ಸರ್ಕಾರ ಕತ್ತೆ ಕಾಯ್ತಿದ್ಯಾ? ಕಡ್ಲೆಪುರಿ ತಿಂತಿದ್ಯಾ? ಆರೋಪಿ ವಿರುದ್ಧ FIR ದಾಖಲಿಸಿಲ್ಲ ಯಾಕೆ – ಪ್ರಿಯಾಂಕ್ ಖರ್ಗೆ ಪ್ರಶ್ನೆ

Public TV
4 Min Read
Priyank Kharge 3

-ಖರ್ಗೆ ಸಾಹೇಬರಿಗೆ 5 ಬಾರಿ, ನನಗೆ 3 ಬಾರಿ ಬೆದರಿಕೆ ಕರೆಗಳು ಬಂದಿವೆ
-ಕೆಲವು ದಿನಗಳ ಹಿಂದೆ ಗೃಹ ಸಚಿವರೇ ದಿವ್ಯಾ ಅವರ ಮನೆಗೆ ಹೋಗಿದ್ರು

ಬೆಂಗಳೂರು: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ವಿಚಾರವಾಗಿ ಸರ್ಕಾರ ಕತ್ತೆ ಕಾಯ್ತಿದೆಯಾ? ಕಡ್ಲೆಪುರಿ ತಿನ್ನುತ್ತಿದೆಯಾ? ಕೋಲಾಟ ಆಡುತ್ತಿದೆಯಾ? ನನ್ನ ಬಳಿ ಇನ್ಯಾವ ಸಾಕ್ಷಿ ಕೇಳುತ್ತಿದ್ದೀರಾ? ಆಡಿಯೋ ರಿಲೀಸ್ ಆಗಿ ಮೂರು ದಿನವಾದರೂ ಆರೋಪಿ ವಿರುದ್ಧ ಯಾಕೆ ಎಫ್‍ಐಆರ್ ದಾಖಲಿಸುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

psi

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಂಜೆ ನನ್ನ ಮನೆಗೆ ಸಿಐಡಿಯವರು ಒಂದು ನೋಟಿಸ್ ಕೊಟ್ಟಿದ್ದಾರೆ. ಅದರಲ್ಲಿ ಸುದ್ದಿಗೋಷ್ಠಿ ನಡೆಸಿ ಪಿಎಸ್‍ಐ ಅಕ್ರಮದ ಸಾಕ್ಷ್ಯ ಇದೆ ಎಂದಿದ್ದೀರಾ. ಆದ್ದರಿಂದ ತಮ್ಮ ಬಳಿ ಇರುವ ಸಾಕ್ಷಿ ಹಾಗೂ ದಾಖಲೆಗಳನ್ನು ಒದಗಿಸುವಂತೆ 11-30ಕ್ಕೆ ಬರುವಂತೆ ನೋಟಿಸ್ ನೀಡಿದ್ದಾರೆ. ಆದರೆ ನಾನು ಇನ್ವೆಸ್ಟಿಗೇಷನ್ ಜರ್ನಲಿಸಮ್ ಮಾಡಿದ್ದೇನೆ, ನನ್ನ ಬಳಿ ದಾಖಲೆ ಇದೆ ಅಂತ ಎಲ್ಲೂ ಹೇಳಿಲ್ಲ. ನನ್ನ 2 ಪತ್ರಿಕಾಗೋಷ್ಠಿಯನ್ನು ಕಣ್ಣು ಹಾಗೂ ಕಿವಿ ತೆರದು ನೋಡಿ ಎಂದು ಕಿಡಿಕಾರಿದ್ದಾರೆ.

PSI 03

ನೇಮಕಾತಿ ಪಟ್ಟಿ ಫೈನಲ್ ಆದ ಅಭ್ಯರ್ಥಿ ಯುನಿಫಾರ್ಮ್ ಹಾಕಿಕೊಂಡು ಓಡಾಡುತ್ತಿರುವ ಬಗ್ಗೆ ನಿಮ್ಮ ಬಳಿಕ ಮಾಹಿತಿ ಇಲ್ವಾ? ದಿವ್ಯಾ ಹಾಗರಗಿ, ಮಹತೇಶ್ ಪಾಟೀಲ್ ಹೀಗೆ ಅನೇಕರ ಹೆಸರು ಬಂತು. ಆಡಿಯೋ ರಿಲೀಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಇತ್ತು. ರಿಲೀಸ್ ಮಾಡುವುದಕ್ಕೂ ಮುನ್ನ ಪತ್ರಿಕೆಗಳಲ್ಲಿ ಬಂದಿದೆ. ನಾನು ಸ್ಟಿಂಗ್ ಮಾಡಿದ್ದಾ ಅದು? ಪತ್ರಿಕೆಗಳಲ್ಲಿ ಬಂದ ವಿಚಾರವನ್ನು ಸುದ್ದಿಗೋಷ್ಠಿ ಮಾಡಿ ಹೇಳಿದ್ದೇನೆ. ಪೇಪರ್ ಓದಿ ಇಂಟಲಿಜೆನ್ಸ್‍ನವರು ಹೇಳುತ್ತಿದ್ದಾರೆ. ಇಂಟಲಿಜೆನ್ಸ್ ಕಾಮನ್ ಸೆನ್ಸ್ ಇಲ್ಲದೇ ಇರುವವರು ಪೇಪರ್‌ನಲ್ಲಿ ಬರುವುದನ್ನು ಸಿಎಂ ಮುಂದೆ ಒಪ್ಪಿಸುತ್ತಾ ಇದ್ದಾರಾ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಹಗರಣಕ್ಕೆ ಮೃತಪಟ್ಟವರ ಮೊಬೈಲ್ ಬಳಕೆ

Karnataka PSI exam scam divya hagaragi

ಈ ನೋಟೀಸ್‍ನಿಂದ ಸರ್ಕಾರದ ಕಾರ್ಯವೈಖರಿ ಹೇಗಿದೆ ಎಂಬುವುದು ಗೊತ್ತಾಗುತ್ತಿದೆ. ನಾನು ನೀಡಿದ ಮಾಹಿತಿ ಅವರ ಬಳಿ ಇಲ್ಲ ಅಂತ ಹೇಳುತ್ತಿರುವುದು ಆಶ್ಚರ್ಯಕರವಾದ ಸಂಗತಿ. ಕೆಲವು ತಿಂಗಳ ಹಿಂದೆ ಅಭ್ಯರ್ಥಿಗಳು ಸಿಎಂ ಹಾಗೂ ಡಿಜಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಜನವರಿ 22 ರಂದು ಹೋಮ್ ಮಿನಿಸ್ಟರ್, ಸೆಲೆಕ್ಟ್ ಆಗದೇ ಇರುವವರು ಹೀಗೆ ಆರೋಪ ಮಾಡಿದ್ದಾರೆ ಅಂತ ಹೇಳಿದ್ದಾರೆ.
ನೇಮಕಾತಿ ತಡೆ ಹಿಡಿದ ಬಗ್ಗೆ ನಿಮಗೆ ತಿಳಿದಿಲ್ವಾ. ಪ್ರಭು ಚೌಹಾಣ್ ಅವರು ಅವ್ಯವಹಾರ ಆಗಿರುವ ಬಗ್ಗೆ ಸಿಎಂಗೆ ಪತ್ರ ಬರೆದಿದ್ದಾರೆ ಎಂದಿದ್ದಾರೆ.

PRABHU CHWAN

ಸರ್ಕಾರ ಕತ್ತೆ ಕಾಯ್ತಿದೆಯಾ? ಕಡ್ಲೆಪುರಿ ತಿನ್ನುತ್ತಿದೆಯಾ? ಕೋಲಾಟ ಆಡುತ್ತಿದೆಯಾ? ನನ್ನ ಬಳಿ ಇನ್ಯಾವ ಸಾಕ್ಷಿ ಕೇಳುತ್ತಿದ್ದೀರಾ? ಆಡಿಯೋ ರಿಲೀಸ್ ಆಗಿ ಮೂರು ದಿನವಾಯಿತು. ಯಾಕೆ ಎಫ್‍ಐಆರ್ ಮಾಡುತ್ತಿಲ್ಲ. ಈಗಿನ ಹೋಂ ಮಿನಿಸ್ಟರ್‌ಗೆ ಯಾಕೆ ವಿಚಾರಣೆಗೆ ನೋಟೀಸ್ ಕೊಟ್ಟಿಲ್ಲ. ಎಡಿಜಿಪಿ ನೇತೃತ್ವದಲ್ಲಿ ನೇಮಕಾತಿ ನಡೆದಿರುತ್ತದೆ. ಯಾರ ನೇತೃತ್ವದಲ್ಲಿ ನೇಮಕಾತಿಯಾಗಿರುತ್ತದೆಯೋ ಅವರನ್ನು ಯಾಕೆ ವಿಚಾರಣೆಗೆ ಕರೆಯುತ್ತಿಲ್ಲ. ಇದನ್ನು ಸಾರ್ವಜನಿಕರು ಮುಂದೆ ಇಟ್ಟರೆ ಅವರಿಗೂ ನೋಟೀಸ್ ಕೊಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

araga jnanendra 1

ದಿವ್ಯಾ ಅವರ ಮನೆಗೆ ಕೆಲವು ದಿನಗಳ ಹಿಂದೆ ಗೃಹ ಸಚಿವರು ಹೋಗಿದ್ದಾರೆ. ಸನ್ಮಾನ ಮಾಡಿಸಿಕೊಂಡು ಡ್ರೈ ಫ್ರೂಟ್ಸ್ ತಿಂದು ಬಂದಿದ್ದಾರೆ. ಅನೇಕ ಬಿಜೆಪಿ ನಾಯಕರ ಜೊತೆ ಅವರು ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಅವರು ನಮ್ಮ ಕಾರ್ಯಕರ್ತೆ ಅಲ್ಲ ಅಂತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‍ನಲ್ಲೂ ಗೋಲ್ಮಾಲ್- ಕಾಸು ಕೊಟ್ರೆ ಸರ್ಕಾರಿ ಹುದ್ದೆ..?

ನಾನು ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೂಡಲೇ ನನ್ನನ್ನ ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗುತ್ತದೆ. ಅಂತರಾಷ್ಟ್ರೀಯ ಸಂಖ್ಯೆಗಳಿಂದ ಬೆದರಿಕೆ ಕರೆ ಬರುತ್ತಿದೆ. ಇಶ್ಯೂ ಡೈವರ್ಟ್ ಮಾಡುವುದಕ್ಕೆ ನನಗೆ ನೋಟಿಸ್ ಕೊಟ್ಟಿದ್ದಾರೆ ತನಿಖೆ ಉದ್ದೇಶದಿಂದ ಅಲ್ಲ. ನಾನು ಸಿಐಡಿ ಕಚೇರಿಗೆ ನೇರವಾಗಿ ಹೋಗಲ್ಲ. ಲಿಖಿತ ಮೂಲಕ ಅಧಿಕೃತವಾಗಿ ಉತ್ತರ ಕೊಡುತ್ತೇನೆ. ನನ್ನ ಪಾತ್ರ ಇದೆ ಅಂದ ಸಚಿವರಿಗೆ ಕಾಮನ್ ಸೆನ್ಸ್ ಇಲ್ವಾ? ಖರ್ಗೆ ಸಾಹೇಬರಿಗೆ 5 ಬಾರಿ, ನನಗೆ 3 ಬಾರಿ ಬೆದರಿಕೆ ಕರೆಗಳು ಬಂದಿವೆ. ಆಗ ಥ್ರೆಟ್ ಬೇರೆ ಇತ್ತು. ಈಗ ನನಗೆ ಇಂಟರ್ ನ್ಯಾಷನಲ್ ನಂಬರ್‌ನಿಂದ ಬೆದರಿಕೆ ಕರೆ ನಿನ್ನೆ ಬಂದಿದೆ. 18-20 ಸೆಕೆಂಡ್ ಕರೆ ಬಂದಿದ್ದು, ಹಿಂದಿಯಲ್ಲಿ ಮಾತನಾಡಿದರು ನಿನ್ನದು ಜಾಸ್ತಿ ಆಯ್ತು. ನಮ್ಮ ಸರ್ಕಾರ ಎರಡೂ ಕಡೆ ಇದೆ ಎಂದರು. ನೀನು ಯಾರಪ್ಪ ಎಂದು ಕೇಳಿದರೆ ಕಾಲ್ ಕಟ್ ಮಾಡಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

MALLIKARJUNA KHERGE

ಜಾÐನಜ್ಯೋತಿ ತರಬೇತಿ ಸಂಸ್ಥೆ ಎಕ್ಸಾಂ ಸೆಂಟರ್ ಅಲ್ಲ ಅಂತ ಕಲಬುರಗಿಯಲ್ಲಿ ಲೆಟರ್ ಕೊಟ್ಟಿದ್ದಾರೆ. ಸುನೀಲ್ ಕುಮಾರ್ ಪ್ರಿಯಾಂಕ್ ತನಿಖೆ ಮಾಡಿ ಅಂತಾರೆ, ಸ್ವಾಮಿ ಸುನೀಲ್ ಮೊದಲು ಗೃಹ ಸಚಿವರನ್ನು ತನಿಖೆಗೊಳಪಡಿಸಿ. ಗೃಹ ಸಚಿವರೇ ಆರೋಪಿ ಮನೆಗೆ ಹೋಗಿ ಬರುತ್ತಾರೆ. ಸಿಎಂ, ಗೃಹ ಸಚಿವರಿಗಿಂತ ನಾನು ಪ್ರಭಾವಿಯೇ? ನಾನು ಪ್ರಭಾವಿಯಾಗಿದ್ದರೆ ಅರೆಸ್ಟ್ ಮಾಡಿಸಿ. ದಿವ್ಯಾ ಹಾರಗಿ ಚಿಕ್ಕ ಚಿಕ್ಕ ಮೀನುಗಳಷ್ಟೇ. ಇವರು ಹಣ ಕಲೆಕ್ಟ್ ಮಾಡುವವರು. ಅವರು ಕಲೆಕ್ಟ್ ಮಾಡಿದ್ದು ಎಲ್ಲಿಗೆ ಹೋಗುತ್ತದೆ. ಅದು ಬೆಂಗಳೂರಿಗೆ ಬರುತ್ತದೆ. ಅಧಿಕಾರಿಗಳಿಗೆ, ಇವರಿಗೆ ಹೋಗುತ್ತದೆ. ಹಣ, ಅಧಿಕಾರಿ, ಶಾಸಕರು, ಬಿಜೆಪಿ ಕಚೇರಿಗೂ ಹೋಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ 15 ಮಂದಿ ಅಸ್ವಸ್ಥ

ಇದೇ ವೇಳೆ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಗಂಡಸ್ತನ ತೋರಿಸಿ ಅಂತ ಉಗಿಯುತ್ತಿದ್ದಾರೆ. ಗೃಹ ಸಚಿವರು ಸರಿ ಇಲ್ಲ ಅಂತ ಉಗಿಯುತ್ತಿದ್ದಾರೆ. ಯುವಕರು ಹುದ್ದೆ ಬಿಟ್ಟುಹೋಗಿ ಅಂತಾರೆ. ಒಂದೊಂದೇ ಅಕ್ರಮಗಳು ಹೊರಬರುತ್ತಿವೆ. ಬಹಳಷ್ಟು ಯುವಕರ ಬದುಕು ಕಿತ್ತುಕೊಳ್ಳುತ್ತಿದ್ದಾರೆ. ಕೋಟಿ ಖರ್ಚು ಮಾಡಿ ಹುದ್ದೆ ಪಡೆದವರು ಏನು ಮಾಡುತ್ತಾರೆ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡ್ತಾರಾ? ಸಾರ್ವಜನಿಕರ ಜೇಬಿಗೆ ಕೈ ಹಾಕುತ್ತಾರೆ. ದಿವ್ಯಾ ಹಾಗರಗಿ ಎಲ್ಲಿ ಪತ್ತೆಯಿಲ್ಲ. ಇಲ್ಲಿಯವರೆಗೆ ಅವರನ್ನು ರಕ್ಷಣೆ ಮಾಡಿಕೊಳ್ಳುತ್ತಿರುವುದೇಕೆ? ಎಲ್ಲಿದ್ದಾರೆ ಪ್ರಮುಖ ಆರೋಪಿ ದಿವ್ಯಾ ಹಾಗರಗಿ, ಹಾಗರಗಿ ಎಲ್ಲಿ ಅಂತ ಜನ ಕೇಳುತ್ತಿದ್ದಾರೆ. ಮೊದಲು ಅವರನ್ನ ಪತ್ತೆ ಹಚ್ಚುವ ಕೆಲಸ ಮಾಡಿ. ಅವರನ್ನು ರಕ್ಷಣೆ ಮಾಡುವ ಕೆಲಸ ಮಾಡಬೇಡಿ. ಸಾವಿರಾರು ಯುವಕರ ಭವಿಷ್ಯ ಹಾಳಾಗುತ್ತಿದೆ. ಪ್ರಕರಣದ ತನಿಖೆಯನ್ನ ಗಂಭೀರವಾಗಿ ಮಾಡಿ ಎಂದು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *