ಉಡುಪಿ: ಹಿಜಬ್ ಹೋರಾಟ ಆರಂಭವಾದ ನಂತರ ಉಡುಪಿಯಲ್ಲಿ ವ್ಯಾಪಾರ ಬಹಿಷ್ಕಾರ ನಡೆಯುತ್ತಿದೆ. ಮುಸಲ್ಮಾನ ವ್ಯಾಪಾರಿಗಳಿಗೆ ಜಾತ್ರೆ ಉತ್ಸವ ದೇವಸ್ಥಾನಗಳ ವ್ಯಾಪಾರಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ. ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಜಾತ್ರೆ, ಬೀದಿ ವರ್ತಕರ ಸಂಘ ವ್ಯಾಪಾರ ಅವಕಾಶ ಮಾಡಿಕೊಡುವಂತೆ ಹಿಂದೂ ಸಮಾಜಕ್ಕೆ ಕರೆ ನೀಡುವಂತೆ ಮನವಿ ಮಾಡಿದರು.
ಮುಸಲ್ಮಾನ ನಾಯಕರುಗಳು ಕ್ರೈಸ್ತ ಧರ್ಮಗುರುಗಳು ಪೇಜಾವರಶ್ರೀಗಳನ್ನು ಭೇಟಿಯಾಗಿ ಉಡುಪಿಯಲ್ಲಿ ಸೌಹಾರ್ದ ವಾತಾವರಣ ನೆಲೆಸುವಂತೆ, ಹಿಂದೂಗಳು ವ್ಯಾಪಾರಕ್ಕೆ ಅವಕಾಶ ಮಾಡಿ ಕೊಡುವಂತೆ ಪೇಜಾವರ ಶ್ರೀಗಳನ್ನು ಭೇಟಿಯಾಗಿ ಮನವಿ ಸಲ್ಲಿಕೆ ಮಾಡಲಾಯ್ತು. ಉಡುಪಿಯಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ಬಹಿಷ್ಕಾರ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ
ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ ಭೇಟಿಯಾಗಿದ್ದು, ಬೀದಿಬದಿ ಜಾತ್ರೆ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ. ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ. ನೂರಾರು ವರ್ಷಗಳಿಂದ ಉಡುಪಿಯಲ್ಲಿ ಹಿಂದೂ ಮತ್ತು ಮುಸಲ್ಮಾನರ ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದೇವೆ. ಕೆಲ ಬೆಳವಣಿಗೆಗಳಿಂದ ಎರಡು ಧರ್ಮಗಳ ನಡುವೆ ಭಿನ್ನಾಭಿಪ್ರಾಯಗಳು ಬಂದಿದೆ. ಸಮಸ್ಯೆಯನ್ನು ಬಗೆಹರಿಸಿ ಕೊಡಲು ತಾವು ನೇತೃತ್ವದ ಬೇಕು ಎಂದು ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಮುಸಲ್ಮಾನ ವ್ಯಾಪಾರಿಗಳ ಮನವಿ ಮಾಡಿದರು. ಇದನ್ನೂ ಓದಿ: ಮಾನವೀಯತೆ ಇರುವುದು ನಿಜವೇ? – ಸಿಎಂ ಕೇಜ್ರಿವಾಲ್‌ಗೆ ಅಗ್ನಿಹೋತ್ರಿ ಪ್ರಶ್ನೆ
ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಧರ್ಮಗುರುಗಳು ಸಮಾಜದ ಸಾಮರಸ್ಯ ತೆಯ ಬಗ್ಗೆ ಮಾತನಾಡಿದರು. ಬಳಕೆದಾರರ ವೇದಿಕೆಯ ಗೌರವಾಧ್ಯಕ್ಷ ಅಬೂಬಕ್ಕರ್ ಆತ್ರಾಡಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೌಲಾ, ಮಹಮ್ಮದ್ ಆರಿಫ್ ಮತ್ತಿತರ ವ್ಯಾಪಾರಿಗಳು ಮನವಿ ಸಂದರ್ಭ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೇಜಾವರ ಸ್ವಾಮೀಜಿಗಳು ಹಣ್ಣುಗಳನ್ನು ನೀಡಿದರು.