ಕೆಜಿಎಫ್ ಮಾಸ್ಟರ್ ಮೈಂಡ್ ಜೊತೆ ಜ್ಯೂ.ಎನ್‌ಟಿಆರ್ ಹೊಸ ಸಿನಿಮಾ

Public TV
1 Min Read
jr.ntr 1

ಜ್ಯೂ.ಎನ್‌ಟಿಆರ್ ದಕ್ಷಿಣ ಭಾರತದ ಪ್ರತಿಭಾನ್ವಿತ ಕಲಾವಿದ, ಯಾವುದೇ ಪಾತ್ರ ಕೊಟ್ಟರು ಅದನ್ನು ನಿಭಾಯಿಸುವ ಮತ್ತು ಆ ಪಾತ್ರವೇ ತಾವಾಗಿ ನಟಿಸುವ ಮಹಾನ್ ಕಲಾವಿದ. ಅದಕ್ಕೆ ತಾಜಾ ಉದಾಹರಣೆ ಅಂದರೆ ಇತ್ತೀಚಿನ ಜ್ಯೂ.ಎನ್‌ಟಿಆರ್ ನಟನೆಯ `ಆರ್‌ಆರ್‌ಆರ್’ ಸಿನಿಮಾದಲ್ಲಿನ ಭೀಮ್ ಪಾತ್ರ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಮೋಡಿ ಮಾಡಿದೆ.`ಆರ್‌ಆರ್‌ಆರ್’ ಚಿತ್ರ ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿದೆ. ʻಆರ್‌ಆರ್‌ಆರ್‌ʼ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ ಮುಂದಿನ ಚಿತ್ರ ಯಾವುದು ಅಂತಾ ಕ್ಲ್ಯಾರಿಟಿ ಸಿಕ್ಕಿದೆ.

jr ntr ss rajamouli 759 680x340 1ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ನಂತರ ನೆಚ್ಚಿನ ನಟ ಜ್ಯೂ.ಎನ್‌ಟಿಆರ್ ಮುಂದೆ ಏನು ಮಾಡುತ್ತಾರೆ ಅನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. `ಆರ್‌ಆರ್‌ಆರ್’ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ ಎರಡು ದೊಡ್ಡ ಪ್ರಾಜೆಕ್ಟ್‌ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. `ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಜೊತೆ ಅವರು ತಮ್ಮ 31ನೇ ಸಿನಿಮಾ ಮಾಡಲಿದ್ದಾರೆ. ಅದಕ್ಕೂ ಮುಂಚೆ ಕೊರಟಾಲ ಶಿವ ಜೊತೆ ಸಿನಿಮಾ ಮಾಡಲಿದ್ದಾರೆ.

koratala siva and jr ntrಈ ಹಿಂದೆನೇ ಜ್ಯೂ.ಎನ್‌ಟಿಆರ್ ಮತ್ತು ಕೊರಟಾಲ ಶಿವ ಕಾಂಬಿನೇಷನ್‌ನಲ್ಲಿ `ಜನತಾ ಗ್ಯಾರೇಜ್’ ಚಿತ್ರ ತೆರೆಕಂಡಿತ್ತು. ಇದೀಗ ತಾರಕ್ ನಟನೆಯ 30ನೇ ಚಿತ್ರಮ ಕೂಡ ಕೊರಟಾಲ ಶಿವ ಅವರೊಂದಿಗೆ ಮಾಡಲಿದ್ದಾರೆ. ಇನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಜ್ಯೂ.ಎನ್‌ಟಿಆರ್ ನಟನೆಯ 31ನೇ ಚಿತ್ರ ಮೂಡಿ ಬರಲಿದೆ. ಈ ಚಿತ್ರಕ್ಕೆ ಪ್ರಶಾಂತ್‌ನೀಲ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದನ್ನು ಓದಿ: ಬರ್ತ್‍ಡೇ ಸ್ಪೆಷಲ್: ಕಾಶ್ಮೀರಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

prashaneel jr.ntrನಟ ತಾರಕ್‌ಗೆಂದೆ ನೀಲ್, ಭಿನ್ನ ಕಥೆಯನ್ನ ರೆಡಿ ಮಾಡಿದ್ದಾರೆ. ಇವರೆಗೂ ನಟಿಸಿರದ ಪಾತ್ರದಲ್ಲಿ ಜ್ಯೂ.ಎನ್‌ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ಒಟ್ನಲ್ಲಿ `ಆರ್‌ಆರ್‌ಆರ್’ ಸಿಕ್ಕಾಪಟ್ಟೆ ಡಿಮ್ಯಾಂಡ್‌ನಲ್ಲಿರೋ ಜ್ಯೂ.ಎನ್‌ಟಿಆರ್ ಭಿನ್ನ ಪಾತ್ರಗಳು ಅರಸಿ ಬರುತ್ತಿದೆ. ಪ್ರಶಾಂತ್‌ ನೀಲ್‌ ಮತ್ತು ಜ್ಯೂ.ಎನ್‌ಟಿಆರ್‌ ಸಿನಿಮಾ ನೋಡೋದಕ್ಕೆ ಫ್ಯಾನ್ಸ್‌ ಕಾಯ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *