ಬಿಜೆಪಿ ಕಂಪನಿಯಾಗಿ ಮಾರ್ಪಟ್ಟಿದೆ: ಅಖಿಲೇಶ್ ಯಾದವ್

Public TV
1 Min Read
Akhilesh Yadav

ಲಕ್ನೋ: ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯು ಸರ್ಕಾರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಬದಲಿಗೆ ಕಂಪನಿಯಾಗಿ ಮಾರ್ಪಟ್ಟಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕಿಡಿಕಾರಿದರು.

ಭಾರತದಲ್ಲಿ ಹೆಚ್ಚುತ್ತಿರುವ ತೈಲ ಬೆಲೆಗಳ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿಯು ತಮ್ಮದೇ ಆದ ಲಾಭವನ್ನು ಕಡಿಮೆ ಮಾಡದೆ ಜನರಿಂದ ಹೆಚ್ಚುತ್ತಿರುವ ವೆಚ್ಚಗಳನ್ನು ವಸೂಲಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

BJP FLAG

ಟ್ವೀಟ್‍ನಲ್ಲಿ ಏನಿದೆ?: ಇಂದಿನ ಹಣದುಬ್ಬರದ ಯುಗದಲ್ಲಿ ಕಂಪನಿಗಳು ಸಾರ್ವಜನಿಕರಿಂದ ಹೆಚ್ಚುತ್ತಿರುವ ವೆಚ್ಚವನ್ನು ಮರು ಪಡೆಯುತ್ತಿವೆ. ಆದರೆ ಅವರು ತಮ್ಮ ಲಾಭವನ್ನು ಕಡಿಮೆ ಮಾಡುತ್ತಿಲ್ಲ ಎಂದರು.

ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಪಾತ್ರ ಆಡಳಿತವಲ್ಲ, ಬದಲಿಗೆ ಸಾರ್ವಜನಿಕ ಹಿತಾಸಕ್ತಿಯ ನೀತಿಗಳನ್ನು ರೂಪಿಸುವುದು ಆಗಿದೆ. ಇಲ್ಲಿ ಯಾರೂ ಜನರನ್ನು ಶೋಷಣೆ ಮತ್ತು ದಬ್ಬಾಳಿಕೆ ಮಾಡಬಾರದು. ಆದರೆ ಬಿಜೆಪಿ ಕಂಪನಿಯಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಲು ಲೌಡ್ ಸ್ಪೀಕರ್- ಬಿಜೆಪಿ ನಾಯಕನ ಆಫರ್

ಇತ್ತೀಚೆಗಷ್ಟೇ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡ ಅವರು, ಕಳೆದ ಕೆಲವು ದಿನಗಳಿಂದ ಏರುತ್ತಿರುವ ಇಂಧನ ಬೆಲೆ ಮತ್ತು ಹಣದುಬ್ಬರದ ಬಗ್ಗೆ ಪದೇ ಪದೇ ಬಿಜೆಪಿ ಸರ್ಕಾರದ ವಾಗ್ದಾಳಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗಾಂಧಿ ಕುಟುಂಬದಿಂದಾಚೆಗೆ ಕಾಂಗ್ರೆಸ್‌ ಪಕ್ಷ ಕಾಣುವುದೇ ಇಲ್ಲ: ಅನುರಾಗ್‌ ಠಾಕೂರ್‌

Share This Article
Leave a Comment

Leave a Reply

Your email address will not be published. Required fields are marked *