ಹನುಮಾನ್ ಮೆರವಣಿಗೆಗೆ ಪುಷ್ಪವೃಷ್ಟಿ ಸುರಿಸಿದ ಮುಸ್ಲಿಮರು

Public TV
1 Min Read
hanuman bhupal

ಭೋಪಾಲ್: ಹನುಮ ಜಯಂತಿ ಅಂಗವಾಗಿ ಭೋಪಾಲ್‍ನಲ್ಲಿ ಮೆರವಣಿಗೆ ನಡೆಯಿತ್ತು. ಈ ಮೆರವಣಿಗೆಯಲ್ಲಿ ಮುಸ್ಲಿಮರ ತಂಡ ತಮ್ಮ ಹಿಂದೂ ಸಹೋದರರನ್ನು ಸ್ವಾಗತಿಸಿದ ರೀತಿ ಎಲ್ಲರ ಗಮನ ಸೆಳೆಯಿತು. ಪ್ರಸ್ತುತ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

muslim bhupal

ಶನಿವಾರ ಸಂಜೆ ಹನುಮ ಜಯಂತಿ ಮೆರವಣಿಯ ಹಿನ್ನೆಲೆ ಭೋಪಾಲ್‍ನಲ್ಲಿ ಭಾರೀ ಪೊಲೀಸ್ ಭದ್ರತೆ ಇತ್ತು. ಈ ವೇಳೆ ದೇವರ ಮೆರವಣಿಗೆ ಚಾರ್ ಬಟ್ಟಿ ಪ್ರದೇಶವನ್ನು ತಲುಪುತ್ತಿದ್ದಂತೆ, ಮುಸ್ಲಿಂ ಸಮುದಾಯದ ಜನರು ‘ರಥಯಾತ್ರೆ'(ಮೆರವಣಿಗೆ)ಯನ್ನು ಹೂವು ಮಳೆ ಸುರಿಸುವ ಮೂಲಕ ಸ್ವಾಗತಿಸಿದರು. ಭೋಪಾಲ್ ಮಾತ್ರವಲ್ಲ, ರಾಜ್ಯದ ಇತರ ಹಲವು ಭಾಗಗಳಲ್ಲಿಯೂ ಮುಸ್ಲಿಮರು ಹನುಮಾನ್ ಶೋಭಾ ಯಾತ್ರೆಯನ್ನು ಹೂವಿನೊಂದಿಗೆ ಸ್ವಾಗತಿಸಿದರು. ಇದನ್ನೂ ಓದಿ: ನನ್ನನ್ನು ಪದಚ್ಯುತಿಗೊಳಿಸಲು ವಿದೇಶಿ ಸಂಚು ನಡೆದಿದೆ: ಇಮ್ರಾನ್ ಆರೋಪ

ಭೋಪಾಲ್‍ನಲ್ಲಿ, ಭಗವಾನ್ ಹನುಮಾನ್ ಘೋಷಣೆಗಳ ನಡುವೆ ಮುಸ್ಲಿಮರ ಮನೆಗಳ ಮೇಲ್ಛಾವಣಿ ಮತ್ತು ಬಾಲ್ಕನಿಗಳಿಂದ ಹೂವುಗಳನ್ನು ಸುರಿಸಲಾಯಿತು. ರಸ್ತೆಗಳು ಮತ್ತು ಕಿರಿದಾದ ಬೀದಿಗಳಲ್ಲಿ ಎರಡೂ(ಹಿಂದೂ-ಮುಸ್ಲಿಂ) ಸಮುದಾಯಗಳ ಜನರು ತಮ್ಮ ಕೈಯಲ್ಲಿ ಹೂವುಗಳನ್ನು ಹಿಡಿದುಕೊಂಡು ಹನುಮಾನ್ ರಥಕ್ಕೆ ಹಾಕುತ್ತಿದ್ದರು.

hanuman bhupal 2

ಜಯಂತಿ ಕುರಿತು ಮಾತನಾಡಿದ ಮುಸ್ಲಿಂ ಬಂಧುಗಳು, ಹನುಮಾನ್ ಜಯಂತಿಯ ಸಂದರ್ಭದಲ್ಲಿ ನಮ್ಮ ಹಿಂದೂ ಸಹೋದರರನ್ನು ಸ್ವಾಗತಿಸಲು ನಾವು ಇಲ್ಲಿದ್ದೇವೆ. ಭೋಪಾಲ್ ಸೌಹಾರ್ದತೆ ಮತ್ತು ಭ್ರಾತೃತ್ವಕ್ಕೆ ಹೆಸರುವಾಸಿಯಾಗಿದೆ. ಅದನ್ನು ಅಡ್ಡಿಪಡಿಸಲು ನಾವು ಯಾರನ್ನೂ ಬಿಡುವುದಿಲ್ಲ ಎಂದು ಜುಬೇರ್ ಖಾನ್ ಅವರು ಇತರ ಅನೇಕ ಸ್ನೇಹಿತರೊಂದಿಗೆ ಹೇಳಿದರು. ಇದನ್ನೂ ಓದಿ: ದೇವಸ್ಥಾನದ ಮೇಲೆ ದಾಳಿ ಮಾಡಿದ್ದು ಖಂಡನೀಯ: ಮುತಾಲಿಕ್ 

hanuman bhupal 3

ಭೋಪಾಲ್‍ನಲ್ಲಿ ಹಿಂದೂ-ಮುಸ್ಲಿಮರು ಒಟ್ಟಿಗೆ ವಾಸಿಸುವ ಮತ್ತು ಪರಸ್ಪರ ಸಹಾಯ ಮಾಡುವ ಗಂಗಾ-ಯಮುನಾ ಸಂಸ್ಕøತಿಯಿದೆ. ಭೋಪಾಲ್‍ನ ನಿಜವಾದ ಸಂಸ್ಕೃತಿಯನ್ನು ತೋರಿಸಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *