ಮಂತ್ರಿಯಾಗಿದ್ದಾಗ ಕಮಿಷನ್ ಪಡೆದಿದ್ರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ: ಡಿಕೆಶಿ

Public TV
2 Min Read
DKSHI 3

ರಾಮನಗರ: ನಾನು ಮಂತ್ರಿಯಾಗಿದ್ದಾಗ ಯಾರ ಬಳಿಯಾದರೂ ಕಮಿಷನ್ ಪಡೆದುಕೊಂಡಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು. ಆದರೆ ಯಾರಿಗಾದರೂ ಕಮಿಷನ್ ನೀಡಿ ಎಂದು ಕೇಳಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಈಗಿನ ಸರ್ಕಾರದಲ್ಲಿರುವ ಎಲ್ಲಾ ಮಂತ್ರಿಗಳು 40% ಕಮಿಷನ್‌ನ್ನು ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದರು.

Eshwarappa

ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ. ಆತ ಪಂಚಾಯತ್‍ನಲ್ಲಿ ಕೆಲಸ ಮಾಡಿದ್ದಾನೆ. ಪಂಚಾಯತ್ ಮಂತ್ರಿ ಹೇಳದೆ ಕೆಲಸ ಮಾಡಲು ಸಾಧ್ಯನಾ? ಎಂದು ಪ್ರಶ್ನಿಸಿದರು. ಸಂತೋಷ್ ಅವರು ಬೆಳಗ್ಗೆ ಮೋದಿ, ಸಂಜೆ ಬೊಮ್ಮಾಯಿ ಅಂತಿದ್ದರು. ಸಂತೋಷ್ ಪತ್ನಿ ಮಂಗಲ್ಯದ ಸರ, ಚಿನ್ನ ಅಡ ಇಟ್ಟು ಕೆಲಸ ಮಾಡಿಸಿದ್ದಾರೆ ಎಂದು ಅಳುತ್ತಿದ್ದಾಳೆ ಎಂದ ಅವರು, ಬಿಜೆಪಿ ಸರ್ಕಾರ ಕೆಲಸ ಮಾಡಿಸಿದ್ದಾರೆ ಆದರೆ ಹಣ ನೀಡಿಲ್ಲ. ಇದು ದೊಡ್ಡ ಭ್ರಷ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

santosh patil

ಮಾಜಿ ಸಚಿವ ಈಶ್ವರಪ್ಪನನ್ನು ಬಂಧಿಸಬೇಕು, ಬೇರೆಯವರ ಮೇಲೆ ಆರೋಪ ಬಂದಿದ್ದರೇ ಬಿಡುತ್ತಿದ್ರಾ? ಸಿಎಂ, ಗೃಹ ಮಂತ್ರಿ ಈಗೇ ನಾನಾ ಮಂತ್ರಿಗಳು ಈಶ್ವರಪ್ಪ ನಿರ್ದೋಷಿ ಅಂದಿದ್ದಾರೆ. ಇನ್ನೊಂದು ತಿಂಗಳಲ್ಲಿ ಮಂತ್ರಿ ಆಗುತ್ತಾರೆ ಎಂದಿದ್ದಾರೆ. ಸರ್ಕಾರದಲ್ಲಿರುವವರೇ ಈ ರೀತಿ ಹೇಳಿಕೆ ನೀಡಿದರೆ ತನಿಖೆ ಮಾಡಲು ಸಾಧ್ಯನಾ. ಭ್ರಷ್ಟಾಚಾರ ಸರ್ಕಾರ ಕಿತ್ತೆಸೆಯಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನಾಳೆ ಸಿಎಂ ಇಬ್ರಾಹಿಂ ಪದಗ್ರಹಣ

ಹಿಂದೆ ನಾನು ತಪ್ಪು ಮಾಡಿದ್ದರೆ, ನಮ್ಮ ಮಕ್ಕಳೋ ಮೊಮ್ಮಕ್ಕಳೋ ಅನುಭವಿಸುತ್ತಿದ್ದರು. ಆದರೆ ಈಗ ನಾವೇ ಅನುಭವಿಸಬೇಕಾಗಿದೆ. ನಾವು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಮಾಡಿದ್ದೆವು. ಆಗ ಕೆಂಗಲ್ ಹನುಮಂತಯ್ಯ ಕಟ್ಟಿರುವ ವಿಧಾನಸೌಧದ ಗೋಡೆ ತಟ್ಟಿದ್ದರೆ ಕಾಸು ಕಾಸು ಅನ್ನುತ್ತವೆ ಎಂದು ಟೀಕಿಸಿದರು.

BJP FLAG

ನಾನು ಜೈಲಿಗೆ ಹೋಗಿದ್ದೆ, ಆದರೆ ಮಂಚದ ಕೇಸ್ ಅಥವಾ ಲಂಚದ ಕೇಸ್‍ನಲ್ಲಿ ಹೋಗಿಲ್ಲ. ನಮ್ಮ ನಾಯಕರ ಮನೆ ಮೇಲೂ ರೇಡ್ ಮಾಡಿದ್ದರು. ಇನ್ನೂ ಮುಂದಕ್ಕೂ ನನ್ನ ಬಿಡಲ್ಲ, ನನಗೂ ಗೊತ್ತಿದೆ. ನನಗೆ ಏನೇನೋ ಮಾಡ್ತಾರೆ, ಗೊತ್ತಿದೆ ಎಂದರು.

HDK 1

ನಮ್ಮ ಕುಮಾರಣ್ಣ ಗೋಹತ್ಯೆಗೆ ಯಾಕೆ ಬೆಂಬಲ ನೀಡಲಿಲ್ಲ. ಮೊನ್ನೆ ಈಶ್ವರಪ್ಪ ಲಂಚ ಹೊಡೆದಾಗ ಯಾಕೆ ಮಾತನಾಡಲಿಲ್ಲ. ಆತ್ಮಸಾಕ್ಷಿ ವಿರುದ್ಧವಾಗಿ ರಾಜಕಾರಣ ಮಾಡಬಾರದು. ಈ ದ್ವಂದ್ವ ನೀತಿ ಬೇಡ. ರಾಮನಗರ ಚನ್ನಪಟ್ಟಣ ಮತದಾರರ ಮಾತ್ರ ಗಮನದಲ್ಲಿಟ್ಟುಕೊಂಡು ಮಾತನಾಡವುದು ಬೇಡ ಎಂದು ಹೆಚ್.ಡಿ. ಕುಮರಸ್ವಾಮಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ನಾನು ಪ್ರಧಾನಮಂತ್ರಿಗಳ ಖಾಸಗಿ ಕಾರ್ಯದರ್ಶಿ’ ಎಂದವನ ವಿರುದ್ಧ ದಾಖಲಾಯ್ತು ಎಫ್‍ಐಆರ್

Share This Article
Leave a Comment

Leave a Reply

Your email address will not be published. Required fields are marked *