ಯುಗಾದಿ ಸಂಭ್ರಮದಲ್ಲಿ ಮಿಂದೆದ್ದ ಸ್ಯಾಂಡಲ್‌ವುಡ್ ತಾರೆಯರು

Public TV
2 Min Read
RAGINI

ಹೊಸ ಚಿಗುರಿನೊಂದಿಗೆ ನವ ವಸಂತದ ಯುಗಾದಿ ಸಂಭ್ರಮದಲ್ಲಿ ಮಿಂದೆದ್ದ ಸ್ಯಾಂಡಲ್‌ವುಡ್ ತಾರೆಯರು ಸಂಭ್ರಮದಲ್ಲಿದ್ದಾರೆ ಸ್ಯಾಂಡಲ್‌ವುಡ್ ನಟ- ನಟಿಯರು. ಹಬ್ಬದ ಖುಷಿಯಲ್ಲಿರುವ ಚಂದನವನದ ಕಲಾವಿದರು ತಮ್ಮ ಅಭಿಮಾನಿಗಳಿಗೆ ಶುಭ ಹಾರೈಸುತ್ತ, ತಮ್ಮ ಕುಟುಂಬದ ಸದಸ್ಯರ ಜತೆ ಹಬ್ಬ ಆಚರಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದ್ದಾರೆ.

ಚಂದನವನದ ತುಪ್ಪದ ಬೆಡಗಿ ರಾಗಿಣಿ ಕೂಡ ಇಂದು ಸಡಗರದಿಂದ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು, ನವ ವರುಷ ಯುಗಾದಿ ಹಬ್ಬದಂದು ಬ್ಲೂ ಕಲರ್ ಸೀರೆಯಲ್ಲಿ ಅಂದದ ಆಭರಣದ ಜೊತೆ ಮಿರ ಮಿರ ಅಂತಾ ಮಿಂಚಿದ್ದಾರೆ. ರಾಗಿಣಿಯ ಹಬ್ಬದ ಲುಕ್ಸ್ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

RAGINI 1

`ವಜ್ರಕಾಯ’ ಚಿತ್ರದ ಮೂಲಕ ಚಂದನವನಕ್ಕೆ ಲಗ್ಗೆಯಿಟ್ಟ ಸುಂದರಿ ನಭಾ ನಟೇಶ್, ಸದ್ಯ ಟಾಲಿವುಡ್ ಅಂಗಳದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲಿನ ಅನೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ, ಟಾಲಿವುಡ್ ನಲ್ಲೂ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಶೂಟಿಂಗ್ ನಡುವೆಯೂ ಅವರು ಹಬ್ಬಕ್ಕೆ ಬಿಡುವು ಮಾಡಿಕೊಂಡು ಯುಗಾದಿ ಆಚರಿಸಿದ್ದಾರೆ. ಹಬ್ಬದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋ ಇದೀಗ ಭಾರೀ ವೈರಲ್ ಆಗಿದೆ. ರೆಡ್ ಕಲರ್ ಲೆಹೆಂಗಾದಲ್ಲಿ ಗಿಣಿ ಮೂಗಿನ ಚೆಲುವೆ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ನಿರ್ಮಾಪಕರಿಂದ ಮತ್ತೊಂದು ಚಿತ್ರ ಘೋಷಣೆ : ರವಿತೇಜ ಹೀರೋ

ಟಿವಿ ರಿಯಾಲಿಟಿ ಶೋ ಮೂಲಕ ಸದ್ದು ಮಾಡಿರೋ ಅಶ್ವಿತಿ ಶೆಟ್ಟಿ, ಕಿರುತೆರೆ ಮತ್ತು ಮಾಡೆಲಿಂಗ್ನಲ್ಲಿ ಬ್ಯುಸಿಯಾಗಿದ್ದರೂ, ಹಬ್ಬ ಹರಿದಿನಗಳನ್ನು ಅವರು ಯಾವತ್ತೂ ಮಿಸ್ ಮಾಡಿಕೊಳ್ಳುವುದಿಲ್ಲ. ಹೀಗಾಗಿಯೇ ಯುಗಾದಿಯನ್ನೂ ಅವರು ಹುರುಪಿನೊಂದಿಗೆ ಬರಮಾಡಿಕೊಂಡಿದ್ದಾರೆ. ಹಬ್ಬವನ್ನು ಮತ್ತಷ್ಟು ರಂಗಾಗಿಸಲು ಅವರು ರೆಡ್ ಕಲರ್ ಸೀರೆನಲ್ಲಿ ಹೊಳೆದಿದ್ದಾರೆ. ಸದ್ಯ ಈ ಫೋಟೋ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

 

ಪ್ರತಿ ಹಬ್ಬಗಳನ್ನು ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದೊಂದಿಗೆ ಆಚರಿಸುವುದು ವಾಡಿಕೆ. ಹಲವು ಹಬ್ಬಗಳಲ್ಲಿ ಅವರು ಸಿನಿಮಾ ರಂಗದ ತಾರೆಯರನ್ನೂ ಕರೆದದ್ದು ಇದೆ. ಈ ಬಾರಿ ಯುಗಾದಿಯನ್ನು ಅವರು ಕುಟುಂಬದೊಂದಿಗೆ ಆಚರಿಸಿದ್ದಾರೆ. ಪತ್ನಿ ಪ್ರಿಯಾಂಕ, ಇಬ್ಬರು ಮಕ್ಕಳು ಮತ್ತು ಸಹೋದರ ಮಗ, ನಟ ನಿರಂಜನ್ ಜತೆಗಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಭಿಮಾನಿಗಳಿಗೆ ಯುಗಾದಿಯ ಸಂದೇಶವನ್ನೂ ಬರೆದಿದ್ದಾರೆ.

UPENDRA

ಸ್ಯಾಂಡಲ್ವುಡ್ ಎವರ್ಗ್ರೀನ್ ನಟ ನೆನೆಪಿರಲಿ ಪ್ರೇಮ್ ಕೂಡ ಮಡದಿ ಜ್ಯೋತಿ ಅವರ ಜೊತೆಯಿರೋ ಫೋಟೋ ಶೇರ್ ಮಾಡುವುದರ ಮೂಲಕ ‘ತೊಲಗಲಿ ದುಃಖ, ತೊಲಗಲಿ ಮತ್ಸರ, ಪ್ರೇಮಕ್ಕೆ ಮೀಸಲು ನವ ಸಂವತ್ಸರ’ ಅಂತಾ ಬರೆದುಕೊಂಡಿದ್ದಾರೆ.. ಹೀಗೆ ಸ್ಯಾಂಡಲ್‌ವುಡ್ ನಟ ನಟಿಯರು ಯುಗಾದಿ ಹಬ್ಬವನ್ನ ತಮ್ಮದೇ ಆದ ರೀತಿಯಲ್ಲಿ ಕಲರ್ಫುಲ್ ಆಚರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *