ಹಾಸನ: ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರಕಟ್ಟೆಯಲ್ಲಿ ನಡೆಯುತ್ತಿರುವ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಿರುದ್ಧ ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ನಂಜೇಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರಾಜ್ಯದಲ್ಲಿ ಕುಮಾರಣ್ಣನ ತರ ಮುಖ್ಯಮಂತ್ರಿ ಸಿಗಲ್ಲ ನಿಮಗೆ. ಕುಮಾರಣ್ಣ ಯಾವಾಗಲೂ 25, 50 ಸಾವಿರ ರೂ. ದುಬಾರಿ ಬಟ್ಟೆ ಹಾಕಿಕೊಂಡು ಓಡಾಡಲ್ಲ. ಒಂದು ಶರ್ಟ್, ಒಂದು ಪ್ಯಾಂಟ್, ಒಂದು ಜೊತೆ ಚಪ್ಪಲಿ ಹಾಕಿಕೊಂಡು ಯಾವಾಗಲೂ ರೈತರ ಪರ ಚಿಂತನೆ ಮಾಡುವ ಶಕ್ತಿ ಅವರದ್ದಾಗಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಪಾಲಕ್ಕಾಡ್‍ನಲ್ಲಿ RSS ಮುಖಂಡ ಹತ್ಯೆ
ಕಾಂಗ್ರೆಸ್‍ನವರು ಬರಿ ಹನ್ನೆರಡು, ಹದಿಮೂರು ತಿಂಗಳು ಅಧಿಕಾರಕೊಟ್ಟರು. ಈ ಕಾಂಗ್ರೆಸ್‍ನವರು ದರಿದ್ರ ನನ್ಮಕ್ಕಳು, ಅವರ ಜೊತೆ ಹೋಗಬಾರದಿತ್ತು. ಏನೋ ಪಾಪ ಕುಮಾರಸ್ವಾಮಿಯವರು ಹೋಗಿ ಬಿಟ್ಟರು. ಆ ಬಡ್ಡಿಮಕ್ಕಳು ಆವಾಗ್ಲೆ ಅವರ ಅಧಿಕಾರವನ್ನೇಲ್ಲಾ ಕಿತ್ತುಕೊಂಡುಬಿಟ್ಟರು. ನಮಗೆ ಐದು ವರ್ಷ ಅಧಿಕಾರ ಕೊಟ್ಟಿದ್ದರೆ ರೈತರಪರ ಯಾವ ರೀತಿ ಕೆಲಸ ಮಾಡಬೇಕು ಅನ್ನೋದನ್ನು ತೋರಿಸುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಮೇಕೆದಾಟಿಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದಾರೆ ಈಗ ಮಹದಾಯಿಗೆ ಹೊರಟಿದ್ದಾರೆ: ಪ್ರಜ್ವಲ್ ರೇವಣ್ಣ ಕಿಡಿ