Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕನ್ನಡ ಮತ್ತು ಹಿಂದಿಯಲ್ಲಿ ಸರೋಜಿನಿ ನಾಯ್ಡು ಬಯೋಪಿಕ್ : ಭಾರತದ ಕೋಗಿಲೆ ಪಾತ್ರದಲ್ಲಿ ಇಬ್ಬರು ನಟಿಯರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | ಕನ್ನಡ ಮತ್ತು ಹಿಂದಿಯಲ್ಲಿ ಸರೋಜಿನಿ ನಾಯ್ಡು ಬಯೋಪಿಕ್ : ಭಾರತದ ಕೋಗಿಲೆ ಪಾತ್ರದಲ್ಲಿ ಇಬ್ಬರು ನಟಿಯರು

Bollywood

ಕನ್ನಡ ಮತ್ತು ಹಿಂದಿಯಲ್ಲಿ ಸರೋಜಿನಿ ನಾಯ್ಡು ಬಯೋಪಿಕ್ : ಭಾರತದ ಕೋಗಿಲೆ ಪಾತ್ರದಲ್ಲಿ ಇಬ್ಬರು ನಟಿಯರು

Public TV
Last updated: March 30, 2022 3:32 pm
Public TV
Share
3 Min Read
sonal shantipriya
SHARE

“ಭಾರತದ ಕೋಗಿಲೆ’ ಎಂದೇ ಜನಪ್ರಿಯರಾದ ಸರೋಜಿನಿ ನಾಯ್ಡು ಕುರಿತ ಬಯೋಪಿಕ್​ ಕುರಿತಾದ ಸಿನಿಮಾ ಬರುತ್ತಿದೆ. ವಿನಯ್​ ಚಂದ್ರ ನಿರ್ದೇಶನದ ಈ ಚಿತ್ರವು ಇನ್ನಷ್ಟೇ ಶುರುವಾಗಬೇಕಿದ್ದು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಚರಣ್​ ಸುವರ್ಣ, ಹನಿ ಚೌಧರಿ ಮತ್ತು ಸಿ.ಬಿ. ಕುಲಕರ್ಣಿ ಜತೆಯಾಗಿ ಈ ಚಿತ್ರವನ್ನು ವಿಸ್ತಾ ಫಿಲಂಸ್ ಮೂಲಕ ನಿರ್ಮಿಸುತ್ತಿದ್ದಾರೆ. ಸರೋಜಿನಿ ನಾಯ್ಡು ಅವರ ಚಿಕ್ಕ ವಯಸ್ಸಿನ  ಪಾತ್ರದಲ್ಲಿಸೋನಲ್​ ಮಾಂಟೆರೊ ನಟಿಸಿದರೆ, ಹಿರಿವಯಸ್ಸಿನ ಪಾತ್ರವನ್ನು ಶಾಂತಿಪ್ರಿಯ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಜನಪ್ರಿಯ ನಾಯಕಿಯಾಗಿದ್ದ ಶಾಂತಿಪ್ರಿಯ, ಈ ಚಿತ್ರದ ಮೂಲಕ 28 ವರ್ಷಗಳ ನಂತರ ಅಭಿನಯಕ್ಕೆ ವಾಪಸ್ಸಾಗುತ್ತಿದ್ದಾರೆ. 28 ವರ್ಷಗಳ ನಂತರ ನಟನೆಗೆ ವಾಪಸ್ಸಾಗಿದ್ದೇನೆ. ಇಂಥದ್ದೊಂದು ಅವಕಾಶಕ್ಕೆ ಧನ್ಯವಾದಗಳು. ಇಲ್ಲಿ ಸರೋಜಿನಿ ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದು, ಪಾತ್ರಕ್ಕೆ ಶಕ್ತಿಮೀರಿ ಜೀವ ತುಂಬುವುದಕ್ಕೆ ಪ್ರಯತ್ನಿಸುತ್ತೇನೆ ಎನ್ನುತ್ತಾರೆ ಹಿರಿಯ ನಟಿ ಶಾಂತಿಪ್ರಿಯ.

sarojini naidu biopic 3

ಹಿತೇನ್​ ತೇಜ್ವಾನಿ (ಮುಂಬೈ ನಟ) ಮಾತನಾಡುತ್ತಾ,  ಸರೋಜಿನಿ ನಾಯ್ಡು ಅವರ ಜೀವನದಲ್ಲಿ ನಡೆದ ಹಲವು ಪ್ರಮುಖ ವಿಷಯಗಳನ್ನು ಈ ಚಿತ್ರದಲ್ಲಿ ತೆರೆದಿಡಲಾಗುತ್ತಿದೆ. ನಾನು ಸರೋಜಿನಿ ಅವರ ಪತಿ ಗೋವಿಂದರಾಜುಲು ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದೇನೆ. ಸರೋಜಿನಿ ಅವರ ಬಗ್ಗೆ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ನಿಜ ಹೇಳಬೇಕೆಂದರೆ, ಅವರಿಗೆ ಗೋವಿಂದ್​ ರಾಜುಲುಬೆನ್ನೆಲುಬಾಗಿದ್ದರು. ಕೊನೆಯವರೆಗೂ ಸಹಕಾರ, ಪ್ರೋತ್ಸಾಹ ನೀಡಿದರು. ಕುಟುಂಬ ಮತ್ತು ಮಕ್ಕಳ ಬಗ್ಗೆ ಯೋಚನೆ ಬೇಡ ಎಂದು ಆಕೆಯನ್ನು ಹುರಿದುಂಬಿಸಿದರು. ಆಕೆಗೆ ಏನು ಇಷ್ಟವಿತ್ತೋ, ಅದೆಲ್ಲವನ್ನೂ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರು ಎಂದು ತಮ್ಮ ಪಾತ್ರ ವಿವರಣೆ ನೀಡಿದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

shantipriya

 ನನಗೆ ಮೊದಲಿನಿಂದಲೂ ಒಂದು ಬಯೋಪಿಕ್​ನಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಅದು ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಿಗುತ್ತದೆ ಎಂಬ ನಂಬಿಕೆ ಇರಲಿಲ್ಲ. ಚರಣ್​ ಸುವರ್ಣ ಮತ್ತು ಹನಿ ಚೌಧರಿ ನನಗೆ ಸುಮಾರು ಏಳು ವರ್ಷಗಳಿಂದ ಪರಿಚಿತರು. ನನ್ನ ಬ್ಯುಸಿನೆಸ್​ ಪಾರ್ಟನರ್​ಗಳು ಸಹ. ಕಥೆ ಹೇಳಿದಾಗ ಬಹಳ ಖುಷಿ ಆಯಿತು. ಸರೋಜಿನಿ ಅವರ ಚಿಕ್ಕವಯಸ್ಸಿನ ಪಾತ್ರ ಮಾಡುತ್ತಿದ್ದೇನೆ. ಅವರ ಕಾಲೇಜಿನ ದಿನಗಳು ಮತ್ತು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕಿಂತ ಮುಂಚಿನ ಪಾತ್ರ ಮಾಡುತ್ತಿರುವುದಾಗಿ ಸೋನಾಲ್ ಮಾಂಟೆರೊ ತಿಳಿಸಿದರು. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

sarojini naidu biopic 1

 ಕಳೆದ ಎಂಟು ವರ್ಷಗಳಿಂದ ಸರೋಜಿನಿ ಅವರ ಬಗ್ಗೆ ರೀಸರ್ಚ್​ ಮಾಡುತ್ತಿದ್ದೇನೆ. ಅವರು ಆಗಿನ ಕಾಲಕ್ಕೆ ಸ್ಕಾಲರ್​ಸಿಪ್​ ಪಡೆದು, ಲಂಡನ್​ನಲ್ಲಿ ಓದಿದವರು. ಅವರಿಗೆ ಹಲವು ಭಾಷೆಗಳು ಗೊತ್ತಿತ್ತು. ಭಾರತದ ಪ್ರತಿನಿಧಿಯಾಗಿ ಅವರು ಹಲವು ದೇಶಗಳಿಗೆ ಹೋಗಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. 50 ಡಿಗ್ರಿ ಬಿಸಿಲಿನಲ್ಲೂ ಮೂರು ದಿನಗಳ ಕಾಲ ನೀರು ಕುಡಿಯದೇ ಹೋರಾಟ ಮಾಡಿದರು. ಅವರ ಈ ಹೋರಾಟ ಎಲ್ಲರಿಗೂ ಗೊತ್ತಾಗಬೇಕು ಎಂದು ಈ ಚಿತ್ರ ಮಾಡುತ್ತಿದ್ದೇವೆ ಎಂದು ಕಥೆಗಾರ ಧೀರಜ್ ಮಿಶ್ರ ಹೇಳಿದರು. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

sarojini naidu biopic 2

 ಇಲ್ಲಿ ಸರೋಜಿನಿ ಅವರ ಗೊತ್ತಿಲ್ಲದ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ. ಆಕೆ ಹೇಗೆ ಸ್ವಾತಂತ್ರ್ಯ ಹೋರಾಟಗಾರ್ತಿಯಾದರು, ಇಂಡಿಯನ್​ ನ್ಯಾಷನಲ್​ ಕಾಂಗ್ರೆಸ್​ನ ಮೊದಲ ಅಧ್ಯಕ್ಷೆ ಹೇಗಾದರೂ ಮುಂತಾದ ಹಲವು ವಿಷಯಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ.  ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಸಂಗೀತ ನಿರ್ದೇಶನವನ್ನೂ ಮಾಡುತ್ತಿದ್ದೇನೆ. ಇದೊಂದು ಬಹಳ ಸವಾಲಿನ ಕೆಲಸ. 1890ರ ಕಾಲಘಟ್ಟದಲ್ಲಿನ ಸಂಗೀತವನ್ನು ಕೇಳಿಸಬೇಕು. ಹೊಸ ಸಂಗೀತ ಎಂದನಿಸಬಾರದು.  ತಾರಾಗಣ ಇನ್ನೂ ಪೂರ್ತಿಯಾಗಿಲ್ಲ. ಜರೀನಾ ವಹಾಬ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 1878ರಿಂದ 1949ರ ಕಾಲಘಟ್ಟದಲ್ಲಿ ಈ ಚಿತ್ರ ನಡೆಯುತ್ತದೆ. ಬೆಂಗಳೂರು, ಮುಂಬೈ, ಉತ್ತರ ಪ್ರದೇಶದಲ್ಲಿ 50 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ, ತೆಲುಗು ಮತ್ತು ತಮಿಳಿಗೆ ಡಬ್ಬಿಂಗ್​ ಆಗಲಿದೆ. ಸರೋಜಿನಿ ನಾಯ್ಡು ಅವರ ಕುಟುಂಬದ ಎನ್​ ಓ ಸಿ ಸಿಕ್ಕಿದೆ. ಗೋಪಾಲಕೃಷ್ಣ ಗೋಖಲೆ ಅವರ ಪಾತ್ರವನ್ನು ರಂಗಾಯಣ ರಘು ಅವರಿಂದ ಮಾಡಿಸಬೇಕೆಂಬ ಆಸೆ ಇದೆ. ಜೂನ್​ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ವಿನಯ್ ಚಂದ್ರ ಚಿತ್ರದ ಬಗ್ಗೆ ವಿವರಣೆ ನೀಡಿದರು.

TAGGED:Actress ShantipriyabollywoodsandalwoodSarojini NaiduSarojini Naidu BiopicSonal Mentheroನಟಿ ಶಾಂತಿಪ್ರಿಯಬಾಲಿವುಡ್ಸರೋಜಿನಿ ನಾಯ್ಡುಸರೋಜಿನಿ ನಾಯ್ಡು ಬಯೋಪಿಕ್ಸೋನಲ್ ಮೆಂಥೆರೋಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Punjab Kings
Cricket

ತವರಲ್ಲಿ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದ್ದ ಚೆನ್ನೈಗೆ ಮುಖಭಂಗ – ಪಂಜಾಬ್‌ಗೆ 5 ವಿಕೆಟ್‌ಗಳ ಜಯ

Public TV
By Public TV
1 hour ago
HE x TIaUAE4IKr
Bengaluru City

ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮನ

Public TV
By Public TV
1 hour ago
Earthquake
Latest

ಅಫ್ಘಾನಿಸ್ತಾನದಲ್ಲಿ 5.9 ತೀವ್ರತೆಯ ಭೂಕಂಪ; ದೆಹಲಿ-ಎನ್‌ಸಿಆರ್‌ನಲ್ಲೂ ಕಂಪನದ ಅನುಭವ

Public TV
By Public TV
2 hours ago
AI Image
Latest

ಅಮೆರಿಕದ ಎಫ್-35 ಸೇರಿ ಜೆಟ್, ಕಾಪ್ಟರ್ ಉಡೀಸ್ – ಓರ್ವ ಪೈಲಟ್ ಸೆರೆ ಅಂತಿದೆ ಇರಾನ್

Public TV
By Public TV
2 hours ago
Shwetha
Crime

ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ನರ್ಸ್‌ ಆತ್ಮಹತ್ಯೆ – ನಾಲ್ವರು ಅರೆಸ್ಟ್‌

Public TV
By Public TV
3 hours ago
CRIME
Crime

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಚಾಕು ತೋರಿಸಿ ಮಹಿಳೆಯ ಅತ್ಯಾಚಾರ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?