ಕಾಣದ ಕೈಗಳ ಆಟಕ್ಕೆ ಬ್ರೇಕ್ ಹಾಕುವ ‘ಟಕ್ಕರ್’

Public TV
2 Min Read
takkar cinema

ಸೈಬರ್ ಕ್ರೈಂ ಕಥಾಹಂದರದ ‘ಟಕ್ಕರ್’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮನೋಜ್ ಕುಮಾರ್ ನಾಯಕ ನಟನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ರಂಜನಿ ರಾಘವನ್ ಜೋಡಿಯಾಗಿದ್ದಾರೆ.

takkar 7

‘ರನ್ ಆ್ಯಂಟನಿ’ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ವಿ.ರಘುಶಾಸ್ತ್ರಿ ಈ ಚಿತ್ರದಲ್ಲಿ, ಹೆಣ್ಣುಮಕ್ಕಳ ಜೀವನ ಹಾಗೂ ಜೀವಕ್ಕೆ ಕುತ್ತು ತರುತ್ತಿರುವ ಮೊಬೈಲ್, ಲ್ಯಾಪ್ ಟಾಪ್ ಬಳಕೆ, ತಂತ್ರಜ್ಞಾನದಿಂದಾಗಬಹುದಾದ ಅನಾಹುತಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕಣ್ಣಿಗೆ ಕಾಣದ ಹ್ಯಾಕರ್‌ಗಳು ಎಲ್ಲೋ ಕುಳಿತು ಹೆಣ್ಣುಮಕ್ಕಳ ಜೀವದ ಜೊತೆ ಆಟವಾಡುತ್ತಿದ್ದಾರೆ. ಇದೆಲ್ಲ ಹೇಗೆ ಸಾಧ್ಯ, ಯಾವ ರೀತಿ ಟ್ರ್ಯಾಪ್ ಮಾಡಿ ಬಲೆ ಬೀಸುತ್ತಾರೆ ಎಲ್ಲವನ್ನು ಸಿನಿಮ್ಯಾಟಿಕ್ ಆಗಿ ಮಾಸ್ ಎಳೆಯಲ್ಲಿ ತೆರೆ ಮೇಲೆ ಚಿತ್ರತಂಡ ತಂದಿದೆ. ಇದನ್ನೂ ಓದಿ: ಭಾವಿಪತಿಯನ್ನೇ ಅರೆಸ್ಟ್ ಮಾಡಿದ ಇನ್ಸ್‌ಪೆಕ್ಟರ್ 

takkar manoj kumar 1

ಕಥೆಯೇನು?
ನಾಯಕ ನಟ ಸಾತ್ಯುಕಿ ಕಾಲೇಜು ಸ್ಟೂಡೆಂಟ್. ದಿನಾ ಒಂದಿಲ್ಲೊಂದು ಹೊಡೆದಾಟದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರೋದು ಆತನಿಗೆ ಕಾಮನ್. ಹಾಗಂತ ಕೆಟ್ಟವನಲ್ಲ. ಸಹಾಯ ಹಸ್ತ ಚಾಚೋ ಹುಡುಗ. ಆತನ ಗುಣಕ್ಕೆ ಮನಸೋಲೋ ಹುಡುಗಿ ಪುಣ್ಯ. ಹೀಗಿರುವಾಗ ಪಕ್ಕದ್ಮನೆ ಹುಡುಗಿ ದೀಪಾ ಕೊಲೆಯಾಗುತ್ತಾಳೆ. ಇದರ ಜೊತೆಗೆ ನಗರದಲ್ಲಿ ಅನೇಕ ಹುಡುಗಿಯರು ಕಾರಣವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ ಇದು ಪೊಲೀಸ್ ಇಲಾಖೆಗೂ ದೊಡ್ಡ ತಲೆ ನೋವಾಗಿರುತ್ತೆ.

Takkar 1

ದೀಪಾ ಕೊಲೆ ಭೇದಿಸಲು ನಿಂತ ಸಾತ್ಯುಕಿಗೆ ಪೊಲೀಸರ ಸಾಥ್ ಕೂಡ ಸಿಗುತ್ತೆ. ಇದೊಂದು ದೊಡ್ಡ ಸೈಬರ್ ಕ್ರೈಂ, ಹುಡುಗಿಯರ ಆತ್ಮಹತ್ಯೆ ಹಿಂದೆ ಇರೋದು ಹ್ಯಾಕರ್‍ನದ್ದೇ ಕೈವಾಡ ಅನ್ನೋದು ಮನವರಿಕೆಯಾಗುತ್ತೆ. ಆ ಕಾಣದ ಕೈ ಯಾರದ್ದು.? ಹುಡುಗಿಯರು ಸೂಸೈಡ್ ಮಾಡಿಕೊಳ್ಳಲು ಕಾರಣವೇನು? ಯಾವ ರೀತಿ ಹುಡುಗಿಯರನ್ನು ಟ್ರ್ಯಾಪ್ ಮಾಡುತ್ತಿದ್ದ..? ಎಂಬುದರ ಬೆನ್ನತ್ತಿ ನಾಯಕ ಹೊರಡುತ್ತಾನೆ. ಈ ಆಟದಲ್ಲಿ ಗೆಲುವು ಸುಲಭದ್ದಾಗಿರೋದಿಲ್ಲ. ಬಂದ ಅಡೆತಡೆಗಳನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿ ಹ್ಯಾಕರ್‌ನನ್ನು ಕಂಡು ಹಿಡಿಯುತ್ತಾನಾ.? ಹ್ಯಾಕರ್ ಬಲೆಗೆ ಬಿದ್ದ ಹುಡುಗಿಯರು ಬಚಾವಾಗುತ್ತಾರಾ..? ಅನ್ನೋದು ‘ಟಕ್ಕರ್’ ಸಾರಾಂಶ.

Takkar Song shoot 7

ವಿಮರ್ಶೆ:
ಸೈಬರ್ ಕ್ರೈಂ ಕಥಾಹಂದರವನ್ನು ಪಕ್ಕಾ ಮಾಸ್ ಶೈಲಿಯಲ್ಲಿ ಹೆಣೆದು ನಿರ್ದೇಶಕ ರಘು ಶಾಸ್ತ್ರಿ ತಮ್ಮ ಜಾಣ್ಮೆಯನ್ನು ಪ್ರದರ್ಶಿಸಿದ್ದಾರೆ. ಆದ್ರೆ ಚಿತ್ರಕಥೆ ವಿಚಾರದಲ್ಲಿ ಇನ್ನಷ್ಟು ಹೋಂವರ್ಕ್ ಮಾಡಿದ್ರೆ ಚಿತ್ರ ಇನ್ನಷ್ಟು ಅದ್ಭುತವಾಗಿರುತ್ತಿತ್ತು. ಮನೋಜ್ ಮಾಸ್ ಹೀರೋ ಆಗಿ ಗಮನ ಸೆಳೆದರೂ ಅಭಿನಯದಲ್ಲಿ ಇನ್ನಷ್ಟು ಪಳಗಬೇಕು. ನಾಯಕಿ ರಂಜನಿ ರಾಘವನ್ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಸಾಫ್ಟ್ ರೋಲ್‍ನಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಎನ್‍ಕೌಂಟರ್‌ನಲ್ಲಿ ಮೂರು ಭಯೋತ್ಪಾದಕರ ಪೈಕಿ ಒಬ್ಬ ಬದುಕುಳಿದ 

Takkar 3

ಚಿತ್ರದಲ್ಲಿ ಕಡಿಮೆ ಸ್ಪೇಸ್ ಇದ್ದರೂ ಇರುವಷ್ಟು ಸಮಯ ಗಮನ ಸೆಳೆಯುತ್ತಾರೆ. ಪೊಲೀಸ್ ಕಮಿಶನರ್ ಆಗಿ ಜೈಜಗದೀಶ್, ಪೊಲೀಸ್ ಆಗಿ ಶ್ರೀಧರ್, ಸಾಧುಕೋಕಿಲ ಎಂದಿನಂತೆ ತಮ್ಮ ಮನೋಜ್ಞ ಅಭಿನಯ ತೋರಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ಅಷ್ಟೇನು ಕಾಡದಿದ್ರು ಚೊಕ್ಕದಾಗಿ ಮೂಡಿ ಬಂದಿದೆ. ಒಟ್ಟಾರೆಯಾಗಿ, ಪ್ರತಿಯೊಬ್ಬರೂ ನೋಡಲೇಬೇಕಾದ, ಫ್ಯಾಮಿಲಿ ಸಮೇತ ಎಂಜಾಯ್ ಮಾಡಬಹುದಾದ ಚಿತ್ರ ‘ಟಕ್ಕರ್’.

Share This Article
Leave a Comment

Leave a Reply

Your email address will not be published. Required fields are marked *