`ಕೆಜಿಎಫ್ 2′ ಟೀಮ್‌ನಿಂದ ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್

Public TV
1 Min Read
kgf 2 1 1

ಪ್ರಶಾಂತ್‌ ನೀಲ್ ಮತ್ತು ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ರಿಲೀಸ್ ಆಗೋಕೆ ದಿನಗಣನೆ ಶುರುವಾಗಿದೆ. ಇದೇ ಏಪ್ರಿಲ್‌ 14ಕ್ಕೆ ತೆರೆಗೆ ಅಪ್ಪಳಿಸಲಿದೆ. ಚಿತ್ರತಂಡ ಕೂಡ ಬ್ಯಾಕ್ ಟು ಬ್ಯಾಕ್ ಅಪ್‌ಡೇಟ್‌ನಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತಿದ್ದಾರೆ. ಈಗ `ಕೆಜಿಎಫ್ ೨’ ಸಿನಿಮಾದಲ್ಲಿ ಸಿನಿರಸಿಕರಿಗೆ ಬಿಗ್ ಸಪ್ರೈಸ್‌ ಇರಲಿದೆ.

KGF 2 8`ಕೆಜಿಎಫ್ 2′ ಶೂಟಿಂಗ್ ಗ್ಯಾಪ್‌ನಲ್ಲೇ ಶೂಟಿಂಗ್ ಮಾಡಿರೋ, ಪ್ರಶಾಂತ್‌ ನೀಲ್ ನಿರ್ದೇಶನದ `ಕೆಜಿಎಫ್ 2′ ರಿಲೀಸ್‌ನಲ್ಲಿ ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಇರಲಿದೆ. ಪ್ರಭಾಸ್ ನಟನೆಯ ʼಸಲಾರ್’ ಚಿತ್ರದ ಟೀಸರ್ ಕೂಡ `ಕೆಜಿಎಫ್ 2’ನಲ್ಲಿ ಅಟ್ಯಾಚ್ ಆಗಿರಲಿದೆ. ಈ ಸುದ್ದಿ ಕೇಳಿ ರಾಕಿಭಾಯ್ ಫ್ಯಾನ್ಸ್ ಜೊತೆಗೆ ಪ್ರಭಾಸ್ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

salaar launch sends invitation to kgf star yash 140121 120948ಬಿಗ್ ಬಜೆಜ್ ಸಿನಿಮಾಗಳು ರಿಲೀಸ್ ಆಗುವಾಗ ಬಿಡುಗಡೆಗೆ ಸಿದ್ಧವಿರೋ ಚಿತ್ರಗಳ ಟ್ರೇಲರ್ ಮತ್ತು ಟೀಸರ್‌ಗಳನ್ನ ಅಟ್ಯಾಚ್ ಮಾಡುವ ಪದ್ಧತಿಯಿದೆ. ಅದರಂತೆಯೇ ಪುನೀತ್ ರಾಜ್‌ಕುಮಾರ್ ನಟನೆಯ ಮಾರ್ಚ್.17ಕ್ಕೆ ರಿಲೀಸ್ ಆಗಿದ್ದ `ಜೇಮ್ಸ್’ ಚಿತ್ರದ ವೇಳೆ ಶಿವರಾಜ್‌ಕುಮಾರ್ ನಟನೆಯ `ಬೈರಾಗಿ’ ಚಿತ್ರದ ಟೀಸರ್ ಕೂಡ ಪ್ರಸಾರಗೊಂಡಿತ್ತು. ಅದೇ ರೀತಿ `ಕೆಜಿಎಫ್ 2′ ಸಿನಿಮಾ ಜೊತೆಗೆ `ಸಲಾರ್’ ಚಿತ್ರದ ಟೀಸರ್ ಕೂಡ ಪ್ರಸಾರ ಮಾಡಲಾಗುತ್ತದೆ.

kgf 2 yash 2`ಕೆಜಿಎಫ್ 2’ನಂತೆ `ಸಲಾರ್’ ಚಿತ್ರಕ್ಕೂ ಕೂಡ ಪ್ರಶಾಂತ್‌ನೀಲ್ ನಿರ್ದೇಶನದ ಜೊತೆಗೆ ಹೊಂಬಾಳೆ ಬ್ಯಾನರ್ ನಿರ್ಮಾಣ ಮಾಡುತ್ತಿದೆ. ಪ್ರಭಾಸ್ ಶ್ರುತಿ ಹಾಸನ್ ನಟನೆಯ `ಸಲಾರ್’ ಚಿತ್ರದ ಯಾವೊಂದು ಅಪ್‌ಡೇಟ್ ಸಿಗ್ತಿರಲಿಲ್ಲ. ಚಿತ್ರದ ಪ್ರಚಾರ ನಿಟ್ಟಿನಲ್ಲಿ `ಕೆಜಿಎಫ್ 2′ ಚಿತ್ರದ ವೇಳೆ `ಸಲಾರ್’ ಟೀಸರ್ ಕೂಡ ಅಟ್ಯಾಚ್ ಮಾಡಲಾಗುತ್ತಿದೆ. ಇದನ್ನು ಓದಿ:ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ – ಜೀವ ಇರೋತನಕ ಇಲ್ಲಿನ ಮಕ್ಕಳ ಜತೆ ಇರುತ್ತೇನೆ: ಶಿವಣ್ಣ

Prabhas Yash`ಸಲಾರ್’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಚಿತ್ರದ ಶೂಟಿಂಗ್ ಇನ್ನು ಬಾಕಿಯಿದ್ದು, ಟೀಸರ್ ಗ್ಲಿಂಪ್ಸ್‌ನಿಂದ ಚಿತ್ರ ಹೇಗಿರಬಹುದು ಅಂತಾ ಊಹಿಸಬಹುದಾಗಿದೆ. ಒಟ್ನಲ್ಲಿ ನಿರೀಕ್ಷಿಸದೆ `ಸಲಾರ್’ ಕುರಿತು ಗುಡ್ ನ್ಯೂಸ್ ಕೊಟ್ಟಿರೋ `ಕೆಜಿಎಫ್ ೨’ ಚಿತ್ರವನ್ನ ನೋಡೋಕೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಾಕಿಭಾಯ್‌ನ ಕಣ್ತುಂಬಿಕೊಳ್ಳೊಕೆ ಫ್ಯಾನ್ಸ್‌ ಕಾಯ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *