ರಾಯಚೂರು: ಅಬಕಾರಿ ಇಲಾಖೆಯ ಹೊಸ ಕ್ರಮದಿಂದ ಮದ್ಯ ಪೂರೈಕೆಗೆ ತಾಂತ್ರಿಕ ತೊಂದರೆಯುಂಟಾಗಿರುವ ಹಿನ್ನೆಲೆ ರಾಯಚೂರಿನಲ್ಲಿ ಮದ್ಯಮಾರಾಟಗಾರು ಪ್ರತಿಭಟನೆ ನಡೆಸಿದ್ದಾರೆ.
ನಗರದ ಕೆ.ಎಸ್.ಬಿ.ಸಿ.ಎಲ್ ಡಿಪೋ ಮುಂದೆ ಮದ್ಯ ಪೂರೈಕೆಗಾಗಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದಿಂದ ಹೋರಾಟ ನಡೆಯಿತು. ವೆಬ್ ಇಂಡೆಂಟಿಂಗ್ ಮೂಲಕ ಮದ್ಯ ಖರೀದಿಗೆ ಆದೇಶ ಹಿನ್ನೆಲೆ, ಹೊಸ ಪದ್ಧತಿಯಿಂದ ಮದ್ಯಮಾರಾಟಗಾರರಿಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ಏಪ್ರಿಲ್ 1 ರಿಂದ ಮದ್ಯ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡ್ರಾಮಾ ಕ್ವೀನ್ ಭಾರತಿ ಸಿಂಗ್ ಗಂಡನಿಗೆ 6 ಮಕ್ಕಳು ಬೇಕಂತೆ : ಹೆರಿಗೆ ನೋವಿನ ಕ್ಷಣಗಳನ್ನು ಹಂಚಿಕೊಂಡ ಹಾಸ್ಯ ಕಲಾವಿದೆ
ಮದ್ಯಪ್ರಿಯರು ಅವರಿಗಿಷ್ಟದ ಬ್ರಾಂಡ್ ಮದ್ಯ ಸಿಗದೆ ಬಾರ್ ಮಾಲೀಕರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮದ್ಯಪ್ರಿಯರ ಆಕ್ರೋಶ ಹಿನ್ನೆಲೆ ಮದ್ಯ ಮಾರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಸದ್ಯಕ್ಕೆ ಹಳೆಯ ಪದ್ದತಿಯನ್ನೇ ಮುಂದುವರೆಸಲು ಆಗ್ರಹಿಸಿ ಅಬಕಾರಿ ಇಲಾಖೆಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇದನ್ನೂ ಓದಿ: ವಿವಾದಿತ ಸಮಾಧಿಯನ್ನ ಶಾಂತಿಯುತವಾಗಿ ಸ್ಥಳಾಂತರಿಸಿದ ಕ್ರೈಸ್ತ ಸಮುದಾಯ