Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿಇಓಗಳು ನನ್ನ ಕಣ್ಗಾವಲಿನಲ್ಲಿ ಇರುತ್ತೀರಾ, ಬಜೆಟ್ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಸಹಿಸಲ್ಲ: ಬೊಮ್ಮಾಯಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಸಿಇಓಗಳು ನನ್ನ ಕಣ್ಗಾವಲಿನಲ್ಲಿ ಇರುತ್ತೀರಾ, ಬಜೆಟ್ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಸಹಿಸಲ್ಲ: ಬೊಮ್ಮಾಯಿ

Karnataka

ಸಿಇಓಗಳು ನನ್ನ ಕಣ್ಗಾವಲಿನಲ್ಲಿ ಇರುತ್ತೀರಾ, ಬಜೆಟ್ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಸಹಿಸಲ್ಲ: ಬೊಮ್ಮಾಯಿ

Public TV
Last updated: May 9, 2022 11:35 pm
Public TV
Share
5 Min Read
basavaraj bommai meeting 2
SHARE

ಬೆಂಗಳೂರು: ನನ್ನ ಸರ್ಕಾರ ಬಜೆಟ್ ಘೋಷಿತ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬ ಧೋರಣೆ ಸಹಿಸುವುದಿಲ್ಲ. ನೀವೆಲ್ಲರೂ ನನ್ನ (ರಡಾರ್) ಕಣ್ಗಾವಲಿನಲ್ಲಿ ಇದ್ದೀರಿ. ನಿಮ್ಮೆಲ್ಲರನ್ನು ನಾನು ಗಮನಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಸಿಇಒಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವೆಲ್ಲರೂ ಯುವಕರಿದ್ದೀರಿ. ಒಳ್ಳೆಯ ಕೆಲಸ ಮಾಡಲು ದೇವರು ನಿಮಗೆ ಇದೊಂದು ಅವಕಾಶ ನೀಡಿದ್ದಾನೆ. ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಪ್ರತ್ಯೇಕ ಆಯೋಗ ರಚನೆ: ಸಿಎಂ

meeting

ಬಡವರ, ದೀನ ದಲಿತರ ಪರವಾದ ಕೆಲಸಗಳನ್ನು ಮಾಡಿ. ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣದಲ್ಲಿ ನಿಮ್ಮ ಕೊಡುಗೆಯನ್ನು ನೀಡಿ. ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡೋಣ. ನಾನು ನಿಮ್ಮ ಜೊತೆ ಇದ್ದೇನೆ. ಆದರೆ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ಭ್ರಷ್ಟಾಚಾರವನ್ನು ಎಂದೂ ಸಹಿಸುವುದಿಲ್ಲ. ಅದಕ್ಕೆ ಅವಕಾಶವನ್ನೂ ಮಾಡಿಕೊಡುವುದಿಲ್ಲ. ಈ ಮಾತುಗಳನ್ನು ನೀವು ಸ್ಪಷ್ಟವಾಗಿ ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಸಿಎಂ ಸೂಚನೆ ನೀಡಿದರು.

ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಪುನರ್ ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ಶಾಲಾ ಮಕ್ಕಳಿಗೆ, ಮಹಿಳಾ ಸಬಲೀಕರಣ, ಸ್ತ್ರೀಶಕ್ತಿ ಸಂಘಗಳಿಗೆ ವಿಶೇಷ ಕಾರ್ಯಕ್ರಮ ಇವೆಲ್ಲ ಪ್ರಮುಖ ಕಾರ್ಯಕ್ರಮಗಳು. ಸಾರ್ವಜನಿಕರಿಗೆ ಒಳಿತು ಮಾಡುವ ನಿರ್ಧಾರಗಳನ್ನು ಧೈರ್ಯವಾಗಿ ತೆಗೆದುಕೊಳ್ಳಿ. ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಪುನರ್ ಸ್ಥಾಪಿಸೋಣ. ನಿಮ್ಮ ಕಾರ್ಯವೈಖರಿಯನ್ನು ಗಮನಿಸಲಾಗುತ್ತದೆ. ಸಾರ್ವಜನಿಕರು ತರುವ ಅರ್ಜಿಗಳಿಗೆ ಪರಿಹಾರ ಕೊಡುವ ಕೆಲಸವಾಗಬೇಕು. ನಿಮ್ಮ ಕಾರ್ಯದಲ್ಲಿ ನಿಖರತೆ ಇರಲಿ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಸಿ.ಟಿ.ರವಿಯ ಹಿಂದುತ್ವಕ್ಕೆ ಮನುಷ್ಯ ಧರ್ಮದ ಪ್ರತಿಪಾದನೆ‌ ಮೂಲಕ‌ ಸಿದ್ದರಾಮಯ್ಯ ಟಕ್ಕರ್ – ಕಾರ್ಯಕ್ರಮದಲ್ಲಿ ಏಟು ಎದಿರೇಟು

ಮುಖ್ಯಮಂತ್ರಿಗಳ ಸಭೆಯ ಹೈಲೈಟ್ಸ್
1. ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ಸಭೆ. ಅಧಿಕಾರದ ವಿಕೇಂದ್ರೀಕರಣವಾಗಿ 3 ದಶಕಗಳ ಮೇಲಾಗಿದೆ. ಅದರ ಲಾಭವನ್ನು ಒಮ್ಮೆ ಹಿಂದುರಿಗಿ ನೋಡಬೇಕಾಗಿದೆ‌. ಕೇಂದ್ರೀಕೃತವಾದ ಆಡಳಿತ ಮಾಡಿದರೆ ಜನರಿಗೆ ಆಡಳಿತದ ಲಾಭ, ಸರ್ಕಾರದ ಕಾರ್ಯಕ್ರಮಗಳು ಮುಟ್ಟುವುದಿಲ್ಲ ಎಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಜನರಿಂದ ಜನರಿಗೋಸ್ಕರ ಆಡಳಿತವಾಗಬೇಕು. ಅಧಿಕಾರದ ಸುತ್ತಲೂ ಜನ ಓಡಾಡಬಾರದು. ಜನರ ಸುತ್ತಲೂ ಅಭಿವೃದ್ಧಿಯಾಗಬೇಕು ಎನ್ನುವ ಕಲ್ಪನೆ.

2. ಬಡವರ ಪರವಾಗಿ ಕೆಲಸ ಮಾಡಲು ಧೈರ್ಯವಾಗಿ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯಬಾರದು. ಎಲ್ಲಾ ಜಿ,ಪಂ ಸಿಇಒಗಳು ಸ್ವತಂತ್ರವಾಗಿ ಕೆಲಸ ಮಾಡಬೇಕು. ಕೆಳಹಂತದ ಅಧಿಕಾರಿಗಳ ಮೇಲೆ ನಿಯಂತ್ರಣವೂ ಇರಬೇಕು. ತಪ್ಪಾದರೆ ಕೇಳುವ ನೈತಿಕತೆ ಇರಬೇಕು. ಲಿಂಕ್ ಡಾಕ್ಯುಮೆಂಟ್ ತೆಗೆದು ನೋಡಬೇಕು. ಜಿಲ್ಲಾ ಪಂಚಾಯತ್ ಸ್ವತಂತ್ರ ಸರ್ಕಾರವಿದ್ದಂತೆ.

3. ಸಿಇಓಗಳು ತಮ್ಮ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ತಮ್ಮ ಅಧಿಕಾರದ ಮಹತ್ವವನ್ನು ಅರಿತು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು.

4. ಪಿಡಿಒಗಳನ್ನು ಶಿಸ್ತಿನಲ್ಲಿಡಬೇಕು. ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಬೇಕು. ನಿಮ್ಮ ಪಾತ್ರ, ಕರ್ತವ್ಯ ಹಾಗೂ ಅಧಿಕಾರದ ಬಗ್ಗೆ ಸ್ಪಷ್ಟತೆ ಇರಬೇಕು. ಸರ್ಕಾರದ ಆಯವ್ಯಯದ ಬಹುತೇಕ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತ್ ಸಿಇಒಗಳು ಅನುಷ್ಠಾನ ಮಾಡುತ್ತಾರೆ.

5. ಬಜೆಟ್ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ರೋಡ್ ಮ್ಯಾಪ್ ಮಾಡಿಕೊಳ್ಳಬೇಕು. ಸಿಇಓಗಳು ಜಿಲ್ಲೆಯ ಸಿಎಸ್ (ಮುಖ್ಯ ಕಾರ್ಯದರ್ಶಿಗಳು)ಗಳಂತೆ ಕಾರ್ಯ ನಿರ್ವಹಿಸಬೇಕು.

6. ಜಿಲ್ಲೆಗಳಲ್ಲಿ ಮನೆ ನಿರ್ಮಾಣ, ಫಲಾನುಭವಿಗಳ ಆಯ್ಕೆ ಶೀಘ್ರವಾಗಿ ಮುಗಿಸಬೇಕು. ಪಡಿತರ ಚೀಟಿ ವಿತರಣೆ, ಶಾಲಾ ಕೊಠಡಿಗಳು, ಆಸ್ಪತ್ರೆಗಳ ವಸ್ತುಸ್ಥಿತಿ ಬಗ್ಗೆ ವರದಿ ನೀಡಬೇಕು.

7. ಆಯಾ ವರ್ಷದ ಕ್ರಿಯಾ ಯೋಜನೆಗಳು ಅದೇ ವರ್ಷದಲ್ಲಿ ಅನುಷ್ಠಾನವಾಗುವುದಿಲ್ಲ. ಅನುಷ್ಠಾನ ಅವಧಿ 10 ತಿಂಗಳೊಳಗೆ ಆಗಬೇಕು ಕಾಲಮಿತಿಯೊಳಗೆ ಕಾರ್ಯಕ್ರಮಗಳ ಅನುಷ್ಠಾನವಾಗಬೇಕೆಂಬ ಧ್ಯೇಯವಿರಬೇಕು. ಯೋಜನೆಯ ಅನುಷ್ಠಾನದ ಎಲ್ಲ ಹಂತಗಳ ಬಗ್ಗೆ ಗಮನಹರಿಸಬೇಕು.

8. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಇಲಾಖೆಯ ಯೋಜನೆಗಳೇ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ನಿರ್ಭರವಾಗಿದೆ. ಇವುಗಳ ಶೀಘ್ರ ಅನುಷ್ಠಾನಕ್ಕೆ ಗಮನಹರಿಸಬೇಕು.

9. ಗ್ರಾಮಪಂಚಾಯತಿಗಳ ಪರಿಶೀಲನೆ ನಡೆಸಬೇಕು. ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಬೇಕು. ಕಚೇರಿಗಳಿಗೆ ಸೀಮಿತವಾಗದೇ ಸ್ಥಳಗಳಿಗೆ ತೆರಳಿ ಪರಿಶೀಲನೆಗಳನ್ನು ಮಾಡಬೇಕು.

10. ರಾಯಚೂರಿನಲ್ಲಿ ಇಷ್ಟು ವರ್ಷಗಳ ಕಾರ್ಯಕ್ರಮಗಳ ಹೊರತಾಗಿಯೂ ಅನೀಮಿಯಾ ಪ್ರಮಾಣದಲ್ಲಿ ಹೆಚ್ಚಳವಿದೆ.

11. ಅಪೌಷ್ಟಿಕತೆ ನಿವಾರಣೆಗೆ ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ.

12. ಎಸ್ ಸಿ ಎಸ್ ಟಿ, ಹಿಂದುಳಿದ ವರ್ಗದ ಯೋಜನೆಗಳು ನಿಗದಿತ ಅವಧಿಯಲ್ಲಿ ಮುಗಿಯಲೇಬೇಕು. ತಳಹಂತದ ಜನರ ಬದುಕನ್ನು ಬದಲಿಸುವ ಇಂತಹ ಯೋಜನೆಗಳ ಅನುಷ್ಠಾನದ ಬಗ್ಗೆ ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸಬೇಕು.

13. ಸಮಾಜ ಕಲ್ಯಾಣ ಕಾರ್ಯಕ್ರಮಗಳು, ಎಸ್ ಸಿ ಎಸ್ ಟಿ, ಹಿಂದುಳಿದ ವರ್ಗದ ಅಭಿವೃದ್ಧಿ ಕಾರ್ಯಕ್ರಮಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ಅಪೌಷ್ಟಿಕತೆ ನಿವಾರಣೆ ಬಗ್ಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕು.

14. ಜಿಲ್ಲೆಗಳಲ್ಲಿ ಇರುವ ಅಪೌಷ್ಟಿಕತೆಯ ಮಟ್ಟ , ಎಂಎಂಆರ್, ಐಎಂಆರ್ ಗಳ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಸರಾಸರಿ ಪೌಷ್ಟಿಕತೆಯ ಮಟ್ಟವನ್ನು ತಲುಪಲು ಸಿಇಓಗಳು ಶ್ರಮಿಸಬೇಕು.

15. ಜಿಲ್ಲೆಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಬೇಕು. ಮಕ್ಕಳಲ್ಲಿ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆಗಳ ಬಗ್ಗೆ ಗಮನಹರಿಸಿ ಇವುಗಳನ್ನು ಅಭಿವೃದ್ಧಿಗೊಳಿಸಲು ಶಾಲೆಗಳಲ್ಲಿ ಆರೋಗ್ಯ ಶಿಬಿರ,ಆಸ್ಪತ್ರೆಗಳ ಸಹಕಾರ ಪಡೆದು ಕಾರ್ಯಕ್ರಮಗಳನ್ನು ಮಾಡಬೇಕು.

16. ಇಂದಿನಿಂದ ಬದಲಾವಣೆಯಾಗಬೇಕು. ಬದಲಾವಣೆ ಎಲ್ಲರಿಂದಲೂ ಆಗಬೇಕು. ಜನಕ್ಕೆ ಈ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡುವಂತೆ ಕೆಲಸ ಮಾಡಬೇಕು. ಸಾಮಾಜಿಕ ಮತ್ತು ಅಭಿವೃದ್ಧಿಯ ಹೊಣೆಗಾರಿಕೆ ಇದೆ.

17. 100 ಪಶು ಚಿಕಿತ್ಸಾಲಯ, 70 ಗೋಶಾಲೆ ನಿರ್ಮಾಣ, ಪುಣ್ಯಕೋಟಿ ದತ್ತು ಯೋಜನೆ, ಕರಾವಳಿಯಲ್ಲಿ ಸಮುದ್ರದಾಳದಲ್ಲಿ ಮೀನುಗಾರಿಕೆ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಶಿಕ್ಷಣ, ಆರೋಗ್ಯ , ಅಪೌಷ್ಟಿಕತೆ ನಿವಾರಣೆಗೆ ಎಸ್.ಡಿ ಪಿಯಲ್ಲಿ , ಕೆಕೆಆರ್ ಡಿಬಿ ಮೂಲಕ ಅನುದಾನ ಒದಗಿಸಿದೆ.

18. ಸುಮಾರು 7000 ಶಾಲಾ ಕೊಠಡಿಗಳ ನಿರ್ಮಾಣ ಸರ್ಕಾರದ ಬೃಹತ್ ಕಾರ್ಯಕ್ರಮವಾಗಿದ್ದು, ಸೂಕ್ತ ರೀತಿಯಲ್ಲಿ ಆಯ್ಕೆ ಮತ್ತು ಅನುಷ್ಠಾನ ಆಗಬೇಕು. ಈ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು.

19. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು, ಸಮಾಜ ಕಲ್ಯಾಣ ಇಲಾಖೆಯಡಿ 100 ವಸತಿ ನಿಲಯಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 50 ವಸತಿ ನಿಲಯಗಳ ನಿರ್ಮಾಣ ಆದ್ಯತೆ ಮೇರೆಗೆ ಕೈಗೊಳ್ಳುವುದು.

20. ನಗರಗಳಲ್ಲಿ ನಮ್ಮ ಕ್ಲಿನಿಕ್ ಅನುಷ್ಠಾನ, ಮುಖ್ಯಮಂತ್ರಿ ವಿದ್ಯಾರ್ಥಿ ಮಾಗದರ್ಶಿನಿ ವೆಬ್ ಸೈಟ್ ಕುರಿತು ಬಡಮಕ್ಕಳಿಗೆ ಮಾರ್ಗದರ್ಶನ ನೀಡಿ.

21. ಮುಖ್ಯಮಂತ್ರಿ ಆರೋಗ್ಯ ವಾಹಿನಿ ಬೀದರ್, ಹಾವೇರಿ, ಚಾಮರಾಜನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗುತ್ತಿದ್ದು, ಸಿಇಓಗಳು ಗಮನ ಹರಿಸಬೇಕು.

22. ಪೌಷ್ಟಿಕ ಕರ್ನಾಟಕ ಅಭಿಯಾನಕ್ಕೆ ಎಸ್ ಡಿ ಪಿ ಹಾಗೂ ಕೆಕೆಆರ್ ಡಿಬಿಯಡಿ ವಿಶೇಷ ಅನುದಾನ ಬಿಡುಗಡೆಯಾಗುತ್ತಿದ್ದು, ತೀವ್ರ ಹಾಗೂ ಸಾಧಾರಣ ಅಪೌಷ್ಟಿಕತೆ ಇರುವ ಜಿಲ್ಲೆಗಳಿಗೆ ಒಂದೇ ರೀತಿಯ ಆಹಾರ ನೀಡುವುದು.

23. ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಗೆ ವಿಶೇಷ ಗಮನ ಹರಿಸುವುದು. ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸ್ಥಾಪಿಸಬೇಕು. ಗ್ರಾಮ ಒನ್ ಜನೋಪಯೋಗಿ ಕಾರ್ಯಕ್ರಮವಾಗಿದ್ದು ಯಶಸ್ವಿಗೊಳಿಸಬೇಕು. ಇದರಿಂದ ಮೇಲಿನ ಹಂತದಲ್ಲಿ ಅರ್ಜಿಗಳ ಹೊರೆ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದರು.

TAGGED:Basavaraj Bommaibudgetgovernment officersmeetingಅಧಿಕಾರಿಗಳ ಸಭೆಬಜೆಟ್ಬಸವರಾಜ ಬೊಮ್ಮಾಯಿಬೆಂಗಳೂರು
Share This Article
Facebook Whatsapp Whatsapp Telegram

Cinema news

YASH 5
ಮುಂಬೈ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ರಾಕಿಭಾಯ್
Cinema Sandalwood
TVK Vijay
ಕರೂರು ಕಾಲ್ತುಳಿತ ಪ್ರಕರಣ – 7 ಗಂಟೆಗೂ ಹೆಚ್ಚು ಕಾಲ ನಟ ವಿಜಯ್‌ಗೆ CBI ಗ್ರಿಲ್
Bengaluru City Cinema Latest Sandalwood Top Stories
Toxic
ಯಶ್ ʻಟಾಕ್ಸಿಕ್ʼ ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!
Bengaluru City Cinema Districts Karnataka Latest Sandalwood Top Stories
Karikaada
ʻಕರಿಕಾಡʼ ಸಿನಿಮಾದ ಮಾದಕ ಸಾಂಗ್‌ಗೆ ಸೊಂಟ ಬಳುಕಿಸಿದ ಕೃತಿ ವರ್ಮಾ
Cinema Latest Sandalwood

You Might Also Like

Bangladesh
Latest

ಬಾಂಗ್ಲಾದಲ್ಲಿ ಮುಂದುವರಿದ ಹಿಂದೂಗಳ ಹತ್ಯೆ ಸರಣಿ – ಆಟೋ ಡ್ರೈವರ್‌, ಗಾಯಕ ಪ್ರೊಲೊಯ್ ಚಾಕಿ ಹತ್ಯೆ

Public TV
By Public TV
5 hours ago
Dharwad 2
Dharwad

ಹಾಡಹಗಲೇ ಇಬ್ಬರು ಮಕ್ಕಳ ಅಪಹರಣ – ಮರಳಿ ಪಾಲಕರ ಮಡಿಲು ಸೇರಿದ ಪುಟಾಣಿಗಳು!

Public TV
By Public TV
5 hours ago
RCB
Cricket

WPL 2026 | ರಾಯಲ್‌ ಆಗಿ ವಾರಿಯರ್ಸ್‌ ಚಾಲೆಂಜ್‌ ಗೆದ್ದ ಬೆಂಗಳೂರು – ನಂ.1 ಪಟ್ಟಕ್ಕೆ ಜಿಗಿದ ಆರ್‌ಸಿಬಿ

Public TV
By Public TV
5 hours ago
Mallikarjun Kharge
Districts

ಡಿಕೆ ಶಿವಕುಮಾರ್‌ ನೀವು ಇಲ್ಲಿ ಹುಟ್ಟೋದು ಬೇಡ, ಅಭಿವೃದ್ಧಿ ಮಾಡಿದ್ರೆ ಸಾಕು: ಮಲ್ಲಿಕಾರ್ಜುನ ಖರ್ಗೆ

Public TV
By Public TV
6 hours ago
M.P Renukacharya
Davanagere

ಬಿಎಸ್‌ವೈನ್ನು ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ: ರೇಣುಕಾಚಾರ್ಯ

Public TV
By Public TV
6 hours ago
Husband And Wife
Crime

8 ವರ್ಷಗಳಿಂದ ಸೆಕ್ಸ್‌ಗೆ ಒಪ್ಪದ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?