ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಉಪನಾಯಕನಾಗಿರುವ ಕನ್ನಡಿಗ ಕೆ.ಎಲ್.ರಾಹುಲ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ನೂತನವಾಗಿ ಸೇರ್ಪಡೆಗೊಂಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ. ಅಲ್ಲದೇ, ಸುಮಾರು ಮೂರು ವರ್ಷ ಕಿಂಗ್ಸ್ ಪಂಜಾಬ್ ತಂಡದ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸದಾ ಬ್ಯೂಸಿ ಶೆಡ್ಯೂಲ್‌ನಲ್ಲಿರುವ ಕೆ.ಎಲ್.ರಾಹುಲ್ ಬ್ರೇಕ್‌ಫಾಸ್ಟ್ ವಿಥ್ ಚಾಂಪಿಯನ್ಸ್ ಎಂಬ ಟಾಕ್ ಶೋ ನಲ್ಲಿ ತಮ್ಮ ಜೀವನದ ಸಿಹಿ-ಕಹಿ ಅನುಭವಗಳನ್ನು ಹಂಚಿಕೊAಡಿದ್ದಾರೆ. ಕ್ರಿಕೆಟ್ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಜೀನವದಲ್ಲಿ ನಡೆದ ಇಂಟರೆಸ್ಟಿಂಗ್ ಸಂಗತಿಗಳನ್ನು ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.
ಮಾತನಾಡುತ್ತಾ, ಒಂದೊಮ್ಮೆ ನಾನು ನನ್ನ ಅಮ್ಮನನ್ನು ಕೇಳಿದೆ ನನಗೇಕೆ ರಾಹುಲ್ ಎಂದು ಹೆಸರಿಟ್ಟಿದ್ದು? ಅಂತ, ಅದಕ್ಕೆ ನನ್ನಮ್ಮ ಒಂದು ಕಥೆಯನ್ನೇ ಹೇಳಿಬಿಟ್ಟರು. ಅವರು ಶಾರುಖ್ ಖಾನ್‌ಗೆ ದೊಡ್ಡ ಅಭಿಮಾನಿಯಾಗಿದ್ದರಂತೆ, 90ರ ದಶಕದಲ್ಲಿ ಶಾರುಖ್ ಅವರು ನಟಿಸುವ ಸಿನಿಮಾದ ಪಾತ್ರಗಳಿಗೆಲ್ಲ ರಾಹುಲ್ ಹೆಸರೇ ಬಹುತೇಕವಾಗಿ ಇರುತ್ತಿತ್ತಂತೆ. ಹಾಗಾಗಿ ನನಗೂ ಅದೇ ಹೆಸರು ಇಟ್ಟೆವು ಎಂದು ಹೇಳಿದ್ದರು. ನಾನು ಇದು ವಾಸ್ತವವೇ ಇರಬೇಕೆಂದು ನಂಬಿಕೊಂಡಿದ್ದೆ. ಈ ನಡುವೆ ನನ್ನ ಗೆಳೆಯನೊಬ್ಬ ನನ್ನ ಹೆಸರಿನ ಬಗ್ಗೆ ಕೇಳಿದಾಗ ನಾನೂ ಹೀಗೆ ಹೇಳಿದ್ದೆ. ಅವನು ಸ್ವಲ್ಪ ಶಾರುಖ್ ಖಾನ್ ಸಿನಿಮಾಗಳನ್ನೆಲ್ಲ ನೋಡಿಕೊಂಡಿದ್ದಂತೆ ಕಾಣುತ್ತದೆ. ಇದನ್ನೂ ಓದಿ: ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು
ತಕ್ಷಣ ರಾಹುಲ್ ಹೆಸರಿನಲ್ಲಿ ಶಾರೂಖ್ ಪಾತ್ರ ಮಾಡಿದ್ದು 1994ರಲ್ಲಿ, ನೀನು ಹುಟ್ಟಿದ್ದು 1992ರಲ್ಲಿ. ಹೀಗಿದ್ದ ಮೇಲೆ ರಾಹುಲ್ ಹೆಸರನ್ನು ನಿನಗೆ ಇಡಲು ಹೇಗೆ ಸಾಧ್ಯವಾಯಿತು? ಎಂದು ಕೇಳಿದ. ನನಗೂ ಅದು ಹೌದೆಂದು ಖಾತ್ರಿಯಾಯಿತು. ಮತ್ತೆ ಅಮ್ಮನಿಗೊಮ್ಮೆ ಕೇಳಿದೆ. ಅದಕ್ಕವರು ಏನೋ ಇರಬಹುದು, ಅದಕ್ಕೆಲ್ಲ ಈಗ ಯಾರು ತಲೆಕೆಡಿಸಿಕೊಳ್ಳುತ್ತಾರೆ? ಎಂದುಬಿಟ್ಟರು. ಇನ್ನು ನಮ್ಮಪ್ಪನಿಗೆ ಕೇಳಿದ್ದಕ್ಕೆ ಅವರು ಇನ್ನೊಂದು ಬ್ರಹ್ಮಾಂಡ ಕಥೆಯನ್ನೇ ಹೇಳಿದರು. ಅವರು ಸುನಿಲ್ ಗಾವಸ್ಕರ್ ಅಭಿಮಾನಿಯಾಗಿದ್ದರಂತೆ. ಗಾವಸ್ಕರ್ ತಮ್ಮ ಪುತ್ರನಿಗೆ ರೋಹನ್ ಎಂದು ಹೆಸರಿಟ್ಟಿದ್ದರು. ಆದ್ದರಿಂದ ನನಗೂ ಅದೇ ಹೆಸರನ್ನಿಡಲು ಅಪ್ಪ ಬಯಸಿದ್ದರಂತೆ. ಆದರೆ ಅವರು ರೋಹನ್ ಹೆಸರನ್ನು ರಾಹುಲ್ ಎಂದು ತಪ್ಪುತಿಳಿದು ಹಾಗೆಯೇ ಇಟ್ಟುಬಿಟ್ಟರಂತೆ ಎಂದು ಮುಗುಳ್ನಕ್ಕರು.
ವಿಜ್ಞಾನ ತೆಗೆದುಕೊಂಡರೆ ಕ್ರಿಕೆಟ್ ಆಡಲು ಕಷ್ಟ
ನನ್ನ ತಂದೆ-ತಾಯಿ ವೃತ್ತಿಯಲ್ಲಿ ಪ್ರೊಫೆಸರ್. ಸಾಲದ್ದಕ್ಕೆ ಕುಟುಂಬದಲ್ಲಿ ಯಾರನ್ನೇ ನೋಡಿದರೂ ಒಂದು ವೈದ್ಯರು, ಇಲ್ಲವೇ ಎಂಜಿನಿಯರ್‌ಗಳಾಗಿದ್ದರು ಅಥವಾ ದೊಡ್ಡದೊಡ್ಡ ಉದ್ಯೋಗದಲ್ಲಿದ್ದರು. ನಾನು ಸಹ 10ನೇ ತರಗತಿಯವರೆಗೆ ಉತ್ತಮ ವಿದ್ಯಾರ್ಥಿಯೇ ಆಗಿದ್ದೆ. ಅದು ಮುಗಿದ ಕೂಡಲೇ ಮುಂದಿನ ಶಿಕ್ಷಣಕ್ಕೆ ವಿಜ್ಞಾನವೋ, ವಾಣಿಜ್ಯವೋ ಎಂಬ ಗೊಂದಲ ಶುರುವಾಗಿತ್ತು. ನನ್ನ ಕುಟುಂಬದಲ್ಲಿ ಯಾರೂ, ಎಂದೂ ವಾಣಿಜ್ಯಶಾಸ್ತ್ರ ತೆಗೆದು ಕೊಂಡಿರಲಿಲ್ಲ. ಆ ವಿಷಯ ತೆಗೆದುಕೊಂಡರೆ ಅವಮಾನವೆಂಬಂತೆ ಅವರು ಭಾವಿಸಿದ್ದರು. ಆದರೆ ನಾನು ಮಾತ್ರ ವಿಜ್ಞಾನ ತೆಗೆದುಕೊಂಡು ಜೊತೆಜೊತೆಗೇ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಅವರು ಅದನ್ನು ಅರ್ಥ ಮಾಡಿಕೊಂಡರು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: IPL ಮೊದಲ ಪಂದ್ಯದಲ್ಲೇ ವಿಲಿಯಮ್ಸನ್‌ಗೆ 12 ಲಕ್ಷ ದಂಡ: ಕಾರಣ ಇಷ್ಟೇ…
ಅಮ್ಮ ಈಗಲೂ ಬೈಯುತ್ತಾರೆ
ನನ್ನಮ್ಮ ಈಗಲೂ ನೀನು ಪದವಿ ಪೂರೈಸಿಲ್ಲ ಎಂದು ಬೈಯ್ಯುತ್ತಾರೆ. ಲಾಕ್‌ಡೌನ್ ಆಗಿದ್ದಾಗಲೂ ನಿನೇಕೆ ಪಟ್ಟು ಹಿಡಿದು ಓದಬಾರದು? 30 ವಿಷಯ ಓದು ಮುಗಿಸಲು ಏನು ಕಷ್ಟ? ಎಂದು ಗರಿದ್ದರು. ಅದಕ್ಕೆ ನಾನು, ಅಮ್ಮ ನಾನು ಕ್ರಿಕೆಟ್ ಆಡುತ್ತಿದ್ದೇನೆ, ಪ್ರದರ್ಶನ ಚೆನ್ನಾಗಿಯೇ ಇದೆ. ಈಗ ನಾನು 30 ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೀಬೇಕಾ? ವಿದ್ಯೆ ನನಗೆ ಅತ್ತುತ್ತಿಲ್ಲ ಏನು ಮಾಡಲಿ ಹೇಳು? ಎಂದು ಪ್ರಶ್ನಿಸಿದ್ದೆ. ಸಹಜವಾಗಿಯೇ ಹೌದೆಂದುಬಿಟ್ಟರು ಅಮ್ಮ. ನಾನು ಭಾರತ ಕ್ರಿಕೆಟ್ ತಂಡಕ್ಕೆ ಸೇರಿದಾಗಲೂ ಅಮ್ಮನಿಗೆ ಹೆಚ್ಚೆನು ಖುಷಿಯಿರಲಿಲ್ಲ. ಅದಾದ 4 ವರ್ಷ ನಾನು ಕ್ರಿಕೆಟ್ ಆಡಿ ಹೆಸರು ಮಾಡಿದ್ದೆ. ಆಮೇಲೆ ನನಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (RBI) ಕೆಲಸ ಸಿಕ್ಕಿತು. ನನಗೆ ಕೇಂದ್ರ ಸರ್ಕಾರದ ನೌಕರಿ ಸಿಕ್ಕಿದ್ದಾಗ ಅವರು ಬಹಳ ಖುಷಿಪಟ್ಟಿದ್ದರು. ಪರ್ವಾಗಿಲ್ಲ ಇನ್ನು ನಿನಗೆ ಒಳ್ಳೆಯ ಸಂಬಳ ಸಿಗುತ್ತದೆ, ಜೀವನದಲ್ಲಿ ಒಂದು ನೆಲೆ ಕಂಡುಕೊಂಡೆ ಎಂಬಂತಿತ್ತು ಅವರ ಭಾವ ಎಂದು ಭಾವುಕರಾದರು.