ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕು ಶೇ.50ಕ್ಕೆ ಏರಿಕೆ – ಕಠಿಣ ಕ್ರಮಕ್ಕೂ ಬಗ್ಗದ ಜನ

Public TV
1 Min Read
COVID HIKE 2

ಲಕ್ನೋ: ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಲ್ಲಿನ ಗೌತಮಬುದ್ಧ ಜಿಲ್ಲೆಯೊಂದರಲ್ಲೇ ಒಟ್ಟು ಸೋಂಕಿತರ ಶೇ.50 ರಷ್ಟು ಪ್ರಕರಣಗಳು ಪತ್ತೆಯಾಗಿದೆ. ಉತ್ತರಪ್ರದೇಶದ ಒಟ್ಟು 980 ಪ್ರಕರಣಗಳ ಪೈಕಿ 529 ಪ್ರಕರಣ ಜಿಲ್ಲೆಯೊಂದರಲ್ಲೇ ಇದೆ ಎಂದು ಹೇಳಲಾಗಿದೆ.

COVID school

ಕಳೆದ 24 ಗಂಟೆಯಲ್ಲಿ ಇದೊಂದೇ ಜಿಲ್ಲೆಯಲ್ಲಿ 103 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 529ಕ್ಕೆ ಏರಿಕೆಯಾಗಿದೆ. ಕೆಲ ದಿನಗಳಿಂದ ಈಚೆಗೆ ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಕೋವಿಡ್ ಗಣನೀಯವಾಗಿ ಏರಿಕೆಯಾಗಿದೆ. ಆದರೂ ಸರ್ಕಾರ ಹಾಗೂ ಆರೋಗ್ಯಾಧಿಕಾರಿಗಳು ಯಾವುದೇ ಭಯವಿಲ್ಲ ಎನ್ನುತ್ತಿದ್ದಾರೆ. ಲಸಿಕೆ ಪಡೆಯದಿರುವುದು ಹಾಗೂ ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ವಿಜಯ್‌ ಮಲ್ಯ, ನೀರವ್‌ ಮೋದಿ ಬಗ್ಗೆ ಬೋರಿಸ್‌ ಹೇಳಿದ್ದೇನು?

covid india

ಉತ್ತರಪ್ರದೇಶದಲ್ಲಿ ಈಗಾಗಲೇ ದೆಹಲಿ ಮಾದರಿಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ವಿಧಿಸಲಾಗಿದೆ. 7 ಗೌತಮಬುದ್ಧನಗರ, ಗಾಝಿಯಾಬಾದ್, ಹಾಂಪುರ್, ಮೀರತ್, ಬುಲಂದ್‌ಶಹರ್ ಹಾಗೂ ಭಗ್‌ಪತ್, ಲಕ್ನೋ, ಗುರುಗ್ರಾಮ್, ಜ್ಹಗ್ಗರ್, ಸಾನಿಪತ್ ಹಾಗೂ ಫರಿದಾಬಾದ್‌ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ನಿಮಯ ಉಲ್ಲಂಘಿಸಿದ ಅನೇಕ ಮಂದಿಗೆ ಈಗಾಗಲೇ ದಂಡ ವಿಧಿಸಲಾಗಿದೆ. 2ನೇ ಬಾರಿಗೆ ನಿಯಮ ಉಲ್ಲಂಘಿಸಿದವರಿಗೆ ಐಪಿಸಿ 188 ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ: ಬ್ರಿಟನ್ ಪ್ರಧಾನಿ ಬೋರಿಸ್

Share This Article
Leave a Comment

Leave a Reply

Your email address will not be published. Required fields are marked *