3 ತಿಂಗಳ ನಂತರ ಕಾಳಿಚರಣ್ ಮಹಾರಾಜ್‍ಗೆ ಸಿಕ್ತು ಜಾಮೀನು

Public TV
1 Min Read
kalicharan new

ರಾಯ್‍ಪುರ: ದ್ವೇಷ ಭಾಷಣ ಮಾಡಿದ ಪ್ರಕರಣದ ಹಿನ್ನೆಲೆ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಕಳೆದ ಮೂರು ತಿಂಗಳಿಂದ ಸೆರೆವಾಸ ಅನುಭವಿಸುತ್ತಿದ್ದರು. ಆದರೆ ಈಗ ಛತ್ತೀಸ್‍ಗಢ ಹೈಕೋರ್ಟ್ ಕಾಳಿಚರಣ್ ಅವರಿಗೆ ಜಾಮೀನು ನೀಡಿದೆ.

Kalicharan Maharaj: Kali devotee, who claimed a 'vision' | India News,The Indian Express

ರಾಜ್ಯ ರಾಜಧಾನಿ ರಾಯ್‍ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾತ್ಮ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮತ್ತು ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಈ ಕುರಿತು ಭಾರೀ ಚರ್ಚೆಯಾಗುತ್ತಿತ್ತು. ಕಾಳಿಚರಣ್ ವಕೀಲರು ಜಾಮೀನಿಗಾಗಿ ಓಡಾಡುತ್ತಿದ್ದರೂ ಸಿಕ್ಕಿರಲಿಲ್ಲ. ಆದರೆ ಮೂರು ತಿಂಗಳ ನಂತರ ಛತ್ತೀಸ್‍ಗಢ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಇದನ್ನೂ ಓದಿ: ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪೊಲೀಸರ ಮಸ್ತ್ ಡ್ಯಾನ್ಸ್: ಪರ,ವಿರೋಧ ಚರ್ಚೆ

ಡಿಸೆಂಬರ್ 30 ರಂದು ಮಧ್ಯಪ್ರದೇಶದ ರಾಯ್‍ಪುರ ಕಾರ್ಯಕ್ರಮದಲ್ಲಿ ಕಾಳಿಚರಣ್ ಅವರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ಈ ವೇಳೆ ಕಾಳಿಚರಣ್ ಅವರು ಗಾಂಧಿ ದೇಶವನ್ನು ನಾಶಮಾಡುತ್ತಿದ್ದಾರೆ ಎಂದು ಆರೋಪಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

kali maharaj

ಈ ವೀಡಿಯೋದಲ್ಲಿ ಅವರು, ನಾನು ನಾಥೂರಾಂ ಗೋಡ್ಸೆಗೆ ನಮನ ಸಲ್ಲಿಸುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆ ಚರ್ಚೆಗೆ ಕಾರಣವಾಗಿತ್ತು. ವಿಚಾರಣೆಯಲ್ಲಿ ಕಾಳಿಚರಣ್ ಪರ ವಕೀಲ ಕಿಶೋರ್ ಭಾದುರಿ ಅವರು, ತಮ್ಮ ಕಕ್ಷಿದಾರರು ನಿರಪರಾಧಿಯಾಗಿದ್ದು, ರಾಜಕೀಯ ಪೈಪೋಟಿಯಿಂದಾಗಿ ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೈಕೋರ್ಟ್‍ಗೆ ತಿಳಿಸಿದ್ದರು. ಇದನ್ನೂ ಓದಿ: ಬಾಲ್ಯ ವಿವಾಹ ಮಾಡಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ್ರು

Share This Article
Leave a Comment

Leave a Reply

Your email address will not be published. Required fields are marked *