ಸ್ಯಾಂಡಲ್‌ವುಡ್‌ನಲ್ಲಿ `ಬಜಾರ್’, `ಬೈ ಟು ಲವ್’ ಸಿನಿಮಾಗಳ ಮೂಲಕ ಮೋಡಿ ಮಾಡಿರೋ ನಟ ಧನ್ವೀರ್ ಗೌಡ, ಜಯತೀರ್ಥ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ `ಕೈವ’ ಅನ್ನೋ ಟೈಟಲ್ ಫಿಕ್ಸ್ ಆಗಿದ್ದು, ಈ ಚಿತ್ರದ ಮೂಲಕ ಪವರ್‌ಫುಲ್ ಪಾತ್ರದಲ್ಲಿ ಧನ್ವೀರ್ ಕಾಣಿಸಿಕೊಳ್ಳಲಿದ್ದಾರೆ.
`ಒಲವೇ ಮಂದಾರ’, `ಬ್ಯೂಟಿಫುಲ್ ಮನಸುಗಳು’, `ಬೆಲ್‌ಬಾಟಂ’ ಚಿತ್ರದ ಮೂಲಕ ಈಗಾಗಲೇ ಪರಿಚಿತರಾಗಿರೋ ಜಯತೀರ್ಥ `ಕೈವ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. 1980ರ ಕಾಲಘಟ್ಟದ ನೈಜ ಕಥೆಯಲ್ಲಿ ಪ್ರಮುಖ ಪಾತ್ರದಲ್ಲಿ ಧನ್ವೀರ್ ನಟಿಸಲಿದ್ದಾರೆ. ಡಿಫರೆಂಟ್ ಟೈಟಲ್ ಜೊತೆ ಭಿನ್ನ ಕಥೆಯೊಂದಿಗೆ ಬರುತ್ತಿದ್ದಾರೆ.
1980ರ ಕಾಲಘಟ್ಟದ ಕಥೆಯಾಗಿರುವುದರಿಂದ ಕಥೆಗೆ ತಕ್ಕಂತೆ ಕೆಲವು ಸನ್ನೀವೇಷದಲ್ಲಿ ನಟ ಧನ್ವೀರ್ ರೆಟ್ರೋ ಸ್ಟೈಲಿನಲ್ಲಿ ಕಾಣಿಸಿಕೊಳ್ತಿದ್ದಾರೆ. ಮಾಸ್ ಆಕ್ಷನ್ ಕಥೆಯ ಜೊತೆ ರೊಮ್ಯಾಂಟಿಕ್ ಲವ್ ಸ್ಟೋರಿಯಿದೆ. ಒಂದೊಳ್ಳೆ ಪಾತ್ರ ವಿಭಿನ್ನ ಕಥೆಯ ಕಾರಣದಿಂದಾಗಿ ನಿರ್ದೇಶಕರಿಗೆ ನಟ ಧನ್ವೀರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನು ಓದಿ:ಶಾರೂಖ್ ಜೊತೆಗಿನ ಸಿನಿಮಾಗೆ ನಯನ ಶೆಡ್ಯೂಲ್ ಮುಗಿಸಿಯೋದು ಯಾವಾಗ? – ಇಲ್ಲಿದೆ ಅಪ್ಡೇಟ್
ಧನ್ವೀರ್ `ವಾಮನ’ ಚಿತ್ರದಲ್ಲಿ ನಟಿಸುತ್ತಿದ್ದು, `ಕೈವ’ ಧನ್ವೀರ್ ನಟನೆಯ ನಾಲ್ಕನೇ ಚಿತ್ರವಾಗಿದೆ. ಇದೇ ಮೊದಲ ಬಾರಿಗೆ ಜಯತೀರ್ಥ ಮತ್ತು ಧನ್ವೀರ್ ಕಾಂಬಿನೇಷನ್‌ನ ಚಿತ್ರ ಸೆಟ್ಟೇರಿದ್ದು, ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ.ಇನ್ನು ಶೋಕ್ದಾರ್ ಧನ್ವೀರ್ ನಟನೆಯ ನಯಾ ಅವತಾರ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.