ಚೆನ್ನೈ: ತಮಿಳುನಾಡಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಭಾವಿಸಿ ಕುಟುಂಬಸ್ಥರು ಭಾನುವಾರ ಸಮಾಧಿ ಮಾಡಿ ಬಂದಿದ್ದರು. ಆದರೆ 24 ಗಂಟೆಗಳ ಬಳಿಕ ವ್ಯಕ್ತಿ ಸೋಮವಾರ ಮನೆಗೆ ಜೀವಂತವಾಗಿ ಮರಳಿರುವ ಘಟನೆ ಈರೋಡ್ ಬಳಿಯ ಬನಗಲಾದಪುರದಲ್ಲಿ ನಡೆದಿದೆ.
ದಿನಗೂಲಿ ಕೆಲಸ ಮಾಡುತ್ತಿದ್ದ 55 ವರ್ಷದ ಮೂರ್ತಿ ಅವರು ಕಬ್ಬು ಕಟಾವು ಮಾಡಲು ಕೆಲವು ದಿನಗಳ ಹಿಂದೆ ತಿರುಪುರಕ್ಕೆ ಹೋಗಿದ್ದರು. ಆದರೆ ಭಾನುವಾರ ಬೆಳಗ್ಗೆ ಮೂರ್ತಿ ಅವರ ಮಗ ಕಾರ್ತಿಗೆ ಅವರ ತಂದೆ ಹತ್ತಿರದ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ಸಂಬಂಧಿಕರು ಕರೆ ಮಾಡಿ ತಿಳಿಸಿದ್ದರು. ಇದನ್ನೂ ಓದಿ: ಕರ್ನಾಟಕದಲ್ಲಿ ಇಸ್ಲಾಂ ಸ್ಲೀಪರ್ ಸೆಲ್ ಕೆಲಸ ಮಾಡ್ತಿದೆ: ಚಕ್ರವರ್ತಿ ಸೂಲಿಬೆಲೆ
ನಂತರ ಸ್ಥಳಕ್ಕೆ ಧಾವಿಸಿ ಅದು ತನ್ನ ತಂದೆಯ ಶವ ಎಂದು ಕಾರ್ತಿ ಖಚಿತಪಡಿಸಿದ ಬಳಿಕ ಸತ್ಯಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು. ಭಾನುವಾರ ಕುಟುಂಬಸ್ಥರು ಮೂರ್ತಿ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ.ಆದರೆ ಸೋಮವಾರ ಸಂಜೆ ಮೂರ್ತಿ ಮನೆಗೆ ಕಾಲಿಡುತ್ತಿದ್ದಂತೆ ಮನೆಯವರು ಬೆಚ್ಚಿಬಿದ್ದಿದ್ದಾರೆ. ಅವರ ಮಗ ಕಾರ್ತಿ ಕೂಡ ಶಾಕ್ ಆಗಿದ್ದಾರೆ. ಇದನ್ನೂ ಓದಿ: ನಮ್ಮ ತ್ಯಾಗಕ್ಕೆ ಬೆಲೆ ಸಿಗಲಿದೆ, ನಾನು ಕ್ಯಾಬಿನೆಟ್ ಸೇರಲಿದ್ದೇನೆ: ಆರ್.ಶಂಕರ್
ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿರುವ ಕಾರ್ತಿ, ನಮ್ಮ ತಂದೆ ಮನೆಗೆ ಪ್ರವೇಶಿಸಿದಾಗ ನಮ್ಮ ಕಣ್ಣುಗಳಿಂದಲೇ ನಂಬಲು ಆಗಲಿಲ್ಲ. ನನ್ನ ತಂದೆಯ ಸಾವಿನ ಸುದ್ದಿ ಕೇಳಿ ನಾನು ಆಘಾತಕ್ಕೊಳಗಾಗಿದ್ದೆ ಮತ್ತು ಅವರು ಮನೆಗೆ ಕಾಲಿಟ್ಟಾಗ ಮತ್ತೆ ಅಷ್ಟೇ ಆಘಾತಕ್ಕೊಳಗಾಗಿದ್ದೇನೆ ಎಂದಿದ್ದಾರೆ. ಇದೀಗ ಕಾರ್ತಿ ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತ ವ್ಯಕ್ತಿಯ ನಿಜವಾದ ಗುರುತನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.