ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಸ್ವಾಮೀಜಿಗೆ ಜಾಮೀನು

Public TV
1 Min Read
Rape Threat

ಲಕ್ನೋ: ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಮಹಶ್ರೀ ಶ್ರೀ ಲಕ್ಷ್ಮಣ್‌ ದಾಸ್‌ ಉದಾಸೀನ್‌ ಆಶ್ರಮದ ಬಜರಂಗ್‌ ಮುನಿ ದಾಸ್‌ಗೆ ಕೋರ್ಟ್‌ ಜಾಮೀನು ನೀಡಿದೆ.

ಉತ್ತರ ಪ್ರದೇಶದ ಸೀತಾಪುರದ ಖೈರಬಾದ್‌ ಪಟ್ಟಣದಲ್ಲಿರುವ ಆಶ್ರಮದ ಬಜರಂಗ್‌ ಮುನಿ ದಾಸ್‌ಗೆ ಜಿಲ್ಲಾ ನ್ಯಾಯಾಧೀಶರಾದ ಸಂಜಯ್‌ ಕುಮಾರ್‌ ಅವರು ಜಾಮೀನು ನೀಡಿದ್ದಾರೆ. ಇದನ್ನೂ ಓದಿ: ಅಪಹರಿಸಿ, ಸಾರ್ವಜನಿಕವಾಗಿ ಅತ್ಯಾಚಾರ ಮಾಡ್ತೀನಿ: ಮುಸ್ಲಿಂ ಮಹಿಳೆಯರಿಗೆ ಸ್ವಾಮೀಜಿ ಬೆದರಿಕೆ

court order law

ನನ್ನ ಹೇಳಿಕೆಗೆ ಯಾವುದೇ ವಿಷಾದ ಹೊಂದಿಲ್ಲ. ಧರ್ಮಕ್ಕಾಗಿ ನೂರು ಬಾರಿ ಬೇಕಾದರೂ ಜೈಲಿಗೆ ಹೋಗಲು ಸಿದ್ಧನಿದ್ದೇನೆ. ನನ್ನ ಮೇಲೆ ಯಾವುದೇ ದಾಳಿ ನಡೆದರೂ ಎದುರಿಸಲು ಸಿದ್ಧ ಎಂಬುದು ಮುನಿ ದಾಸ್‌ ಪ್ರತಿಕ್ರಿಯಿಸಿದ್ದಾನೆ.

ಎಪ್ರಿಲ್ 2 ರಂದು ಮುನಿ ತನ್ನ ಭಾಷಣದ ಎರಡು ನಿಮಿಷಗಳ ವೀಡಿಯೋದಲ್ಲಿ, ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಮಾಡುವ ಬೆದರಿಕೆ ಒಡ್ಡಿದ ಮಾತುಗಳನ್ನಾಡಿದ್ದ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಬಜರಂಗ ಮುನಿ ಅರೆಸ್ಟ್‌

bajrang muni das

ಬಜರಂಗ ಮುನಿ ವಿವಾದಿತ ಹೇಳಿಕೆಗೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಮುನಿ ಬಂಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಒತ್ತಾಯದ ಮಾತುಗಳು ಕೇಳಿಬಂದಿದ್ದವು. ಇದಾದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *