90 ಕಿ.ಮೀವರೆಗೂ ಬೈಕ್‍ನಲ್ಲಿ ಮಗನ ಮೃತದೇಹ ಸಾಗಿಸಿದ ತಂದೆ

Public TV
2 Min Read
Amaravati Tirupati Father. Son 1

ಅಮರಾವತಿ: 90 ಕಿಮೀ. ದೂರದಲ್ಲಿದ್ದ ತಮ್ಮ ಹುಟ್ಟೂರಿಗೆ ಮಗನ ಮೃತದೇಹ ಸಾಗಿಸಲು ಅಂಬುಲೆನ್ಸ್ ಚಾಲಕ 20,000 ರೂ. ಕೇಳಿದ್ದಾನೆ. ಈ ಹಿನ್ನೆಲೆ ತಂದೆ ದಾರಿಯಲ್ಲಿ ಹೋಗುತ್ತಿದ್ದ ಬೈಕ್ ತಡೆದು ಸವಾರನನ್ನು ಬೇಡಿಕೊಂಡು ತನ್ನ ಹುಟ್ಟೂರಿಗೆ ಸೇರಿದ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ

Amaravati Tirupati Father. Son 2

ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾ ಸರ್ಕಾರಿ ಜನರಲ್(RUIA) ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ದುಃಖಿತ ವ್ಯಕ್ತಿ ನರಸಿಂಹುಲು ತನ್ನ 10 ವರ್ಷದ ಮಗ ಜಸ್ವಾನನ್ನು ಕಳೆದುಕೊಂಡಿದ್ದಾರೆ. ಆಸ್ಪತ್ರೆಯಿಂದ ನರಸಿಂಹುಲು ಹುಟ್ಟೂರಿಗೆ 90 ಕಿ.ಮೀ ದೂರವಿತ್ತು. ಈ ಹಿನ್ನೆಲೆ ಅಂಬುಲೆನ್ಸ್ ಚಾಲಕನನ್ನು ನರಸಿಂಹುಲು ಆಸ್ಪತೆಯಿಂದ ತಮ್ಮೊರಿಗೆ ಜಸ್ವಾ ಮೃತದೇಹವನ್ನು ಕರೆದೊಯ್ಯಲು ಕೇಳಿದ್ದಾನೆ. ಇದನ್ನೂ ಓದಿ:  ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ

ಚಾಲಕ 20,000 ರೂ. ಬೇಡಿಕೆ ಇಟ್ಟಿದ್ದಾನೆ. ಬಡತಂದೆಗೆ ಚಾಲಕ ಮಾಡಿದ ಡಿಮ್ಯಾಂಡ್ ಕೇಳಿ ಶಾಕ್ ಆಗಿದ್ದು, ಮಗನ ದೇಹ ಎತ್ತಿಕೊಂಡು ಆ ಸ್ಥಳದಲ್ಲಿ ಓಡಾಡುತ್ತಿದ್ದ ಬೈಕ್ ಸವಾರರಿಗೆ 90 ಕಿ.ಮೀಟರ್ ದೂರದಲ್ಲಿರುವ ತನ್ನ ಹುಟ್ಟೂರಿಗೆ ಬಿಡುವಂತೆ ಮನವಿ ಮಾಡಿಕೊಂಡಿದ್ದಾನೆ. ನರಸಿಂಹುಲು ಅವರು ಮಾವಿನ ತೋಟದಲ್ಲಿ ತೋಟಗಾರನಾಗಿ ಕೆಲಸ ಮಾಡುತ್ತಿದ್ದರು. ಅವರ ಬಳಿ ಹಣವಿಲ್ಲದ ಕಾರಣ ಹೊರಗಿನಿಂದ ಅಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ತೋಟದ ಮಾಲೀಕರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಗ್ರಾಮದಿಂದ ಆಂಬುಲೆನ್ಸ್ ಕಳುಹಿಸಿದ್ದಾರೆ. ಆದರೆ ಇದನ್ನು ಗಮನಿಸಿದ ಖಾಸಗಿ ಅಂಬುಲೆನ್ಸ್ ಚಾಲಕ ಗ್ರಾಮದಿಂದ ಬಂದಿದ್ದ ಚಾಲಕನನ್ನು ಥಳಿಸಿ ಆಸ್ಪತ್ರೆಯಿಂದ ಓಡಿಸಿದ್ದಾರೆ. ಈ ಹಿನ್ನೆಲೆ ತಂದೆ ಬೈಕ್‍ನಲ್ಲಿ ಶವವನ್ನು ಹೊತ್ತೊಯ್ದಿದ್ದಾನೆ.

Amaravati Tirupati Father. Son 3

ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರು ಘಟನೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದು, ತಿರುಪತಿಯ RUIA ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪುಟ್ಟಮಗನನ್ನು ಕರೆದುಕೊಂಡು ಹೋಗಬೇಕೆಂದು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಆದರೆ ಅದಕ್ಕೆ ಯಾರು ಒಪ್ಪಿಕೊಳ್ಳಲಿಲ್ಲ. ಶವಾಗಾರದ ವ್ಯಾನ್‍ಗಳು ಈ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿದ್ದಾರೆ ಎಂದು ಬರೆದು ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್

Amaravati Tirupati Father. Son 4

ಮಾಧ್ಯಮಗಳ ವರದಿಗಳ ಪ್ರಕಾರ, ಬುಡಕಟ್ಟು ಜನಾಂಗದ ಬಾಲಕ ಜಸ್ವಾ ಯಕೃತ್ತಿನ(ಲಿವರ್) ಸಮಸ್ಯೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಸಂಪೂರ್ಣ ಘಟನೆಯ ತನಿಖೆಗೆ ಆದೇಶಿಸಿದೆ.

Share This Article
Leave a Comment

Leave a Reply

Your email address will not be published. Required fields are marked *