‘ಪಠಾನ್’ ಸಿನಿಮಾ ಸಹನಿರ್ದೇಶಕನಿಗೆ ಹೃದಯಸ್ಪರ್ಶಿ ಪತ್ರ ಬರೆದ ಕಿಂಗ್ ಖಾನ್

Public TV
1 Min Read
Shahrukh Khan

ಬಾಲಿವುಡ್‍ನ ಶಾಹೆನ್‍ಶಾ ಶಾರೂಖ್ ಖಾನ್ ಅವರು ತಮ್ಮ ಮುಂಬರುವ ‘ಪಠಾನ್’ ಚಿತ್ರದ ಸಹಾಯಕ ನಿರ್ದೇಶಕರಾದ ಅಭಿಷೇಕ್ ಅನಿಲ್ ತಿವಾರಿ ಅವರಿಗೆ ಹೃದಯಸ್ಪರ್ಶಿ ಪತ್ರವೊಂದನ್ನು ಬರೆದಿದ್ದಾರೆ.

ಪತ್ರದಲ್ಲಿ ಖಾನ್ ತಮ್ಮ ಕೈಬರಹದ ಟಿಪ್ಪಣಿಯ ಮೂಲಕ ಚಲನಚಿತ್ರದ ಬಗ್ಗೆ ಮತ್ತು ಸಹ ನಿರ್ದೇಶಕನ ಮೇಲಿರುವ ಮೆಚ್ಚುಗೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಟಿಪ್ಪಣಿಯ ಆ ಚಿತ್ರವನ್ನು ಅಭಿಷೇಕ್ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಾರೂಖ್ ಜೊತೆಗಿನ ಸಿನಿಮಾಗೆ ನಯನ ಶೆಡ್ಯೂಲ್ ಮುಗಿಸೋದು ಯಾವಾಗ? – ಇಲ್ಲಿದೆ ಅಪ್ಡೇಟ್

WhatsApp Image 2022 04 08 at 6.23.17 PM

ಪತ್ರದಲ್ಲಿ ಏನಿದೆ?
ಅಭಿಷೇಕ್ ನೀವು ನನಗಾಗಿ ಪಠಾನ್ ಅಂತಹ ಚಿತ್ರವನ್ನು ನಿರ್ಮಿಸಿದ್ದಕ್ಕಾಗಿ ಧನ್ಯವಾದಗಳು. ನಮ್ಮೆಲ್ಲರಿಗೂ ಚಿತ್ರದ ಶೂಟಿಂಗ್ ಸೆಟ್‍ನಲ್ಲಿ ವಿಶೇಷವಾಗಿ ನನಗೆ ಅದ್ಭುತ ಅನುಭವಗಳು ಸಿಕ್ಕಿವೆ. ಚಿತ್ರಕ್ಕಾಗಿ ನೀವು ಪಟ್ಟ ಕಠಿಣ ಪರಿಶ್ರಮ, ದಕ್ಷತೆ ಆ ನಿಮ್ಮ ನಗು ನನಗೆ ತುಂಬಾ ಮೆಚ್ಚುಗೆಯಾಗಿದೆ. ಸಿನಿಮಾರಂಗದಲ್ಲಿ ನಿಮಗೆ ಮುಂದೆ ಒಳ್ಳೆಯ ಭವಿಷ್ಯವಿದೆ. ಏನೇ ಆಗಲಿ ನಿಮ್ಮನ್ನೂ ನಾನು ತುಂಬಾ ಮೀಸ್ ಮಾಡಿಕೊಳ್ಳುತ್ತೇನೆ ಎಂದು ಬರೆದು ಕೆಳಗಡೆ ತಮ್ಮ ಹಸ್ತಾಕ್ಷರವನ್ನು ಹಾಕಿದ್ದಾರೆ. ಇದನ್ನೂ ಓದಿ:ಬಿಯರ್ ದಾನ ಮಾಡಿ ಎಂದ ಅಭಿಮಾನಿ – ಬಿಯರ್ ಜೊತೆ ಆಲೂ ಭುಜಿಯಾ ಮಿಕ್ಸ್‌ಚರ್‌ ಸಾಕಾ ಎಂದ ಸೋನು

shah rukh khan

ಈ ಹಿಂದೆ ಶಾರೂಖ್ ಖಾನ್ ಅವರು ಪಠಾನ್ ಚಿತ್ರದ ಶೂಟಿಂಗ್ ಸೆಟ್‍ನಿಂದ ಶರ್ಟ್‍ಲೆಸ್ ಅವತಾರದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಫೋಟೋದಲ್ಲಿ ಅವರು ತಮ್ಮ 8 ಪ್ಯಾಕ್ಸ್ ಅನ್ನು ಪ್ರದರ್ಶಿಸಿದ್ದು, ತಮ್ಮ ವಿಭಿನ್ನ ಕೇಶ ವಿನ್ಯಾಸದೊಂದಿಗೆ ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು.

ಸಿದ್ಧಾರ್ಥ್ ಆನಂದ್ ನಿರ್ದೇಶನದ, ಪಠಾಣ್ ಚಿತ್ರವು 2023ರ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಯಶ್ ರಾಜ್ ಫಿಲ್ಮ್ ನಿರ್ಮಿಸಿದೆ. ಇದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *