ಸಂಜನಾ ಗಲ್ರಾನಿ ಬೇಬಿ ಬಂಪ್ ಫೋಟೋಶೂಟ್ ವೈರಲ್

Public TV
2 Min Read
ಸಂಜನಾ ಗಲ್ರಾನಿ ಫೋಟೋ

ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಸೀಮಂತದ ಸಂಭ್ರಮದ ಕ್ಷಣಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ಬೇಬಿ ಬಂಪ್ ಫೋಟೋಶೂಟ್‌ನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

sanjana galrani

`ಗಂಡ ಹೆಂಡತಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಸಂಜನಾ, ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ್ರು. ಬಳಿಕ ಅಜೀಜ್ ಪಾಷಾ ಅವರೊಂದಿಗೆ ಸಂಜನಾ ವಿವಾಹವಾಗಿದ್ದರು. ಇತ್ತೀಚೆಗೆ ಸೀಮಂತ ಶಾಸ್ತ್ರದ ಸಂಭ್ರಮ ಕ್ಷಣಗಳನ್ನ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದರ ಬೆನ್ನೆಲ್ಲೇ ಸಂಜನಾ ಈಗ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್ ಸಖತ್ ವೈರಲ್ ಆಗುತ್ತಿದೆ.

sanajna

ಸಂಜನಾ ಗಲ್ರಾನಿ 9 ತಿಂಗಳ ತುಂಬು ಗರ್ಭೀಣಿಯಾಗಿದ್ದು, ಹೊಸ ಫೋಟೋಶೂಟ್‌ನಲ್ಲಿ ಮೆರುನ್ ಕಲರ್ ಡ್ರೇಸ್‌ನಲ್ಲಿ ಭಿನ್ನವಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ತಲೆಗೆ ಹ್ಯಾಟ್ ಹಾಕಿಕೊಂಡು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಜೀವನ ಎಷ್ಟು ವಿಭಿನ್ನ ಮತ್ತು ಕಷ್ಟಕರವೆಂದು ನಟಿ ಸಂಜನಾ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.

ಐವತ್ತಕ್ಕೂ ಹೆಚ್ಚು ಚಿತ್ರಗಳು, ಹಲವಾರು ಶೋಗಳು, ನಾಲ್ಕು ಭಾಷೆಗಳಲ್ಲಿನ ಕಾರ್ಯಕ್ರಮಗಳ ಉದ್ಘಾಟನೆಯ ಜತೆಗೆ ವಿವಿಧ ನಗರಗಳಲ್ಲಿ ಓಡಾಟ ಮತ್ತು ತಾವು 18ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಜತೆಗೆ ತನ್ನ ಫ್ಯಾಮಿಲಿ ಜೀವನವನ್ನ 35ನೇ ವರ್ಷಕ್ಕೆ ಶುರು ಮಾಡಿದ್ದೇನೆ. ಕಳೆದ 2 ವರ್ಷಗಳಿಂದ ಜೀವನದಲ್ಲಿ ಸಾಕಷ್ಟು ಕಷ್ಟ ಮತ್ತು ಸವಾಲುಗಳನ್ನು ಏದುರಿಸಿದ್ದೇನೆ. ಇದೀಗ 18 ಕೆ.ಜಿ ತೂಕ ಹೆಚ್ಚಾಗಿರುವುದರಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.‌ ಇದನ್ನೂ ಓದಿ: ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

actor sanjana galrani

ನನ್ನ ಕಷ್ಟದ ಸಮಯದಲ್ಲಿ ನನ್ನ ಮನಸ್ಸನ್ನು ಬೇರೆಡೆಗೆ ತಿರುಗಿಸಿದ್ದೆ, ನನ್ನ ನೆರೆಹೊರೆಯಲ್ಲಿ 40ಕ್ಕೂ ಹೆಚ್ಚು ಗಿಡಗಳನ್ನು ಸಂಜನಾ ಫೌಂಡೇಶನ್ ನೇತೃತ್ವದಲ್ಲಿ ನೆಡುವುದರ ಮೂಲಕ ನನ್ನ ಸಮಯವನ್ನು ಮೀಸಲಿಟ್ಟಿದ್ದೇನೆ. ನನ್ನ 9ನೇ ತಿಂಗಳ ಗರ್ಭಾವಸ್ಥೆಯ ಹಂತದಲ್ಲಿ ನಾನು ಹಿಂದೂ ಆಗಿ ಜನಿಸಿ ಮುಸ್ಲಿಂ ಕುಟುಂಬಕ್ಕೆ ಮದುವೆಯಾಗಿ ಎರಡು ಧರ್ಮದ ಪದ್ಧತಿಯನ್ನು ಖುಷಿಯಿಂದ ಜೀವಿಸುತ್ತಿದ್ದೇನೆ ಎಂದು ತಮ್ಮ ಅಭಿಪ್ರಾಯವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಪೋಸ್ಟ್ ಮತ್ತು ಬೇಬಿ ಬಂಪ್ ಫೋಟೋಶೂಟ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಂಜನಾ ಫೋಟೋಶೂಟ್ ವೈರಲ್ ಆಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *