ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಭೇಟಿಗೆ ಅದೆಷ್ಟೋ ವರ್ಷಗಳಿಂದ ಕಾದವರು ಇದ್ದಾರೆ. ಅವರೊಂದಿಗೆ ಒಂದು ಫೋಟೋ ತಗೆಸಿಕೊಳ್ಳಲು ಪರದಾಡಿದವರು ಇದ್ದಾರೆ. ಅವರ ನಟನೆಯ ಒಂದೇ ಒಂದು ಸಿನಿಮಾದಲ್ಲಿ ಒಂದು ದೃಶ್ಯದಲ್ಲಾದರೂ ನಟಿಸಬೇಕು ಎಂದು ಕನಸು ಕಂಡವರು ಇದ್ದಾರೆ. ಆದರೆ, ಅದೃಷ್ಟವಂತೆ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಿಗ್ ಬಿ ಜತೆ ನಟಿಸುವುದಲ್ಲದೇ, ಆ ಫೋಟೋವನ್ನು ಸ್ವತಃ ಅಮಿತಾಭ್ ಬಚ್ಚನ್ ಅವರೇ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ
ಅಮಿತಾಭ್ ಬಚ್ಚನ್ ಅವರ ಜತೆ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳಲ್ಲಿ ಶೂಟಿಂಗ್ ಕೂಡ ಮುಗಿದಿದೆ. ಈ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ತಗೆದು ಫೋಟೋವನ್ನು ಅಮಿತಾಭ್ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್
ಸದ್ಯ ಅಮಿತಾಭ್ ನಟನೆಯ ಗುಡ್ ಬೈ ಹೆಸರಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಅವರದ್ದು ಅಮಿತಾಭ್ ಮಗಳ ಪಾತ್ರ ಎನ್ನಲಾಗುತ್ತಿದೆ. ಈ ಬಾರಿಯ ಹುಟ್ಟು ಹಬ್ಬವನ್ನು ರಶ್ಮಿಕಾ ಅವರು ಇದೇ ಶೂಟಿಂಗ್ ಸೆಟ್ ನಲ್ಲಿ ಆಚರಿಸಿಕೊಂಡಿದ್ದರು. ಅದಲ್ಲೇ, ಅಮಿತಾಭ್ ಅವರ ಗುಣಗಾನ ಕೂಡ ಮಾಡಿದ್ದರು. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?
ರಶ್ಮಿಕಾ ಅವರ ಎರಡನೇ ಬಾಲಿವುಡ್ ಸಿನಿಮಾವಿದು. ಕ್ವೀನ್ ಸೇರಿದಂತೆ ಹಲವು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ವಿಕಾಸ್ ಬಹ್ಲ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ನೀನಾ ಗುಪ್ತಾ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದ ತಾರಾಗಣದಲ್ಲಿ ಇದ್ದಾರೆ.