ಗಂಡಸ್ತನ ಪದ ಬಳಕೆಗೆ ಹೆಚ್‌.ಡಿ.ಕುಮಾರಸ್ವಾಮಿ ವಿಷಾದ

Public TV
1 Min Read
KUMARASWAMY

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸುವ ಭರದಲ್ಲಿ ಗಂಡಸ್ತನ ಪದ ಬಳಸಿ ವಿವಾದಕ್ಕೆ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಹೇಳಿಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಗಂಡಸ್ತನ ಪದ ಬಳಕೆ ಕುರಿತು ಸ್ಪಷ್ಟನೆ ನೀಡಿದ ಅವರು, ಮಾತನಾಡುವ ಭರದಲ್ಲಿ ಗಂಡಸ್ತದ ಬಗ್ಗೆ ಹೇಳಿದ್ದೇನೆ. ಕೂಡಲೇ ಅದನ್ನ ಸರಿ ಮಾಡಿಕೊಂಡಿದ್ದೇನೆ. ನನ್ನ ಪದ ಬಳಕೆಯಿಂದ ನೋವಾಗಿದ್ದರೆ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಗಂಡಸ್ತನ ಯಾವ ಯಾವುದಕ್ಕೆ ಬಳಸಬೇಕು ಎಂದು ಕುಮಾರಸ್ವಾಮಿಗೆ ಗೊತ್ತಿದೆ: ಈಶ್ವರಪ್ಪ

basavaraj bommai 7

ಈದ್ಗಾ ಮೈದಾನದಲ್ಲಿ ಅಮಾಯಕ ಮಕ್ಕಳ ಬಲಿದಾನವಾಯ್ತು. ಇದನ್ನು ನೋಡಿದ ಮೇಲೆ ನನಗೆ ರೋಷ ಉಕ್ಕಿ ಬಂತು. ಆವೇಶದಲ್ಲಿ ನಾನು ಗಂಡಸ್ತನ ಅಂತ ಮಾತನಾಡಿದ್ದೆ. ಆಗಲೇ ಪದ ಬಳಕೆ ಬಗ್ಗೆ ಅನ್ಯಥಾ ಭಾವಿಸಬೇಡಿ ಅಂದಿದ್ದೇನೆ. ಈ ಬಗ್ಗೆ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಎರಡು ತಿಂಗಳಲ್ಲಿ ಸರ್ಕಾರ ಏನೂ ಮಾಡಿಲ್ಲ. ಅದಕ್ಕೆ ಆಕ್ರೋಶದಲ್ಲಿ ಅ ಪದ ಬಳಕೆ ಮಾಡಿದ್ದೇನೆ. ಸರ್ಕಾರ ಮೌನವಾಗಿ ಇದ್ದಿದ್ದಕ್ಕೆ ಇಷ್ಟು ದೊಡ್ಡದು ಆಗಿದೆ. ಸಮಾಜ ನಿರ್ನಾಮ ಮಾಡೋಕೆ ವೇದಿಕೆ ಸೃಷ್ಟಿ ಮಾಡ್ತಿದ್ದೀರಾ? ಯಾರೊಬ್ಬರ ಮೇಲೂ ಕ್ರಮಕೈಗೊಂಡಿಲ್ಲ. ನಿಮಗೆ ಶಾಂತಿ ಬೇಕಿಲ್ಲ, ಬೆಂಕು ಹಚ್ಚುವುದು ಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಿಮಗೆ ಗಂಡಸ್ತನ ಇದ್ದರೆ, ಏನು ಗೊತ್ತಿಲ್ಲದಂತೆ ಮೌನವಾಗಿರಬೇಡಿ: ಸಿಎಂಗೆ ಹೆಚ್‍ಡಿಕೆ ಸವಾಲ್

HIJAB

ಹಿಜಾಬ್ ವಿಚಾರದಲ್ಲಿ ನನ್ನ ಹೇಳಿಕೆಯಲ್ಲಿ ಯಾವುದು ಬದಲಾವಣೆ ಮಾಡಿಲ್ಲ. ಹೀಗೆ 12 ಸೂತ್ರ ಕೊಡೋರಿಗೆ ಬಾಂಧವ್ಯಗಳ ಮೌಲ್ಯ ಗೊತ್ತಿಲ್ಲ. ಒಬ್ಬರಿಗೊಬ್ಬರಿಗೆ ಸಂಘರ್ಷ ಮಾಡುವುದೇ ನಿಮಗೆ ಬೇಕು. ಈದ್ಗಾ ಮೈದಾನದಲ್ಲಿ ಏನಾಗಿತ್ತು? ದೇವೇಗೌಡರ ಸರ್ಕಾರ ಇತ್ತು ಅವತ್ತು ಎಂದು ನೆನಪಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *