5 ವರ್ಷಗಳಿಂದ ತಾಯಿಯಾಗಲು ಪ್ರಯತ್ನಿಸಿ 4 ಬಾರಿ ಐವಿಎಫ್ ಚುಚ್ಚುಮದ್ದು ಪಡೆದ ನಟಿ

Public TV
2 Min Read
acter

ಮುಂಬೈ: ಕಿರಿತೆರೆಯ ನಟಿ ಸಂಭಾವ್ನಾ ಸೆಠ್ 5 ವರ್ಷಗಳಿಂದ ತಾಯಿಯಾಗಲು ಪ್ರಯತ್ನಿಸುತ್ತಿದ್ದು, ಇದರ ಸಲುವಾಗಿ ಅವರು 4 ಬಾರಿ ಐವಿಎಫ್ ಮೂಲಕ ಚಿಕಿತ್ಸೆ ಪಡೆದ್ರೂ ವಿಫಲವಾಗಿದ್ದಾರೆ.

ಈ ಕುರಿತು ಅವರೇ ಖುದ್ದಾಗಿ ತಮ್ಮ ಯೂಟ್ಯೂಬ್ ಚಾನೆಲ್‍ವೊಂದರಲ್ಲಿ ಹೇಳಿಕೊಂಡಿದ್ದು, ನಟಿಯು ಆಗಾಗ ತಮ್ಮ ವೈಯಕ್ತಿಕ ವಿಷಯಗಳನ್ನು ಅಭಿಮಾನಿಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈಗ ಅವರು ತಮ್ಮ ಗರ್ಭಾವಸ್ಥೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.

acter 1

2016ರಲ್ಲಿ ನಟಿಯು ಅವಿನಾಶ್ ದ್ವಿವೇದಿ ಜೊತೆ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ 1 ವರ್ಷದ ನಂತರ ದಂಪತಿ ಮಗುವನ್ನು ಹೊಂದಲು ಯೋಜಿಸಿದ್ದರು. ಆದರೆ ನಟಿ ಸಂಭವ್ನಾ ಅವರ ವಯಸ್ಸು ಮೀರಿದ್ದ ಕಾರಣ ಅವರು ಐವಿಎಫ್ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದರು. ದುರದೃಷ್ಟವಶಾತ್, ನಾಲ್ಕು ಬಾರಿ ಐವಿಎಫ್ ಚುಚ್ಚುಮದ್ದು ಪಡೆದು ಗರ್ಭಧರಿಸಲು ಪ್ರಯತ್ನಿಸಿದರೂ, ಅವರು ತಾಯಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಆದಾಗ್ಯೂ, ಸಂಭಾವ್ನಾ ಅವರು ಧೃತಿಗೆಡದೆ 5ನೇ ಬಾರಿಗೆ ಐವಿಎಫ್ ಮೂಲಕ ತಾಯಿಯಾಗಲು ಪ್ರಯತ್ನಿಸುತ್ತಿದ್ದಾರೆ. ದಂಪತಿಯು 2017ರಿಂದ ಮಗು ಹೊಂದಲು ಪ್ರಯತ್ನಿಸುತ್ತಿದ್ದು, ಕೆಲ ಜನರು ಅವರ ಗರ್ಭಾವಸ್ಥೆ ಕುರಿತು ಹಿಯಾಳಿಸತೊಡಗಿದ್ದಾರೆ ಎಂದು ಹೇಳಿದರು.

acter 2

ಎಷ್ಟು ದಿನ ನಾಯಿಗಳನ್ನು ಪ್ರೀತಿ ಮಾಡುತ್ತಾ ಇರುತ್ತೀರಾ..?. ನಿಮ್ಮದೇ ಆದ ಮಗುವೊಂದನ್ನು ಹೆತ್ತುಕೊಳ್ಳಿ ಎಂದು ಹಿಯಾಳಿಸುತ್ತಿದ್ದಾರೆ. ಅದಲ್ಲದೆ ಅವರ ದೇಹದ ತೂಕದ ಬಗ್ಗೆಯು ಜನರು ಎಷ್ಟು ದಪ್ಪ ಆಗಿದ್ದೀರಾ ಅಂತ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಐವಿಎಫ್ ಚುಚ್ಚುಮದ್ದಿನಿಂದಾಗಿ ನನ್ನ ದೇಹವೂ ಇಷ್ಟೊಂದು ದಪ್ಪ ಆಗಿದೆ. ಮಗು ಹೊಂದಲು ಜೀವನದಲ್ಲಿ ತುಂಬಾ ಹಿಂಸೆ ಅನುಭವಿಸುತ್ತಿದ್ದೇವೆ ಎಂದು ದಂಪತಿ ಬೇಸರ ವ್ಯಕ್ತಪಡಿಸಿದ್ದಾರೆ. ವೀಡಿಯೋ ಕೊನೆಯಲ್ಲಿ ಸಂಭಾವ್ನಾ ಅವರು ನಾನು ಏನನ್ನು ಬಿಟ್ಟುಕೊಡುವವಳಲ್ಲ, ನಾನು ಹೋರಾಟಗಾರ್ತಿ. ಈ ಬಾರಿಯೂ ಪೂರ್ಣ ಧೈರ್ಯದೊಂದಿಗೆ ಐವಿಎಫ್ ಅನ್ನು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

acter 3

ಏನಿದು ಐವಿಎಫ್?
ಸಹಜವಾಗಿ ಗರ್ಭಧಾರಣೆಯಾಗದಿದ್ದರೆ ಕೃತಕವಾಗಿ ಇನ್ ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ಮೂಲಕ ಗರ್ಭಧರಿಸಬಹುದು. ಈ ವಿಧಾನದಲ್ಲಿ, ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿ ಎರಡನ್ನೂ ಸೇರಿಸಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ.

ಉತ್ತಮ ಲ್ಯಾಬ್ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸ್ವಲ್ಪ ಹೆಚ್ಚು ಹಣ ಖರ್ಚಾಗಲಿದೆ. ಅಗತ್ಯ ಪರೀಕ್ಷೆಗಳ ನಂತರ ಐಯುಐಗೆ ಸುಮಾರು 10 ಸಾವಿರ ಮತ್ತು ಐವಿಎಫ್‍ಗೆ ಸುಮಾರು 1.75 ರೂ. ವೆಚ್ಚ ತಗುಲಬಹುದು.

Share This Article
Leave a Comment

Leave a Reply

Your email address will not be published. Required fields are marked *