ಸೈಬರ್ ಜಗತ್ತಿನ ‘ಟಕ್ಕರ್’ ಟ್ರೇಲರ್ ರಿಲೀಸ್ – ಮನೋಜ್ ಎಂಟ್ರಿ ಫುಲ್ ಮಾಸ್

Public TV
1 Min Read
takkar cinema 2

ನ್ನಡದಲ್ಲಿ ರೌಡಿಸಂ, ಲವ್ ಸ್ಟೋರಿ ಹೊರತಾಗಿ ಬೇರೆ ರೀತಿಯ ಸಿನಿಮಾವೊಂದು ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ತಂತ್ರಜ್ಞಾನದ ಅಡಿಕ್ಷನ್ ಹೆಣ್ಣು ಮಕ್ಕಳ ಮೇಲೆ ಹೇಗೆಲ್ಲಾ ಸಮಸ್ಯೆ ಉಂಟು ಮಾಡುತ್ತದೆ ಅನ್ನೋದನ್ನು ಇಂಚಿಂಚಾಗಿ ಹೆಣೆದ ಕಂಟೆಂಟಿನ ಕಥೆ ಟಕ್ಕರ್ ಸಿನಿಮಾದ ಟ್ರೇಲರ್‌ನಲ್ಲಿ ಅನಾವರಣಗೊಂಡಿದೆ. ಸೀಟಿನ ತುದಿಗೆ ಕೂರಿಸುವ ಟ್ರೇಲರ್ ಝಲಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಆಕ್ಷನ್, ಥ್ರಿಲ್ ಜೊತೆ ಒಂದೊಳ್ಳೆ ಮೆಸೇಜ್ ಕೊಡುವ ಟಕ್ಕರ್ ಟ್ರೇಲರ್‌ನಲ್ಲಿ ಸೈಬರ್ ಕ್ರೈಮ್‌ಗೆ ಸಿಲುಕಿ ಕೊಲೆಯಾಗುವ ಹೆಣ್ಣು ಮಕ್ಕಳ ಪ್ರಕರಣವನ್ನು ಭೇದಿಸುವ ಹೀರೋ ಸುತ್ತ ಟ್ರೇಲರ್ ಅನ್ನು ಕಟ್ಟಿ ಕೊಡಲಾಗಿದೆ. ಮನೋಜ್ ಮಾಸ್ ಎಂಟ್ರಿ, ಭರ್ಜರಿ ಫೈಟಿಂಗ್ ಹಾಗೂ ಪವರ್ ಫುಲ್ ಡೈಲಾಗ್ ಮೂಲಕ ಅಬ್ಬರಿಸಿದ್ದಾರೆ. ಇದನ್ನೂ ಓದಿ: ವೆಡ್ಡಿಂಗ್ ಗಿಫ್ಟ್‌ನಿಂದ ಸಿಕ್ಕೇ ಬಿಡ್ತು ‘ರೋಮಾಂಚಕ’ ಡ್ಯುಯೆಟ್ ಸಾಂಗ್

takkar cinema

ವಿಲನ್ ಖದರ್‌ನಲ್ಲಿ ಭಜರಂಗಿ ಲೋಕಿ ಮಿಂಚಿದ್ರೆ, ಉಳಿದಂತೆ ನಾಯಕಿ ರಂಜನಿ ರಾಘವನ್, ಜೈಜಗದೀಶ್, ಶಂಕರ್ ಅಶ್ವತ್ಥ್, ಸುಮಿತ್ರಾ ಮುಂತಾದ ಅನುಭವಿ ತಾರಾಬಳಗದ ಅಭಿನಯ ಮನೋಜ್ಞವಾಗಿದೆ.

ಈ ಹಿಂದೆ ರನ್ ಆಂಟೋನಿ ಸಿನಿಮಾ ನಿರ್ದೇಶಿಸಿದ್ದ ನಿರ್ದೇಶಕ ರಘು ಶಾಸ್ತ್ರಿ ಟಕ್ಕರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಶೂಟಿಂಗ್ ಕಂಪ್ಲೀಟ್ ಮಾಡಿ ಕಳೆದ ಮೂರು ವರ್ಷಗಳಿಂದ ರಿಲೀಸ್‌ಗೆ ಕಾತುರರಾಗಿರುವ ನಿರ್ಮಾಪಕ ನಾಗೇಶ್ ಕೋಗಿಲು ಎಸ್‌ಎಲ್‌ಎನ್ ಕ್ರಿಯೇಷನ್ ಬ್ಯಾನರ್‌ನಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ಗೋಲ್ಡನ್ ಕ್ವೀನ್ ತಾಯ್ತನದ ಜರ್ನಿಗೆ ಎರಡು ತಿಂಗಳು: ಅಮೂಲ್ಯ ಭಾವನಾತ್ಮಕ ಮಾತು

takkar cinema 1

ಮಣಿಕಾಂತ್ ಕದ್ರಿ ಮ್ಯೂಸಿಕ್ ಇಂಪು, ವಿಲಿಯಂ ಡೇವಿಡ್ ಕ್ಯಾಮೆರಾ ತಂಪು, ಕೆಎಂ ಪ್ರಕಾಶ್ ಎಡಿಟಿಂಗ್ ಸಿನಿಮಾಕ್ಕಿದೆ. ಟಕ್ಕರ್ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಳಿರುವ ಮನೋಜ್‌ಗೆ ಇದು ಮೊದಲ ಸಿನಿಮಾವಾಗಿದ್ದು, ಕನ್ನಡತಿ ಖ್ಯಾತಿಯ ರಂಜನಿ ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ.

ತಂತ್ರಜ್ಞಾನದ ಕರಾಳ ಸತ್ಯ ಬಿಚ್ಚಿಡುವ ಟಕ್ಕರ್ ಸಿನಿಮಾ ಮೇ 6ರಿಂದ ಬೆಳ್ಳಿ ಪರದೆಯ ಮೇಲೆ ಮೆರವಣಿಗೆ ಹೊರಡಲಿದೆ.

Share This Article
Leave a Comment

Leave a Reply

Your email address will not be published. Required fields are marked *