ಗುಡುಗು-ಮಿಂಚಿನ ಸಮ್ಮಿಲನ, ಶೃಂಗೇರಿ ಶಾರದಾಂಬೆ ದೇಗುಲದ ನಯನ ಮನೋಹರ ದೃಶ್ಯ ಸೆರೆ

Public TV
1 Min Read
Sringeri 1

ಚಿಕ್ಕಮಗಳೂರು: ಗುಡುಗು-ಮಿಂಚಿನ ಸಮ್ಮಿಲನದಿಂದ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಶೃಂಗೇರಿ ಶಾರದಾಂಬೆ ದೇಗುಲದ ಸುಂದರ ನೋಟ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ಈ ಅತ್ಯದ್ಭುತ ಚಿತ್ರವನ್ನು ಸೆರೆ ಹಿಡಿಯಲು ಪ್ರಕೃತಿಯೇ ಸಾಕ್ಷಿಯಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಮಳೆ ಜೊತೆಗೆ ಗುಡುಗು-ಸಿಡಿಲಿನ ಅಬ್ಬರ ಕೂಡ ಜೋರಿದೆ. ಶೃಂಗೇರಿಯಲ್ಲೂ ಮಳೆ ಅಬ್ಬರ ಜೋರಾಗಿದೆ. ನಿನ್ನೆ ಮಳೆ ಆರಂಭಕ್ಕೂ ಮುನ್ನ ಆರಂಭವಾದ ಗುಡುಗು-ಸಿಡಿಲಿನ ಮಧ್ಯೆ ಶೃಂಗೇರಿ ಶಾರದಾಂಬೆ ದೇಗುಲದ ದೃಶ್ಯಕಾವ್ಯ ನೋಡುಗರ ಮನಸೊರೆಗೊಂಡಿದೆ. ಇದನ್ನೂ ಓದಿ: ಈಶ್ವರಪ್ಪನವರನ್ನು ಬಂಧಿಸಿ ಅನ್ನೋರಿಗೆ ನಾಚಿಕೆಯಾಗ್ಬೇಕು: ರೇಣುಕಾಚಾರ್ಯ

Sringeri 2

ನಿನ್ನೆ ಸಂಜೆ ವೇಳೆಗೆ ಶೃಂಗೇರಿ ದೇಗುಲದಲ್ಲಿ ಶಾರದಾಂಬೆ ದರ್ಶನಕ್ಕೆ ಬಂದಿದ್ದ ಭಕ್ತರೊಬ್ಬರು ಈ ಅಪರೂಪದ ಅತ್ಯದ್ಭುತ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಶೃಂಗೇರಿ ಶಾರದಾಂಬೆ ದೇಗುಲದ ಆಕಾಶದ ಮೇಲ್ಭಾಗದಲ್ಲಿ ದೇಗುಲವನ್ನು ಮಿಂಚಿನಿಂದ ಕೃತಕವಾಗಿ ಅಲಂಕರಿಸಿದಂತಿದೆ. ಪ್ರಕೃತಿಯೇ ಮಿಂಚಿನಿಂದ ಶಾರದಾಂಬೆ ದೇಗುಲಕ್ಕೆ ಲೈಟಿಂಗ್ ಸೌಲಭ್ಯ ಕಲ್ಪಿಸಿದಂತೆ ಭಾಸವಾಗಿದೆ. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೂ ಮುನ್ನ 29 PDOಗಳ ಟ್ರಾನ್ಸ್‌ಫರ್

Sringeri 2

ದೇಗುಲದ ಮೇಲ್ಭಾಗದಲ್ಲೇ ಮಿಂಚು ಸಂಭವಿಸಿದ್ದರಿಂದ ಕಲ್ಲುಗಳಿಂದಲೇ ನಿರ್ಮಾಣಗೊಂಡಿರುವ ಪುರಾತನ ಶಾರದಾಂಬೆ ದೇಗುಲದ ಸೌಂದರ್ಯ ಕೂಡ ಮತ್ತಷ್ಟು ಇಮ್ಮಡಿಗೊಂಡಿದೆ. ಈ ಸುಂದರ ಕ್ಷಣವನ್ನ ಕಣ್ತುಂಬಿಕೊಂಡ ಭಕ್ತರು ತಮ್ಮ ಮೊಬೈಲ್‍ನಲ್ಲಿ ಈ ಅಪರೂಪದ ಘಳಿಗೆಯನ್ನ ಸೆರೆ ಹಿಡಿದಿದ್ದಾರೆ. ಆದರೆ, ಎಲ್ಲರ ಮೊಬೈಲ್‍ನಲ್ಲೂ ಈ ಅಪರೂಪದ ಘಳಿಗೆ ಸೆರೆಯಾಗಿಲ್ಲ.

 

Share This Article
Leave a Comment

Leave a Reply

Your email address will not be published. Required fields are marked *