ಬೆಂಗಳೂರು: ದೇಶದ ಭದ್ರತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಮತ್ತು ರಾಷ್ಟ್ರೀಯ ವಿಪತ್ತುಗಳ ಸಮಯದಲ್ಲಿ ನಾಗರಿಕರ ಸೇವೆಯಲ್ಲಿ ಗಡಿ ಭದ್ರತಾ ಪಡೆ ಮಹತ್ತರ ಪಾತ್ರವಹಿಸಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ನಗರದಲ್ಲಿರುವ ಸಹಾಯಕ ತರಬೇತಿ ಕೇಂದ್ರ, ಗಡಿ ಭದ್ರತಾ ಪಡೆ (ಬಿಎಸ್‍ಎಫ್)ಪರೇಡ್ ಮೈದಾನದಲ್ಲಿ ನಡೆದ ಬಿಎಸ್‍ಎಫ್ ಕಾನ್ಸ್‌ಟೇಬಲ್ ಟ್ರೈನಿಗಳ ಪರಿಶೀಲನಾ ಪರೇಡ್ ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಬಾರ್ಡರ್ ಸೆಕ್ಯುರಿಟಿ ಫೋರ್ಸ್ ದೇಶದ ಮೊದಲ ರಕ್ಷಣಾ ಪಡೆ ಮತ್ತು ವಿಶ್ವದ ಅತಿದೊಡ್ಡ ಗಡಿ ಕಾವಲು ಪಡೆ. ಇದು 1965ರ ಡಿಸೆಂಬರ್ 1ರಂದು ರೂಪುಗೊಂಡಿತು ಮತ್ತು ಅಂದಿನಿಂದ ಗಡಿ ಭದ್ರತಾ ಪಡೆ ದೇಶದ ಗೌರವವನ್ನು ಹೆಚ್ಚಿಸಿದೆ. 1971ರಲ್ಲಿ ಪಾಕಿಸ್ತಾನದ ವಿರುದ್ಧ ಮತ್ತು ಬಾಂಗ್ಲಾದೇಶದ ಯುದ್ಧದಲ್ಲಿ ಮತ್ತು 1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ, ಶೌರ್ಯ ಮತ್ತು ಪರಾಕ್ರಮದಲ್ಲಿ ಮೇಲುಗೈ ಸಾಧಿಸಿದೆ. ಕಾಶ್ಮೀರದ ಉಗ್ರವಾದದ ಸಂದರ್ಭದಲ್ಲಿ ಗಡಿ ಭದ್ರತಾ ಪಡೆಯ ಕೊಡುಗೆ ಅವಿಸ್ಮರಣೀಯ ಎಂದು ಶ್ಲಾಘಿಸಿದರು. ಇದನ್ನೂ ಓದಿ: ರಾಜ್ ಠಾಕ್ರೆ ಮನೆಗೆ ಭೇಟಿ ನೀಡಿದ ನಿತಿನ್ ಗಡ್ಕರಿ – ಉದ್ದೇಶವೇನು?
ಗಡಿ ಭದ್ರತಾ ಪಡೆಯು ಗಡಿ ಸವಾಲುಗಳನ್ನು ಎದುರಿಸಲು ನೆಲಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಸಾಮರ್ಥ್ಯದ ಆಧಾರದ ಮೇಲೆ ದೇಶದ ವಿಶ್ವಾಸಾರ್ಹ ಸಶಸ್ತ್ರ ಪಡೆಗಳಲ್ಲಿ ಒಂದಾಗಿದೆ. ದೇಶದ ಸಾವಿರಾರು ಕಿಲೋಮೀಟರ್ ಅಂತರಾಷ್ಟ್ರೀಯ ಗಡಿಗಳ ಭದ್ರತೆಯನ್ನು ಗಡಿ ಭದ್ರತಾ ಪಡೆ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ನಿಮ್ಮ ಧೈರ್ಯ ಮತ್ತು ಶೌರ್ಯದಿಂದ ದೇಶ ಸುರಕ್ಷಿತವಾಗಿದೆ ಎಂದರು.
ಯುಐಡಿ ಕೋರ್ಸ್‍ಗಳಿಗೆ ಎಸ್‍ಟಿಸಿಯನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಎಂದು ಘೋಷಿಸಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಇದು ಡ್ರಿಲ್ ಮತ್ತು ಪಾಕಶಾಸ್ತ್ರದ ಕೋರ್ಸ್‍ಗಳನ್ನು ನೀಡುವ ಏಕೈಕ ತರಬೇತಿ ಕೇಂದ್ರವಾಗಿದೆ. ಈ ತರಬೇತಿ ಕೇಂದ್ರದಲ್ಲಿ ನೀವು ಪಡೆದ ಉನ್ನತ ಗುಣಮಟ್ಟದ ತರಬೇತಿಯು ಕರ್ತವ್ಯದ ಬಗ್ಗೆ ಜಾಗೃತವಾಗಿರಿಸುತ್ತದೆ ಮತ್ತು ನಿಮ್ಮಲ್ಲಿ ದೇಶಭಕ್ತಿ, ಧೈರ್ಯ, ಸಾಹಸ ಮತ್ತು ಶೌರ್ಯವನ್ನು ಬೆಳೆಸುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?
ದೇಶ ಸೇವೆಗೆ ತಮ್ಮ ಪುತ್ರರನ್ನು ಅರ್ಪಿಸಿದ ಕುಟುಂಬಗಳಿಗೆ ಧನ್ಯವಾದ ಸಲ್ಲಿಸಿದ ಗೌರವಾನ್ವಿತ ರಾಜ್ಯಪಾಲರು, ದೇಶ ಸೇವೆಗಾಗಿ ತಮ್ಮ ಕುಟುಂಬದಿಂದ ಯಾರನ್ನಾದರೂ ಸೇನೆಗೆ ಕಳುಹಿಸುವಂತೆ ಇಡೀ ದೇಶದ ನಾಗರಿಕರಿಗೆ ಮನವಿ ಮಾಡಿದರು. ನಂತರ ದೇಶದ ಗಡಿ ಭದ್ರತೆ ಮತ್ತು ರಕ್ಷಣೆಗಾಗಿ ದೃಢನಿಶ್ಚಯದ ತರಬೇತಿ ಪಡೆದವರಿಗೆ ಅಭಿನಂದಿಸಿದರು. ಗಡಿ ಭದ್ರತಾ ಪಡೆಯ ಜನರಲ್ ಇನ್ಸ್‌ಪೆಕ್ಟರ್ ಜಾರ್ಜ್ ಮಂಜೂರನ್ ಮುಂತಾದ ಅಧಿಕರಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.