ಹಿಂದಿಯನ್ನ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ರೆ ತಪ್ಪೇನಿಲ್ಲ: ಮುರುಗೇಶ್ ನಿರಾಣಿ

Public TV
1 Min Read
murugesh nirani 3

ಮೈಸೂರು/ಚಿಕ್ಕಮಗಳೂರು/ ವಿಜಯಪುರ: ಹಿದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದರೆ ತಪ್ಪೇನಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ.

ಸುದೀಪ್, ಅಜಯ್ ದೇವಗನ್ ಮಧ್ಯೆ ಹಿಂದಿವಾರ್ ಸಂಬಂಧ ಪ್ರತಿಕ್ರಿಯಿಸಿದ ಅವರು, ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ. ಹಿಂದಿ ಭಾಷೆಯೂ ನಮಗೆ ಬೇಕು. ಬೇರೆ ಭಾಷೆ ಕಲಿಯುವುದರಲ್ಲಿ ತಪ್ಪೇನಿಲ್ಲ. ಹಿಂದಿಯನ್ನ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂಬುದು ಮೊದಲಿನಿಂದಲೂ ಇದೆ, ಇದರಿಂದ ತಪ್ಪೇನಿಲ್ಲ ಎಂದರು.

FotoJet 4 12

ಹೆಚ್ಚು ಭಾಷೆ ಕಲಿಯೋದ್ರಿಂದ ನಾವು ಶ್ರೀಮಂತರಾಗುತ್ತೇವೆ. ನಾವು ಕನ್ನಡಿಗರು, ಕನ್ನಡಕ್ಕೆ ಮೊದಲ ಆದ್ಯತೆ. ಆ ಬಳಿಕ ಬೇರೆ ಬೇರೆ ಭಾಷೆಗಳಿಗನ್ನು ಕಲಿಯಬೇಕು. ನಾನು ಗ್ರಾಮೀಣ ಪ್ರದೇಶದವನಾಗಿರೋದ್ರಿಂದ ಕನ್ನಡವನ್ನ ಪ್ರೀತಿಸುತ್ತೇನೆ. ಇತರ ಭಾಷಣಗಳನ್ನೂ ಪ್ರೀತಿಸ್ತೀನಿ ಎಂದು ನಿರಾಣಿ ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ನೆನಪಿಸಬಯಸುತ್ತೇನೆ: ಡಿಕೆಶಿ

CT RAVI 2

ಇತ್ತ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ, ಇನ್ನೊಂದು ಭಾಷೆಯನ್ನು ಆಕ್ರಮಿಸಲ್ಲ, ಗೌರವಿಸ್ತೇವೆ. ಶೇ.48 ರಷ್ಟು ನಮ್ಮ ದೇಶದ ಜನರಿಗೆ ಹಿಂದಿ ಮಾತೃ ಭಾಷೆ. ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬಳಸಿಕೊಳ್ಳಬಹುದು ಎಂದಿದ್ದಾರೆ. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕಿಚ್ಚ ಸುದೀಪ್ ಮಾತಿಗೆ ದನಿಗೂಡಿಸಿದ ಸಿಎಂ ಬೊಮ್ಮಾಯಿ

Ramesh Jigajinagi 1

ವಿಜಯಪುರದಲ್ಲಿ ಕೇಂದ್ರದ ಮಾಜಿ ಸಚಿವ, ಸಂಸದ ರಮೇಶ್ ಜಿಗಜಿಣಗಿ ಪ್ರತಿಕ್ರಿಯಿಸಿ, ನಾನು ಇಬ್ಬರು ಪರವಾಗಿಯೂ ಇಲ್ಲ. ಸರ್ಕಾರದ ನೀತಿ ಪರವಾಗಿ ಇದ್ದೇನೆ. ಹಿಂದಿ ಬೇಕು ಅಂದ್ರೇ ಹಿಂದಿ ಪರ ಇರುತ್ತೇನೆ. ಬೇಡ ಅಂದ್ರೇ ಬೇಡವಾದ ಪರವಾಗಿ ಇರುತ್ತೇನೆ. ಕೇಂದ್ರ ಸರ್ಕಾರದ ಪರ ನಾನು ಇರುತ್ತೇನೆ ಅಷ್ಟೆ ಎಂದು ಹೇಳಿದ್ದಾರೆ. ಈ ಮೂಲಕ ಇದೀಗ ಈ ಇಬ್ಬರು ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಒಟ್ಟಿನಲ್ಲಿ ಮಾತೃಭಾಷೆ ಬಗ್ಗೆ ಬಿಜೆಪಿಯಲ್ಲಿ ದ್ವಂದ್ವ ಹೇಳಿಕೆ ನೀಡಲಾಗುತ್ತಿದೆ. ನಿರಾಣಿ, ಜಿಗಜಿಣಗಿಯದ್ದು ಕನ್ನಡದ್ರೋಹಿ ಹೇಳಿಕೆಯಾದ್ರೆ, ಸಿಟಿ ರವಿ ಅವರು ದ್ವಂದ್ವ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಚಿತ್ರನಟರ ಮಾತಿಗೆ ನಾವು ಚರ್ಚೆ ಮಾಡುವ ಅಗತ್ಯವಿಲ್ಲ: ಡಿಕೆಶಿ

Share This Article
Leave a Comment

Leave a Reply

Your email address will not be published. Required fields are marked *