ಮಸೀದಿಯ ಮೇಲೆ ನಾವೇನು ಬಾಂಬ್ ಹಾಕಿದ್ದೇವಾ?: ಮುತಾಲಿಕ್ ಗರಂ

Public TV
2 Min Read
pramod muthalik 5

ಬೆಂಗಳೂರು: ಮುಸ್ಲಿಂ ಸಮುದಾಯ ಮೊದಲು ಕ್ಷಮೆ ಕೇಳಲಿ. ಸುಖಾಸುಮ್ಮನೆ ಗಲಾಟೆಗೆ ಕಾರಣ ಹುಡುಕೋದಲ್ಲ. ಮಸೀದಿಯ ಮೇಲೆ ನಾವೇನ್ ಬಾಂಬ್ ಹಾಕಿದ್ದೇವಾ, ಜೈ ಶ್ರೀರಾಮ್ ಅಂತಾ ಲೇಸರ್ ಲೈಟ್ ಬಿಟ್ಟಿದ್ದಾರೆ ಅಷ್ಟೇ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

LASER LITE

ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವು ತಲವಾರ್ ಹಿಡ್ಕೊಂಡು ಬಂದಿದ್ದೇವಾ. ಈಶ್ವರ ಅಲ್ಲಾ ತೇರೇನಾಮ್ ಅನ್ನಲ್ವಾ. ಶ್ರೀರಾಮ ಬಂದ ತಕ್ಷಣ ಮಸೀದಿ ಅಪವಿತ್ರ ಆಗಲ್ಲ. ಹುಬ್ಬಳ್ಳಿ ಗಲಭೆ ಕುರಿತಾಗಿ ವಾಸೀಂ ಮೌಲ್ವಿ ಸುಳ್ಳು ಹೇಳುತ್ತಿದ್ದಾನೆ. ಮೊದಲು ಆತನನ್ನು ಒದ್ದು ಒಳಗಡೆ ಹಾಕಿ. ಮೊಬೈಲ್ ಸೀಝ್ ಮಾಡಬೇಕು ಎಲ್ಲಾ ಸತ್ಯ ಗೊತ್ತಾಗುತ್ತೆ. ಆತ ತಪ್ಪಿತಸ್ಥ ಅಲ್ಲ ಅಂದ್ರೆ ಯಾಕೆ ಕಣ್ಮರೆಯಾಗ್ತಾನೆ? ಹುಬ್ಬಳ್ಳಿ ಗಲಭೆಗೆ ಆತನೇ ಕಾರಣ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಹೋರಾಟಗಾರ್ತಿಯರು ಸೆಕೆಂಡ್ ಪಿಯುಸಿ ಪರೀಕ್ಷೆ ಬರೆಯೋದು ಡೌಟ್

HUBBALLI VASIM

ದೇಗುಲ ಒಡೆದವರು, ಪೊಲೀಸರಿಗೆ ಹೊಡೆದವರು ಠಾಣೆಯನ್ನು ಧ್ವಂಸ ಮಾಡೋಕೆ ಬಂದವರು ಅಮಾಯಕರಾ? ಏನ್ ಮಾತನಾಡ್ತಾ ಇದ್ದೀರಾ ನೀವು ಎಂದು ಸಚಿವ ಆನಂದ್ ಸಿಂಗ್ ವಿರುದ್ಧ ಮುತಾಲಿಕ್ ಗರಂ ಆದರು. ಇದನ್ನೂ ಓದಿ: ಕಲ್ಲು ಹೊಡೆಯುವ ಸಂಸ್ಕೃತಿ ಮುಸ್ಲಿಮರಲ್ಲಷ್ಟೇ ಇದೆ: ಪ್ರತಾಪ್‌ ಸಿಂಹ

ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಬಳಸಿಕೊಳ್ತಾ ಇರಬಹುದು. ಆದರೆ ಅವರು ಅಮಾಯಕರಲ್ಲ. ದೇಗುಲ ಹಾನಿ ಮಾಡಿದವರ ಬುದ್ಧಿಗೆ ಏನಾಗಿದೆ. ಅವರು ಹೊಟ್ಟೆಗೆ ಸೆಗಣಿ ತಿಂತಾರ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಯಾಕೆ ಮೃದುಧೋರಣೆ ತೆಗೆದುಕೊಂಡಿದ್ದಾರೆ ಇದು ಸರಿಯಲ್ಲ. ಬಿಜೆಪಿ ಸರ್ಕಾರ ಮತ್ತೆ ಗಲಭೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಹಿಜಬ್ ತೀರ್ಪು ಬಂದಾಗ ತೀರ್ಪನ್ನು ದಿಕ್ಕರಿಸಿದರು ಆಗ ಕೂಡ ಸರ್ಕಾರ ಸುಮ್ಮನಿತ್ತು. ಹಾಗಾಗಿ ಹುಬ್ಬಳ್ಳಿಯಂತಹ ಗಲಭೆಗಳು ನಡೆದಿದೆ ಎಂದರು.

HUBBALLI_ MOULVI 3

ಕರ್ನಾಟಕದಲ್ಲಿ ಶಾಂತಿ ಮೂಡಲು ಮೊದಲು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಕಾನೂನಿನ ಪ್ರಕಾರ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳಲಿ. ನಿಮ್ಮ ದೌರ್ಬಲ್ಯಕ್ಕೆ ಹಿಂದೂ ಸಮಾಜ ಬಲಿಯಾಗಬೇಕಾ? ಮೊದಲು ಕಿಡಿಗೇಡಿಗಳ ವಿರುದ್ಧ ಕೋಕಾ ಕಾಯ್ದೆ ಹಾಕಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತರು ಮುಗ್ಧ ಜನರು, ಅಮಾಯಕರು: ಆನಂದ್ ಸಿಂಗ್

Share This Article
Leave a Comment

Leave a Reply

Your email address will not be published. Required fields are marked *