ಬೀದರ್‌ ಹಳೇ ವಿದ್ಯಾರ್ಥಿ ಈಗ ಪಂಜಾಬ್ ಸ್ಪೀಕರ್

Public TV
1 Min Read
Guru nanak Dev 1

ಬೀದರ್ : ಗಡಿ ಜಿಲ್ಲೆ ಬೀದರ್‌ನಲ್ಲಿ ಇಂಜಿನಿಯರಿಂಗ್ ಓದಿದ್ದ ವಿದ್ಯಾರ್ಥಿ ಈಗ ಪಂಜಾಬ್ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

1993ರ ಬ್ಯಾಚ್ ವಿದ್ಯಾರ್ಥಿ ಕುಲ್ತಾರ್ ಸಿಂಗ್ ಬೀದರ್ ಗುರುನಾನಕ್ ದೇವ್ ಇಂಜಿನಿಯರಿಂಗ್  ಕಾಲೇಜಿನಲ್ಲಿ ಓದಿ ಆಟೋ ಮೊಬೈಲ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರು. ಇದನ್ನೂ ಓದಿ: ಕನ್ನಡದಲ್ಲೂ ಬಂತು ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

Guru nanak Dev

ಪಂಜಾಬ್ ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುನಾನಕ್ ಶಿಕ್ಷಣ ಸಂಸ್ಥೆಯ ಬಲಬೀರ್ ಸಿಂಗ್ ಹಾಗೂ ಅವರ ಜೊತೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಭಾಗಿಯಾಗಿ ಸ್ಪೀಕರ್‌ಗೆ ಬಿದ್ರಿ ಗಿಫ್ಟ್ ನೀಡಿ ಸನ್ಮಾನಿಸಿದರು.

Guru nanak Dev 2

ಇತ್ತೀಚೆಗಷ್ಟೇ ಪಂಜಾಬ್‍ನಲ್ಲಿ ಎಎಪಿ ಪಕ್ಷ ಭರ್ಜರಿ ಜಯಗಳಿಸಿ ಅಧಿಕಾರದ ಗದ್ದುಗೆ ಏರಿತ್ತು. ಈಗಾ ಬೀದರ್ ಹಳೇ ವಿದ್ಯಾರ್ಥಿ ಪಂಜಾಬ್ ವಿಧಾನಸಭಾಧ್ಯಕ್ಷರಾಗಿದ್ದು ಜಿಲ್ಲೆಯ ಜನರಿಗೆ ಹರ್ಷವನ್ನುಂಟು ಮಾಡಿದೆ. ಕುಲ್ತಾರ್‌ ಸಿಂಗ್‌ ಕೊಟಕಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ನಮ್ಮಿಂದ ತಪ್ಪಾಗಿದೆ: ಕ್ಷಮೆ ಕೇಳಿದ ಶ್ರೀಲಂಕಾ ಅಧ್ಯಕ್ಷ

Share This Article
Leave a Comment

Leave a Reply

Your email address will not be published. Required fields are marked *