ಕೀವ್: ರಷ್ಯಾ ದಾಳಿಯಿಂದ ಉಕ್ರೇನ್ ಸಂಕಷ್ಟವನ್ನು ಎದುರಿಸುತ್ತಿದೆ. ಉಕ್ರೇನಿಯನ್‍ರು ತಮ್ಮ ಪ್ರಾಣವನ್ನು ರಕ್ಷಣೆ ಮಾಡುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಕುಟುಂಬಗಳು ತಮ್ಮ ಮಕ್ಕಳ ದೇಹಗಳ ಮೇಲೆ ಕುಟುಂಬದ ವಿವರಗಳನ್ನು ಬರೆಯಲು ಪ್ರಾರಂಭಿಸಿದ್ದಾರೆ. ಈ ಆಘಾತಕಾರಿ ಬೆಳವಣಿಗೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಮಕ್ಕಳ ಫೋಟೋಗಳನ್ನು ಅನೇಕ ಪತ್ರಕರ್ತರು ಟ್ವೀಟ್ ಮಾಡಿದ್ದಾರೆ.
ಉಕ್ರೇನಿಯನ್ ಹುಡುಗಿಯ ಬೆನ್ನ ಮೇಲೆ ಹೆಸರು ದೂರವಾಣಿ ಸಂಖ್ಯೆಯನ್ನು ಆಕೆಯ ತಾಯಿ ಬರೆದಿದ್ದಾರೆ. ಮೂರು ದಿನಗಳ ಹಿಂದೆ ಈ ಫೋಟೋವನ್ನು ಬಾಲಕಿಯ ತಾಯಿ ಸಶಾ ಮಕೋವಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಥಳೀಯ ಭಾಷೆಯಲ್ಲಿದೆ ತಾಯಿ, ಮಗುವಿನ ಬೆನ್ನಿನ ಮೇಲೆ ಬರೆದಿದ್ಧಾರೆ. ಏನಾದರೂ ಅವಘಡ ಸಂಭವಿಸಿದಲ್ಲಿ, ಮಗಳು ವೆರಾಳನ್ನು ಯಾರಾದರೂ ಬದುಳಿದವಳು ಎಂದು ಆಕೆಯನ್ನು ಸ್ವಾಗತಿಸಿ ಎಂದು ಬರೆದಿದ್ದಾರೆ. ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್
ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ಧದಿಂದ ಭಯಾನಕ ದೃಶ್ಯಗಳು ಹೊರಹೊಮ್ಮಿವೆ. ರಷ್ಯಾ ದಾಳಿಯಿಂದ ಉಕ್ರೇನ್‌ಯಿಂದ ಜನರು ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಬೇಕು ಎಂದು ಕಸರತ್ತು ಮಾಡುತ್ತಿದ್ದಾರೆ. ಭಯದಿಂದಲೇ ಅಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.