ಬಿಟೌನ್ ಅಂಗಳದಲ್ಲಿ ಸ್ವಚ್ಚಂದವಾಗಿ ಹಾರಾಡುತ್ತಿದ್ದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಎಂಬ ಪ್ರಣಯ ಪಕ್ಷಿಗಳು ಕೊನೆಗೂ ಹಸೆಮಣೆ ಏರುವ ಮೂಲಕ ಗುರುವಾರ (ಎ.14) ಒಂದಾಗಿವೆ. ಹಲವು ವರ್ಷಗಳಿಂದ ಈ ಪ್ರಣಯ ಪಕ್ಷಿಗಳ ಹಾರಾಟ ಕಂಡ ಬಾಲಿವುಡ್ ಮಂದಿ, ಆದಷ್ಟು ಬೇಗ ಮದುವೆ ಆಗಲಿ ಎಂದು ಬಯಸಿದ್ದರು. ಎಲ್ಲರ ಬಯಕೆಗಳನ್ನು ನಿನ್ನೆ ಇಬ್ಬರೂ ಒಟ್ಟಿಗೆ ಈಡೇರಿಸಿದ್ದಾರೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS
ಆಲಿಯಾ ಮತ್ತು ರಣಬೀರ್ ಮದುವೆಯ ಬಗ್ಗೆ ಕಲರ್ ಕಲರ್ ಕಥೆಗಳು ಬಾಲಿವುಡ್ ಅಂಗಳದಲ್ಲಿ ಹುಟ್ಟಿಕೊಂಡಿದ್ದವು. ಮೀಡಿಯಾ ಮತ್ತು ಅಭಿಮಾನಿಗಳ ದಿಕ್ಕು ತಪ್ಪಿಸಲು ಮದುವೆ ದಿನಾಂಕವನ್ನು ಮುಂದೂಡಿದ ಡ್ರಾಮಾ ನಡೆಯಿತು. ಮದುವೆಗೆ ಯಾರು ಬರುತ್ತಾರೆ, ಯಾರು ಬರಲ್ಲ ಎನ್ನುವ ಸುಳ್ಳು ಸುದ್ದಿಯನ್ನು ಹರಿಬಿಡಲಾಯಿತು. ಏನೇ ಮಾಡಿದರೂ, ಮಾಧ್ಯಮಗಳ ಕ್ಯಾಮೆರಾ ಕಣ್ಣುಗಳು ಸುಮ್ಮನೆ ಬಿಡಲಿಲ್ಲ. ಕೊನೆಗೂ ಮದುವೆ ದಿನಾಂಕದಿಂದ ಹಿಡಿದು, ಮೆಹಂದಿ, ಹಲ್ದಿ, ಸಂಗೀತ ಕಾರ್ಯಗಳವರೆಗೂ ಪತ್ತೆ ಹಚ್ಚಿದವು.
View this post on Instagram
ಆಲಿಯಾ ಮತ್ತು ರಣಬೀರ್ ಮದುವೆಯಲ್ಲಿ ಹಲವು ವಿಶೇಷ ಘಟನೆಗಳು ನಡೆದಿವೆ. ಸಂಗೀತ ಕಾರ್ಯಕ್ರಮದಲ್ಲಿ ಆಲಿಯಾ ನೆಚ್ಚಿನ ದಿಲ್ಬರೋ ಹಾಡಿಗೆ ಈ ಜೋಡಿ ಹೆಜ್ಜೆ ಹಾಕಿದೆ. ಆಲಿಯಾಗೆ ತಾಳಿ ಕಟ್ಟಿದ ತಕ್ಷಣವೇ ಖುಷಿಯಲ್ಲಿ ರಣಬೀರ್ ಅವರು ಪತ್ನಿಯನ್ನು ಎತ್ತಿಕೊಂಡು ಸಂಭ್ರಮಿಸಿದ್ದಾರೆ. ಅದ್ಭುತವಾದ ಥೀಮ್ ಜೊತೆಯೇ ಇಬ್ಬರೂ ಸತಿಪತಿಗಳಾಗಿದ್ದಾರೆ.