ಆರಗ ಜ್ಞಾನೇಂದ್ರ ಹೋಮ್ ಮಿನಿಸ್ಟರ್ ಆಗೋಕೆ ನಾಲಾಯಕ್: ಸಿದ್ದರಾಮಯ್ಯ

Public TV
2 Min Read
Siddaramaiah

ಹುಬ್ಬಳ್ಳಿ: ಆರಗ ಜ್ಞಾನೇಂದ್ರ ಹೋಮ್ ಮಿನಿಸ್ಟರ್ ಆಗುವುದಕ್ಕೆ ನಾಲಾಯಕ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಉರ್ದು ಬರಲ್ಲ ಎನ್ನುವ ಕಾರಣಕ್ಕೆ ಚಂದ್ರು ಹತ್ಯೆ ಆಗಿದೆ ಎಂದು ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ ಅವರು, ಹೋಮ್ ಮಿನಿಸ್ಟರ್‌ಗೆ ಅನುಭವವೇ ಇಲ್ಲ. ಗೃಹ ಇಲಾಖೆ ಹ್ಯಾಂಡಲ್ ಮಾಡುವುದಕ್ಕೆ ಬರಲ್ಲ. ಮೈಸೂರಲ್ಲಿ ಗ್ಯಾಂಗ್ ರೇಪ್ ಆದಾಗ ಗೃಹ ಸಚಿವರು ಅಷ್ಟೊತ್ತಿಗೆ ಯಾಕ್ ಹೋಗಿದ್ದರು ಎಂಬ ಹೇಳಿಕೆ ನೀಡಿದ್ದರು. ಅವರು ಹೋಮ್ ಮಿನಿಸ್ಟರ್ ಆಗುವುದಕ್ಕೆ ನಾಲಾಯಕ್, ಮುಖ್ಯಮಂತ್ರಿ ಸಹ ಅವರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಈ ಹತ್ಯೆ ನಾನು ಖಂಡಿಸುತ್ತೆನೆ. ಹಿಂದೂ ಸತ್ತರು ಜೀವ, ಮುಸ್ಲಿಂ ಸತ್ತರು ಜೀವವೇ. ಹರ್ಷ ಕೊಂದವರನ್ನು ನೇಣಿಗೆ ಹಾಕಿ ಜೀವಾವಧಿ ಶಿಕ್ಷೆ ಕೊಡಿಸಿ ಎಂದು ಕಿಡಿಕಾರಿದರು.

araga jnanendra 1

ಬಿಜೆಪಿ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದೆ. ಜನರ ಮುಂದೆ ಹೋಗುವುದಕ್ಕೆ ಅವರ ಬಳಿ ಸಾಧನೆ ಇಲ್ಲ. ಅದನ್ನು ಮರೆಮಾಚುವುದಕ್ಕೆ ಧಾರ್ಮಿಕ ವಿಚಾರದ ಮೂಲಕ ಮುಂದಾಗಿದ್ದಾರೆ. ಇದು ಅವರಿಗೆ ತಿರುಗುಬಾಣವಾಗುತ್ತದೆ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಉರ್ದು ವಿಚಾರಕ್ಕೆ ಚಂದ್ರು ಕೊಲೆ ನಡೆದಿಲ್ಲ – ಅರ್ಧ ಗಂಟೆಯಲ್ಲೇ ಉಲ್ಟಾ ಹೊಡೆದ ಆರಗ

chandru j j nagara

ಇಷ್ಟು ದಿನ ಹಲಾಲ್ ಕಟ್, ಹಿಜಬ್ ಆಯಿತು. ಈಗ ಮಸೀದಿಯಲ್ಲಿ ಮೈಕ್ ಬ್ಯಾನ್, ಮಾವಿನ ಹಣ್ಣು ವಿಚಾರ ಬಂದಿದೆ. ಮತಗಳ ವಿಭಜನೆ ಮಾಡಬೇಕು ಅಂತ ಹೀಗೆ ಮಾಡುತ್ತಿದ್ದಾರೆ. ಧರ್ಮದ ಹೆಸರಿನ ಮೇಲೆ ಪದ್ದತಿಯ ದಾರಿ ತಪ್ಪಿಸುತ್ತಿದ್ದಾರೆ. ಇದೆಲ್ಲಾ ಹುನ್ನಾರ ಜನರಿಗೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೃಹ ಸಚಿವರು ವಿಲನ್ ರೋಲ್ ಮಾಡ್ತಿದ್ದಾರೋ, ಕಾಮಿಡಿ ರೋಲ್ ಮಾಡ್ತಿದ್ದಾರೋ ಗೊತ್ತಿಲ್ಲ: ಹೆಚ್‌ಡಿಕೆ

ಬಿಜೆಪಿ ನಾಯಕರು ಬೆಲೆ ಏರಿಕೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಗೊಬ್ಬರ, ಗ್ಯಾಸ್, ಅಡುಗೆ ಎಣ್ಣೆ, ಎಲ್ಲವೂ ಜಾಸ್ತಿ ಆಗಿದೆ. ಇದರ ಬಗ್ಗೆ ಅವರು ಮಾತನಾಡುವುದಿಲ್ಲ. ಬರೀ ಧಾರ್ಮಿಕ ಭಾವನೆ ಕೆರಳಿಸುವ ಮಾತುಗಳನ್ನಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಸರ್ಕಾರದ ಈ ನೀತಿಯಿಂದ ಹೂಡಿಕೆ ಕರ್ನಾಟಕಕ್ಕೆ ಬರದೇ ತಮಿಳುನಾಡಿಗೆ ಹೋಗುತ್ತಿದೆ. ಎಲ್ಲಾ ಉದ್ಯಮಗಳು ರಾಜ್ಯದಲ್ಲಿ ಮುಚ್ಚಿ ಹೋಗುತ್ತಿವೆ. ನಾವು ಸುಳ್ಳು ಹೇಳಲ್ಲ, ನಾವು ಸತ್ಯ ಹೇಳಿಕೊಂಡು ಜನರ ಮುಂದೆ ಹೋಗುತ್ತೇವೆ. ಬೋಗಸ್ ಧರ್ಮ ಪ್ರಚಾರ ನಾವು ಮಾಡುವುದಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *