಟರ್ಜಿ ಮಾಡುತ್ತಿದ್ದಾರೆ. ಇವರ ಈ ತಂತ್ರ ಪ್ರತಿತಂತ್ರಗಳು ಮಂಡ್ಯ ಜಿಲ್ಲೆಯ ಮತದಾರರ ಮುಂದೆ ಹೇಗೆ ವರ್ಕೌಟ್ ಆಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ

Share This Article
Leave a Comment

Leave a Reply

Your email address will not be published. Required fields are marked *