ಬಿಎಸ್‍ವೈ, ಅಮಿತ್ ಶಾ, ಬಿಜೆಪಿಯ MLAಗಳು ಜೈಲಿಗೆ ಏಕೆ ಹೋಗಿದ್ರು: ಕಟೀಲ್‍ಗೆ ಡಿಕೆಶಿ ಪ್ರಶ್ನೆ

Public TV
2 Min Read
DKS 1

ಹಾಸನ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಮಿತ್ ಶಾ, ಬಿಜೆಪಿ ಪಾರ್ಟಿಯ ಎಂಎಲ್‍ಎಗಳು ಮಾಜಿ ಮಂತ್ರಿಗಳೆಲ್ಲಾ ಏತಕ್ಕೆ ಜೈಲಿಗೆ ಹೋಗಿದ್ದರು. ಅವರು ಯಾವ ವಚನ ಓದಲು ಹೋಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾಟೀಲ್‍ಗೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

BSY AMITH SHAH

ತಿಹಾರ್ ಜೈಲಿಗೆ ಪುಸ್ತಕ ಓದಲು ಹೋಗಿದ್ದರಾ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಹಾಸನ ಜಿಲ್ಲೆ, ಅರಕಲಗೂಡು ಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ಯಡಿಯೂರಪ್ಪ, ಅಮಿತ್ ಶಾ, ಬಿಜೆಪಿ ಪಾರ್ಟಿಯ ಎಂಎಲ್‍ಎಗಳು ಮಾಜಿ ಮಂತ್ರಿಗಳೆಲ್ಲಾ ಏತಕ್ಕೆ ಜೈಲಿಗೆ ಹೋಗಿದ್ದರು. ಅವರು ಯಾವ ವಚನ ಓದಲು ಹೋಗಿದ್ದರು. ಏನು ಜ್ಞಾನ ಕಲಿಯಲು ಹೋಗಿದ್ದರು. ಅವರ ರೀತಿ ನಾನು ಯಾವುದೇ ಆರೋಪಗಳನ್ನು ಹೊತ್ತುಕೊಂಡು ಹೋಗಿಲ್ಲ. ರಾಜಕೀಯ ಷಡ್ಯಂತ್ರದ ಮೇಲೆ ನಮ್ಮನ್ನು ಕಳುಹಿಸಿಕೊಟ್ಟಿದ್ದರು ಎಂದಿದ್ದಾರೆ.

nalin kumar kateel

ಪಿಎಸ್‍ಐ ಹಗರಣದ ಕಿಂಗ್‍ಪಿನ್ ಇದ್ದಾರೆ ಎಂಬ ಮಾಜಿ ಸಿಎಂ ಎಚ್‍ಡಿಕೆ ಹೇಳಿಕೆ ವಿಚಾರವಗಿ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿರುವುದರಲ್ಲಿ ಸತ್ಯ ಕಾಣುತ್ತಿದೆ. ಪಿಎಸ್‍ಐ ಹಗರಣದಲ್ಲಿ ಕಿಂಗ್‍ಪಿನ್ ಇರುವುದು ಸತ್ಯನೇ. ಕಿಂಗ್‍ಪಿನ್ ಕೆಲವರನ್ನೆಲ್ಲ ಬಿಡಿಸುತ್ತಿದ್ದಾರೆ. ಬರೀ ಆಫೀಸರ್, ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಬಂಧಿಸುತ್ತಿದ್ದಾರೆ. ಅಂಗಡಿ ಓಪನ್ ಮಾಡಿದವರಲ್ಲ, ಆ ಅಂಗಡಿಯಲ್ಲಿ ಏನಾದರೂ ಸಾಮಾನು ಖರೀದಿ ಮಾಡಲು ಹೋಗಿರುವ ಹುಡುಗರುಗಳನ್ನು ಬಂಧಿಸುತ್ತಿದ್ದಾರೆ ವ್ಯಂಗ್ಯವಾಡಿದ್ದಾರೆ.

R.D. Patil

ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಕೆಲವು ಮಂತ್ರಿಗಳ ಕೈವಾಡವಿದೆ. ಮಂತ್ರಿಗಳ ರಕ್ಷಣೆ ಇಲ್ಲದೆ, ಮಂತ್ರಿಗಳ ಮಾರ್ಗದರ್ಶನ ಇಲ್ಲದೇ ಈ ಹಗರಣ ಆಗಲು ಸಾಧ್ಯವಿಲ್ಲ. ಹೋಂ ಮಿನಿಸ್ಟರ್ ಕೂಡ ಕೆಲವರನ್ನು ಬಿಡಿಸಿದ್ದಾರೆ, ಅಶ್ವಥ್ ನಾರಾಯಣ್ ಫೋನ್ ಮಾಡಿ ಹೇಳಿ ಕೆಲವರನ್ನು ಬಿಡಿಸಿದ್ದಾರೆ. ನಾವು ಅಶ್ವಥ್ ನಾರಾಯಣ್ ನೆಂಟರುಗಳು ಅಂತ ಕೆಲವರು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಇದ್ದಾರೆ, ಆ ಹೆಸರುಗಳೆಲ್ಲ ಈಚೆ ಬರುತ್ತವೆ ಎಂದು ಆರೋಪಿಗಳನ್ನು ಬಿಡಿಸಿದ ತಕ್ಷಣ ಕೆಲವು ಪೊಲೀಸ್ ಆಫೀಸರ್‍ಗಳನ್ನು ಎತ್ತಂಗಡಿ ಮಾಡಲಾಗಿದೆ. ಅವರ ರಿಪೋರ್ಟ್ ಕೊಟ್ಟಿದ್ದಕ್ಕೆ ಇವೆಲ್ಲ ಹೆಚ್ಚುಕಮ್ಮಿ ಆಗಿದೆ ಅಂತ ನನಗೆ ಮಾಹಿತಿಯಿದೆ. ತನಿಖೆಗೆ ಬಗ್ಗೆ ಬೊಮ್ಮಾಯಿ ಅವರು ಸತ್ಯಾಂಶ ಹೇಳಬೇಕು, ಮುಚ್ಚಿಡಬಾರದು, ಇದರಲ್ಲಿ ಹಸ್ತಕ್ಷೇಪ ಮಾಡಬಾರದು.
ಯಾರ, ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಸಿಓಡಿ ಅವರು ಬಯಲು ಮಾಡಲು ಬಿಡಬೇಕು. ಸಿಓಡಿ ಮುಕ್ತವಾಗಿ ತನಿಖೆ ಮಾಡಬೇಕು. ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ಇದು ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ASHWATHNARAYAN

ಪಿಎಸ್‍ಐ ಹಗರಣದಲ್ಲಿ ಸಚಿವ ಅಶ್ವಥ್ ನಾರಾಯಣ್ ಸಹೋದರ ಭಾಗಿಯಾಗಿರುವ ವಿಚಾರವಾಗಿ ಮಾತನಾಡಿದ ಅವರು, ಅಶ್ವಥ್ ನಾರಾಯಣ್ ಅವರನ್ನು ಸರ್ಕಾರದ ಎಲ್ಲಾ ಸಚಿವರು ವಹಿಸಿಕೊಳ್ಳಬೇಕು, ವಹಿಸಿಕೊಳ್ಳದಿದ್ದರೆ ಆಗುತ್ತಾ? ಅವರ ಮೇಲೆಯೇ ಎಲ್ಲಾ ಆರೋಪಗಳು ಬರುತ್ತವೆ ಅಂತ ಮುಚ್ಚಿ ಕೊಳ್ಳುತ್ತಿದ್ದಾರೆ. ಯಾರಾದರೂ ಲಂಚ ಪಡೆದವನು ಪಡೆದಿದ್ದಾನೆ ಅಂತ ಹೇಳುತ್ತಾನಾ, ಲಂಚ ಕೊಟ್ಟವನು ಲಂಚ ಕೊಟ್ಟಿದ್ದೀನಿ ಅಂತ ಹೇಳುತ್ತಾನಾ? ಈಗೆಲ್ಲಾ ಆಚೆ ಬಂದಿಲ್ವಾ, ಜೈಲಿಗೆ ಹಾಕಿರುವ ಹುಡುಗರನ್ನು ಕೇಳಿ ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *