ಟಿಆರ್‌ಎಸ್‌ನ ರಿಮೋಟ್ ಕಂಟ್ರೋಲ್ ಬಿಜೆಪಿಯಲ್ಲಿದೆ: ರಾಹುಲ್ ಗಾಂಧಿ

Public TV
1 Min Read
Rahul gandhi

ಹೈದರಾಬಾದ್: ಬಿಜೆಪಿಯು ಟಿಆರ್‌ಎಸ್ ಅನ್ನು ರಿಮೋಟ್ ಕಂಟ್ರೋಲ್ ಮಾಡುತ್ತಿದ್ದು, ಟಿಆರ್‌ಎಸ್‍ಗೆ ಮತ ನೀಡುವುದು ಎಂದರೆ ಬಿಜೆಪಿಗೆ ಮತ ನೀಡಿದಂತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನ್ನು ಅಧಿಕಾರದಿಂದ ದೂರವಿಡಲು ಬಿಜೆಪಿಯು ಟಿಆರ್‌ಎಸ್ ಜೊತೆ ಕೈಜೋಡಿಸಿದೆ. ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯು ಕಾಂಗ್ರೆಸ್ ಮತ್ತು ಆಡಳಿತಾರೂಢ ಟಿಆರ್‌ಎಸ್ ನಡುವೆ ನೇರ ಹಣಾಹಣಿಯಾಗಲಿದೆ. ಕಾಂಗ್ರೆಸ್ ಎಂದಿಗೂ ಭಷ್ಟ ಟಿಆರ್‌ಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.

BJP FLAG

ತೆಲಂಗಾಣ ರಾಜ್ಯವು ಒಂದು ಕುಟುಂಬಕ್ಕೆ ಅನುಕೂಲ ಮಾಡಿಕೊಳ್ಳಲು ಇಲ್ಲ ಎಂದ ಅವರು, ರಾಜ್ಯವನ್ನು ಒಬ್ಬ ಮುಖ್ಯಮಂತ್ರಿ ಆಳ್ವಿಕೆ ನಡೆಸುತ್ತಿಲ್ಲ. ಬದಲಿಗೆ ರಾಜ ಆಳ್ವಿಕೆ ನಡೆಸುತ್ತಿದ್ದಾರೆ ಎಂದು ಕೆಸಿಆರ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಮಂಡ್ಯ ಗೆಲ್ಲದೆ ಬಿಜೆಪಿಗೆ ಗೆಲುವೇ ಆಗೋದಿಲ್ಲ: ಸಿ.ಟಿ.ರವಿ

Telangana cm KCR

ಸಿಬಿಐ ಅಥವಾ ಇಡಿ ತನಿಖೆಗೆ ಎಂದಿಗೂ ಆದೇಶಿಸದೆ ಜನರ ಹಣವನ್ನು ಲೂಟಿ ಮಾಡಲು ಕೆಸಿಆರ್ ಅವರಿಗೆ ಕೇಂದ್ರವು ಅವಕಾಶ ನೀಡುತ್ತಿದೆ ಎಂದ ಅವರು, ಟಿಆರ್‌ಎಸ್‍ಗೆ ತೆಲಂಗಾಣದ ಜನತೆ ಎರಡು ಅವಕಾಶಗಳನ್ನು ನೀಡಿದ್ದೀರಿ, ಈಗ ನಮಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್ ತೊರೆದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ

Share This Article
Leave a Comment

Leave a Reply

Your email address will not be published. Required fields are marked *