ಬನಾಸ್ ಡೈರಿಯಲ್ಲಿನ ಉಪಕ್ರಮಗಳು ರೈತರನ್ನು ಸಬಲಗೊಳಿಸುತ್ತದೆ: ಪ್ರಧಾನಿ ಮೋದಿ

Public TV
2 Min Read
MODi

ನವದೆಹಲಿ: ಬನಾಸ್ ಡೈರಿಯಲ್ಲಿನ ಉಪಕ್ರಮಗಳು ರೈತರನ್ನು ಸಬಲಗೊಳಿಸುತ್ತದೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಇಂದು ಗುಜರಾತ್‍ನ ಬನಸ್ಕಾಂತದಲ್ಲಿರುವ ಬನಾಸ್ ಡೈರಿ ಸಂಕುಲ್‍ನಲ್ಲಿ ಅತ್ಯಾಧುನಿಕ ಡೈರಿ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವ ಕೇಂದ್ರವಾಗಿದೆ. ಬನಾಸ್ ಡೈರಿಯಲ್ಲಿನ ಅಭಿವೃದ್ಧಿ ಉಪಕ್ರಮಗಳು ರೈತರನ್ನು ಸಬಲೀಕರಣಗೊಳಿಸುತ್ತದೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಆತ್ಮನಿರ್ಭರ ಭಾರತ್ ಅಭಿಯಾನಕ್ಕೆ ಸಹಕಾರಿ ಚಳುವಳಿ ಹೇಗೆ ಶಕ್ತಿ ನೀಡುತ್ತದೆ ಎಂಬುದನ್ನು ನಾವು ಇಲ್ಲಿ ಅನುಭವಿಸಬಹುದು ಎಂದು ಡೈರಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರು ಇಂದು ಬನಸ್ಕಾಂತದಲ್ಲಿರುವ ಬನಾಸ್ ಡೈರಿ ಸಂಕುಲದಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಗುಜರಾತಿನ ಅಭಿವೃದ್ಧಿಯ ಮಟ್ಟವು ಪ್ರತಿ ಗುಜರಾತಿಯನ್ನು ಹೆಮ್ಮೆಪಡುವಂತೆ ಮಾಡುತ್ತದೆ. ನಾನು ನಿನ್ನೆ ವಿದ್ಯಾ ಸಮೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದೆ, ಅಲ್ಲಿ ತಂತ್ರಜ್ಞಾನದ ಬಳಕೆ ಪ್ರಭಾವಶಾಲಿಯಾಗಿದೆ. ಇತರ ರಾಜ್ಯಗಳ ಶಿಕ್ಷಣ ಇಲಾಖೆಗಳು ಈ ಕೇಂದ್ರಕ್ಕೆ ಭೇಟಿ ನೀಡುವಂತೆ ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅವರು ಈ ಹಿಂದೆ 2016ರಲ್ಲಿ ಡೈರಿಗೆ ಭೇಟಿ ನೀಡಿದ್ದ ಫೋಟೋವನ್ನು ಹಂಚಿಕೊಂಡಿದ್ದಾರೆ. ಬನಾಸ್ ಡೈರಿಗೆ ಮತ್ತೊಮ್ಮೆ ಭೇಟಿ ನೀಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಾನು 2016ರಲ್ಲಿ ಕೊನೆಯದಾಗಿ ಡೈರಿಗೆ ಭೇಟಿ ನೀಡಿದ್ದೇನೆ. ಆ ಸಮಯದಲ್ಲಿ ಡೈರಿಯ ಉತ್ಪನ್ನಗಳನ್ನು ಪ್ರಾರಂಭಿಸಲಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.

ಬನಸ್ಕಾಂತದ ಜನರ ಕಠಿಣ ಪರಿಶ್ರಮ ಮತ್ತು ಸಹಿಷ್ಣುತೆಯ ಮನೋಭಾವಕ್ಕಾಗಿ ನಾನು ಶ್ಲಾಘಿಸಲು ಬಯಸುತ್ತೇನೆ. ಈ ಜಿಲ್ಲೆಯ ಕೃಷಿಯಲ್ಲಿ ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದಾರೆ. ನೀರಿನ ಸಂರಕ್ಷಣೆಯತ್ತ ಗಮನಹರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *