ಲಂಚವನ್ನು ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ಈಶ್ವರಪ್ಪಗೆ ಹಿಂದೂ ಮಹಾಸಭಾ ಸವಾಲು

Public TV
1 Min Read
KS ESHWARAPPA

ಮಂಗಳೂರು: ಈಶ್ವರಪ್ಪ ಲಂಚವನ್ನು ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಎಂದು ಅಖಿಲ ಭಾರತ ಹಿಂದೂ ಮಹಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸವಾಲು ಹಾಕಿದ್ದಾರೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ನಾನು ಕಮೀಷನ್ ತಗೆದುಕೊಂಡಿಲ್ಲ, ಪ್ರಾಮಾಣಿಕ ಇದ್ದೇನೆ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಪ್ರಮಾಣಿಕರಾಗಿದ್ದರೆ ಈಶ್ವರಪ್ಪ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ರಾಜೀನಾಮೆ ನೀಡಿದ ಈಶ್ವರಪ್ಪ ನಿವಾಸಕ್ಕೆ ಸ್ವಾಮೀಜಿಗಳ ಭೇಟಿ

Dharmastala Ujire Padayatre 8

ಮಂತ್ರಿ ಮಂಡಲದ ಯಾವೊಬ್ಬ ವ್ಯಕ್ತಿಯೂ ಲಂಚ ಪಡೆದಿಲ್ಲ ಎಂದು ಹೇಳಲಿ. ಈ ಪ್ರಕರಣದಲ್ಲಿ 40% ಕಮೀಷನ್ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ. ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದೀರಾ? ಪ್ರಮಾಣ ಮಾಡುವ ಆ ತಾಕತ್ತು ನಿಮಗಿದೆಯಾ? ನೀವು ಧರ್ಮಸ್ಥಳ ದೇವರನ್ನು ಒಪ್ಪುತ್ತೀರಿ ಅಂತಾದರೆ ಅಲ್ಲಿಗೆ ಬನ್ನಿ ಎಂದರು. ಇದನ್ನೂ ಓದಿ: ಸಂತೋಷ್‍ನದ್ದು ಆತ್ಮಹತ್ಯೆಯೋ, ಕೊಲೆಯೋ? ಈಶ್ವರಪ್ಪ

BRIBE

ಅಲ್ಲಿ ನೀವು ಪ್ರಮಾಣ ಮಾಡಿದ್ರೆ ನೀವು ಪ್ರಾಮಾಣಿಕ ಅಂತಾ ಒಪ್ಪಿಕೊಳ್ಳೊಣ. ಪ್ರಮಾಣ ಮಾಡಿಯೂ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದ್ರೆ ಧರ್ಮದ್ರೋಹಿ ಆಗುತ್ತೀರಿ. ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಈ ದೇಶವನ್ನು ಲೂಟಿ ಮಾಡಿದೆ ಎಂದು ಹೇಳಿದ್ರಿ. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಕ್ಕೆ ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ರಿ. ಆದ್ರೆ ಈಗ ನೀವು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *