ಕಾಶ್ಮೀರ್ ಫೈಲ್ಸ್ ಬಗ್ಗೆ ಮಾತನಾಡಿ – ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ ಆಹ್ವಾನ

Public TV
1 Min Read
vivek agnihotri

ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಕೇವಲ ಜನ ಮೆಚ್ಚುಗೆ ಮತ್ತು ಬಾಕ್ಸ್ ಆಫೀಸ್ಸಿನ ಕಲೆಕ್ಷನ್ ಮಾತ್ರ ಕೈ ಹಿಡಿದಿಲ್ಲ. ದೇಶದಾಚೆಯೂ ಈ ಸಿನಿಮಾ ನಿರ್ದೇಶಕನಿಗೆ ಗೌರವ ಸಿಗುತ್ತಿದೆ. ಭಾರತೀಯರಿಂದ ಮೆಚ್ಚುಗೆ ಪಡೆದಿದ್ದ ಈ ಸಿನಿಮಾವನ್ನು ಬೇರೆ ದೇಶಗಳಲ್ಲಿಯೂ ತೋರಿಸುವುದಾಗಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ. ಇದಕ್ಕೆ ಕಾರಣ ಬ್ರಿಟನ್ ಸಂಸತ್ ಅವರಿಗೆ ನೀಡಿರುವ ಗೌರವ. ಪತ್ನಿ ಸಮೇತ ಬ್ರಿಟನ್ ಸಂಸತ್ ಗೆ ಬರಲು ಅದು ಆಹ್ವಾನ ನೀಡಿದೆ. ಈ ವಿಷಯವನ್ನು ಸ್ವತಃ ವಿವೇಕ್ ಅವರೇ ಹಂಚಿಕೊಂಡಿದ್ದಾರೆ.

the kashmir files 8

‘ಪತ್ನಿ ಪಲ್ಲವಿ ಮತ್ತು ನನಗೆ ಬ್ರಿಟನ್ ಸಂಸತ್‌ನಿಂದ ಆಹ್ವಾನ ಬಂದಿದೆ. ಮುಂದಿನ ತಿಂಗಳು ನಾವು ಬ್ರಿಟನ್‌ಗೆ ಹೋಗುತ್ತೇವೆ. ಕಾಶ್ಮೀರ ಪಂಡಿತರ ನರಮೇಧದ ಸಂದೇಶವನ್ನು ಪ್ರಪಂಚದ ಮೂಲೆ, ಮೂಲೆಗೆ ತಲುಪಿಸಬೇಕಾಗಿದೆ. ಬ್ರಿಟನ್ ಸಂಸತ್ತಿಗೆ ಹೋಗುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ’ ಎಂದು ನಿರ್ದೇಶಕ ಅಗ್ನಿಹೋತ್ರಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾ ವಿಶ್ವದಾದ್ಯಂತ ಮೆಚ್ಚುಗೆ ಪಡೆದುಕೊಳ್ಳುತ್ತಿರುವುದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

the kashmir files 1

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸಂಪೂರ್ಣವಾಗಿ ಹಿಂದಿಯಲ್ಲೇ ಇದೆ. ದಕ್ಷಿಣ ಭಾರತದಲ್ಲಿ ಹಿಂದಿ ಮಾತನಾಡುವವರ ಹಾಗೂ ಹಿಂದಿ ಭಾಷೆಯನ್ನು ಅರ್ಥೈಸಿಕೊಳ್ಳುವವರ ಸಂಖ್ಯೆ ತುಂಬಾನೇ ಕಡಿಮೆ ಇದೆ ಹೀಗಾಗಿ, ಎಲ್ಲಾ ವಿಚಾರಗಳು ಇಲ್ಲಿಯವರಿಗೆ ತಲುಪದೇ ಇರಬಹುದು. ಈ ಕಾರಣಕ್ಕೆ ಸಿನಿಮಾವನ್ನು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಮಾಡಲು ಚಿಂತನೆ ನಡೆದಿದೆ.

the kashmir files 2

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ 1990ರ ಸಮಯದಲ್ಲಿ ಕಾಶ್ಮೀರದ ಪಂಡಿತರು ಅನುಭವಿಸಿದ ಕಷ್ಟಗಳೇನು ಎನ್ನುವುದನ್ನು ಸಿನಿಮಾದಲ್ಲಿ ನಿಖರವಾಗಿ ತೋರಿಸಲಾಗಿದೆ. ಸಿನಿಮಾ ಮೂಲಕ ಕಾಶ್ಮೀರದ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ವಿವೇಕ್ ಅಗ್ನಿಹೋತ್ರಿ ಯಶಸ್ಸು ಸಾಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *