ಸ್ಥಳೀಯ ಉಗ್ರರನ್ನು ಮುಂದಿಟ್ಟುಕೊಂಡು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ದಾಳಿ: ಉನ್ನತ ಅಧಿಕಾರಿ

Public TV
1 Min Read
kashmir 1 20200603 630 630

ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಾಗಲು ಸ್ಥಳೀಯ ಉಗ್ರರು, ಪಾಕಿಸ್ತಾನಿ ಉಗ್ರರಿಗೆ ನೀಡುತ್ತಿರುವ ಸಹಕಾರವೇ ಪ್ರಮುಖ ಕಾರಣವಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಭಯೋತ್ಪಾದಕರ ಎನ್‌ಕೌಂಟರ್‌ಗಳ ಸಂಖ್ಯೆಯಲ್ಲಿನ ಹೆಚ್ಚಳದ ಹಿಂದಿನ ಕಾರಣವನ್ನು ವಿವರಿಸಿದ ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ವಿಜಯ್ ಕುಮಾರ್, ಪಾಕಿಸ್ತಾನಿ ಭಯೋತ್ಪಾದಕರು ದಾಳಿ ನಡೆಸಿ ತಪ್ಪಿಸಿಕೊಳ್ಳಲು ಕಾಶ್ಮೀರದ ಸ್ಥಳೀಯ ಭಯೋತ್ಪಾದಕರನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 22 ಐಪಿಎಸ್‌ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ

FotoJet 5 8

ಇತ್ತೀಚಿನ ಎನ್‌ಕೌಂಟರ್‌ಗಳಲ್ಲಿ ಸ್ಥಳೀಯ ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಪಾಕಿಸ್ತಾನಿ ಭಯೋತ್ಪಾದಕರು ಪರಾರಿಯಾಗಿದ್ದಾರೆ. ಸ್ಥಳೀಯ ಭಯೋತ್ಪಾದಕರನ್ನು ಮುಂದಿಟ್ಟುಕೊಂಡು ಪಾಕಿಸ್ತಾನಿ ಭಯೋತ್ಪಾದಕರು ಹಿಂದಿನಿಂದ ದಾಳಿ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇಂದು ನಡೆದ ಟ್ರಾಲ್ ಎನ್‌ಕೌಂಟರ್ ಕುರಿತು ಮಾತನಾಡಿದ ಐಜಿಪಿ ಕುಮಾರ್, ಉಮರ್ ತೇಲಿ ಮತ್ತು ಸಫತ್ ಇಬ್ಬರೂ ಸ್ಥಳೀಯ ಭಯೋತ್ಪಾದಕರು. ಶ್ರೀನಗರದಲ್ಲಿ ಉಗ್ರ ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಅನಿಲ್ ದೇಶಮುಖ್‍ರನ್ನು ವಶಕ್ಕೆ ಪಡೆದ ಸಿಬಿಐ

terrorist

ಇವರು ನಾಗರಿಕರ ಹತ್ಯೆ ಮತ್ತು ಇತರೆ ಹಲವಾರು ಕೃತ್ಯಗಳನ್ನು ಎಸಗಿದ ನಂತರ ಟ್ರಾಲ್‌ಗೆ ಪರಾರಿಯಾಗಿದ್ದರು. ಇಬ್ಬರೂ ಭಯೋತ್ಪಾದಕರನ್ನು ಇಂದು ಹತ್ಯೆ ಮಾಡಲಾಗಿದೆ. ಇವರು ಅನೇಕ ನಾಗರಿಕ ಹತ್ಯೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *