ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾದಲ್ಲಿ ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕಥೆಯು ಸಾಗುವುದೇ ಈ ಪಾತ್ರದ ಮೂಲಕ. ಈ ಪಾತ್ರದ ಬಗ್ಗೆ ಈ ಹಿಂದೆ ನಾನಾ ರೀತಿಯಲ್ಲಿ ಚರ್ಚೆಗಳು ನಡೆದವು. ಅನಂತ್ ನಾಗ್ ಅವರು ನಿರ್ವಹಿಸಿದ್ದ ಪಾತ್ರವನ್ನು ಪ್ರಕಾಶ್ ರೈ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಅನಂತ್ ನಾಗ್ ಬದಲಾಗಿ ಪ್ರಕಾಶ್ ರೈ ಅವರಿಗೆ ಈ ಪಾತ್ರವನ್ನು ಕೊಡಲಾಗಿದೆ ಎಂದೂ ಹೇಳಲಾಗಿತ್ತು. ಆದರೆ, ಈವರೆಗೂ ಸಿನಿಮಾ ತಂಡದಿಂದ ಇದಕ್ಕೆ ಉತ್ತರ ಸಿಕ್ಕಿಲ್ಲ. ಇದನ್ನು ಓದಿ: ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್
ಈಗಾಗಲೇ ಬಿಡುಗಡೆಗೊಂಡಿರುವ ‘ಕೆಜಿಎಫ್ 2’ ಸಿನಿಮಾದ ಟೀಸರ್ ನೋಡಿದಾಗ, ಪ್ರಕಾಶ್ ರೈ ಪಾತ್ರದ ಬಗ್ಗೆ ಕೆಲವು ಅನುಮಾನಗಳು ಮತ್ತು ಕುತೂಹಲ ಮೂಡುವುದು ಸಹಜ. ಆದರೆ, ಈ ಕುತೂಹಲಕ್ಕೆ ಏಪ್ರಿಲ್ 14 ರಂದೇ ತೆರೆ ಬೀಳುತ್ತದೆ. ಆವಾಗ ಪ್ರಕಾಶ್ ರೈ ಮಾಡಿದ್ದು ಯಾವ ಪಾತ್ರ ಎನ್ನುವುದು ಗೊತ್ತಾಗಲಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಯಶ್ ಮಾತನಾಡುತ್ತಾ, ‘ಅನಂತ್ ನಾಗ್ ಸರ್ ಲೆಜೆಂಡರಿ ನಟರು. ಅವರು ಕೆಜಿಎಫ್ ಚಿತ್ರಕ್ಕೆ ಒಂದು ಘನತೆ ತಂದುಕೊಟ್ಟಿದ್ದಾರೆ. ಹಾಗಾಗಿ ಅವರ ಕುರಿತು ನಾನು ಏನೂ ಹೇಳಲಾರೆ. ಸಿನಿಮಾ ರಿಲೀಸ್ ಆದ ಮೇಲೆ ಪ್ರಕಾಶ್ ರೈ ಅವರ ಪಾತ್ರದ ಹಿನ್ನೆಲೆ ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ. ಈ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದ್ದಾರೆ. ಇದನ್ನೂ ಓದಿ : ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ
ಈಗಾಗಲೇ ಸಿನಿಮಾ ತಂಡವೇ ಹೇಳಿರುವಂತೆ ‘ಕೆಜಿಎಫ್ 2’ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಅಷ್ಟೂ ಭಾಷೆಯಲ್ಲೂ ಮೂಡಿ ಬಂದ ಚಿತ್ರಕ್ಕೆ ಕೆಲವರು ಒಂದೇ ಭಾಷೆಗೆ ತಮ್ಮ ಪಾತ್ರಕ್ಕೆ ಡಬ್ ಮಾಡಿದರೆ, ಇನ್ನೂ ಕೆಲವರು ಎರಡ್ಮೂರು ಭಾಷೆಯಲ್ಲಿ ಡಬ್ ಮಾಡಿದ್ದಾರೆ. ರಾವ್ ರಮೇಶ್ ನಾಲ್ಕು ಭಾಷೆಯಲ್ಲಿ ಡಬ್ ಮಾಡಿದರೆ, ಅತೀ ಹೆಚ್ಚು ಭಾಷೆಯಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದು ಪ್ರಕಾಶ್ ರೈ. ಅಷ್ಟೂ ಭಾಷೆಗೂ ಪ್ರಕಾಶ್ ರೈ ಅವರದ್ದೇ ಧ್ವನಿ ಇರಲಿದೆ ಎನ್ನುವುದು ವಿಶೇಷ. ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ
ವಿಶ್ವದಾದ್ಯಂತ ಕೆಜಿಎಫ್ 2 ಸಿನಿಮಾ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಈಗಾಗಲೇ ವಾರಕ್ಕೂ ಮೊದಲೇ ಹಲವು ಕಡೆ ಟಿಕೆಟ್ ಸೋಲ್ಡ್‌ಔಟ್ ಆಗಿವೆ. ತಮಿಳು ಮತ್ತು ತೆಲುಗಿನಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕನ್ನಡದಲ್ಲೂ ಇಂದಿನಿಂದ ಮುಂಗಡ ಟಿಕೆಟ್‌ಗೆ ವ್ಯವಸ್ಥೆ ಮಾಡಿದ್ದು, ಇಲ್ಲಿಯೂ ದಾಖಲೆ ರೀತಿಯಲ್ಲಿ ಟಿಕೆಟ್ ಮಾರಾಟವಾಗುತ್ತಿವೆ.