ರಾಮನವಮಿ ಮೆರವಣಿಗೆಯನ್ನು ಪಾಕಿಸ್ತಾನದಲ್ಲಿ ನಡೆಸಲು ಸಾಧ್ಯವೇ? ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌

Public TV
1 Min Read
giriraj singh

ನವದೆಹಲಿ: ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರಗಳನ್ನು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಪ್ರಶ್ನಿಸಿದ್ದಾರೆ. ರಾಮನವಮಿ ಮೆರವಣಿಗೆಯನ್ನು ಭಾರತದಲ್ಲಲ್ಲದೇ ಪಾಕಿಸ್ತಾನದಲ್ಲಿ ನಡೆಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.

ಈ ದೇಶದಲ್ಲಿ ಇಲ್ಲದಿದ್ದರೆ ರಾಮನವಮಿ ಮೆರವಣಿಗೆಗಳನ್ನು ಎಲ್ಲಿ ನಡೆಸಬೇಕು? ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿಯೇ ಎಂದು ಸಿಂಗ್ ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಧಾರ್ಮಿಕ ಮೆರವಣಿಗೆಗೂ ಮುನ್ನ ಆಯೋಜಕರಿಂದ ಅಫಿಡವಿಟ್ ಕಡ್ಡಾಯ

RAMANAVAMI

1947ರಲ್ಲಿ ಧರ್ಮ ವಿಭಜನೆಯಾಯಿತು. ಈಗ ಅಸಾದುದ್ದೀನ್ ಓವೈಸಿಯಂಥವರು ಈ ಬೀದಿ, ಆ ಬೀದಿಗೆ ಏಕೆ ಹೋಗುತ್ತಾರೆ ಎಂದು ಕೇಳುತ್ತಾರೆ. ಅದನ್ನೆಲ್ಲ ಹಿಂದೂ ಓಣಿ, ಮುಸ್ಲಿಂ ಬೀದಿ ಎಂದು ವಿಂಗಡಿಸಿದ್ದಾರೆಯೇ? ಈ ರೀತಿಯ ಮನಸ್ಥಿತಿಯಿದ್ದರೆ ವಿಭಜನೆಯಾಗುತ್ತದೆ. ಪಾಕಿಸ್ತಾನಕ್ಕೆ ಹೋಗಬೇಕಾದವರು ಅಲ್ಲಿಗೆ ಹೋದರು. ನಮ್ಮ ದೇಶದಲ್ಲಿ ನಮ್ಮ ಧಾರ್ಮಿಕ ಆಚರಣೆಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ವಾತಂತ್ರ್ಯ ನಂತರ ಹೊಸ ಮಸೀದಿಗಳ ನಿರ್ಮಾಣವನ್ನು ಭಾರತದಲ್ಲಿ ಎಂದಿಗೂ ವಿರೋಧಿಸಲಿಲ್ಲ. ಪಾಕಿಸ್ತಾನದಲ್ಲಿ ದೇವಾಲಯಗಳನ್ನು ಕೆಡವಲಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ

RAMANAVAMI

ಕರ್ನಾಟಕದ ಹುಬ್ಬಳ್ಳಿ ಮತ್ತು ದೆಹಲಿಯ ಜಹಂಗಿರ್‌ಪುರಿಯಲ್ಲಿ ಕೋಮುಗಲಭೆ ವಿರೋಧಿಸಿ ಗಿರಿರಾಜ್‌ ಸಿಂಗ್‌ ಮಾತನಾಡಿದ್ದಾರೆ. ಗುಜರಾತ್‌, ಮಧ್ಯಪ್ರದೇಶ, ಜಾರ್ಖಂಡ್‌, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವ ಘರ್ಷಣೆ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *