ಮಿಡಲ್ ಫಿಂಗರ್ ತೋರಿಸಿದ ಪೂನಂ: ಕೈಯನ್ನ ತುಂಡು ತುಂಡಾಗಿ ಕತ್ತರಿಸ್ತೀನಿ ಎಂದ ನಟ ಆಲಿ

Public TV
2 Min Read
POONAM ALI

ಹಿಂದಿ ಖಾಸಗಿ ಚಾನೆಲ್‍ವೊಂದರಲ್ಲಿ ಪ್ರಸಾರವಾಗುತ್ತಿರುವ ಲಾಕ್ಆಪ್ ಶೋ ದಿನದಿಂದ ದಿನಕ್ಕೆ ಸಲ್ಲದ ಕಾರಣಕ್ಕಾಗಿ ಸುದ್ದಿ ಆಗುತ್ತಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ನಡೆಸಿಕೊಡುತ್ತಿರುವ ಈ ಶೋ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಬಿ’ಟೌನ್‌ನಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಈ ಶೋನಲ್ಲಿ ಪೂನಂ ಪಾಂಡೆ ವಿವಾದದ ಕಾರಣದಿಂದಾಗಿಯೇ ಫೇಮಸ್ ಆಗುತ್ತಿದ್ದಾರೆ.

kangana ranaut 3

ಈ ವಾರದ ಸಂಚಿಕೆಯಲ್ಲಿ ನಟ ಆಲಿ ಮರ್ಚೆಂಟ್‌ಗೆ ಪೂನಂ ಮಿಡಲ್ ಫಿಂಗರ್ ತೋರಿಸಿದ್ದಾರೆ. ಸಿಟ್ಟಿಗೆದ್ದ ಆಲಿ ಏಕೆ ನಿಮಗೆ ತುಂಬಾ ಹಸಿವಾಗಿದೆಯಾ ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದು, ಆ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

ಲಾಕ್ಅಪ್ ಇತ್ತೀಚಿನ ಸಂಚಿಕೆಯಲ್ಲಿ ಕೆಲವು ಆಕ್ರಮಣಕಾರಿ ಮತ್ತು ಅಶ್ಲೀಲ ಹೇಳಿಕೆಗಳಿಗೆ ಸಾಕ್ಷಿಯಾಗಿದೆ. ಪೂನಂ ಪಾಂಡೆ, ಅಂಜಲಿ ಅರೋರಾ ಮತ್ತು ಆಲಿ ನಡುವಿನ ಜಗಳದಿಂದ ಈ ವಾರದ ಸಂಚಿಕೆ ಪ್ರಾರಂಭವಾಯಿತು. ಈ ವೇಳೆ ಪೂನಂ ಮತ್ತು ಅಂಜಲಿ ಯಾರೋ ನಮ್ಮ ಹೇರ್ ಡ್ರೈಯರ್ ಅನ್ನು ಕದ್ದಿದ್ದಾರೆ ಎಂದು ಸಿಟ್ಟಿಗೆದ್ದಿದ್ದರು. ಅದಕ್ಕೆ ಅವರು ಇಡೀ ಮನೆಯನ್ನು ಹುಡುಕುತ್ತ ಎಲ್ಲರನ್ನು ನಿಂದಿಸಲು ಪ್ರಾರಂಭಿಸಿದರು. ಈ ವೇಳೆ ಆಲಿ ಇವರ ಮಾತುಗಳನ್ನು ಕೇಳಿಸಿಕೊಂಡು ಮೊದಲು ಯಾವುದೇ ಪ್ರತಿಕ್ರಿಯಿ ಕೊಟ್ಟಿಲ್ಲ. ಅದಕ್ಕೆ ಇವರಿಬ್ಬರು ಆಲಿಯೇ ನಮ್ಮ ಹೇರ್ ಡ್ರೈಯರ್ ಬಚ್ಚಿಟ್ಟಿದ್ದಾನೆ ಎಂದು ಆರೋಪಿಸುತ್ತಾರೆ.

poonam pandey 4 1

ಪೂನಂ ಪಾಂಡೆ ಕೂಡ ಎಲ್ಲರನ್ನೂ ಅಶ್ಲೀಲ ಪದಗಳನ್ನು ಬಳಸಿ ನಿಂದಿಸುತ್ತಾರೆ. ಆಗ ಆಲಿಯನ್ನು ಕೇಳಿದಾಗ ನನಗೆ ಗೊತ್ತಿಲ್ಲ ಎಂದು ಸಮಾಧಾನವಾಗಿಯೇ ಉತ್ತರಿಸುತ್ತಾರೆ. ಇದರಿಂದ ಕೋಪಕೊಂಡ ಪೂನಂ ಮನೆಯಲ್ಲಿ ಇರುವವರೆಲ್ಲ ಕಳ್ಳರು ಎಂದು ಕೂಗುತ್ತಿರುತ್ತಾರೆ. ನಂತರ ಪೂನಂ, ಆಲಿ ಮೇಲೆ ಕೋಪಗೊಂಡು ತನ್ನ ಮಧ್ಯದ ಬೆರಳನ್ನು ತೋರಿಸುತ್ತಾ ಹೊರಟು ಹೋಗುತ್ತಾರೆ.

Poonam Pandey14a

ಇದರಿಂದ ಸಿಟ್ಟಿಗೆದ್ದ ಆಲಿ, ನನಗೆ ಮಿಡಲ್ ಫಿಂಗರ್ ತೋರಿಸಬೇಡ. ನಿಮಗೆ ತುಂಬಾ ಹಸಿವಾಗಿರಬೇಕು. ಅದಕ್ಕಾಗಿಯೇ ಮಿಡಲ್ ಫಿಂಗರ್ ತೋರಿಸುತ್ತಿರುವೆ. ನೀನು ನನ್ನನ್ನು ನಿಂದಿಸುವ ಧೈರ್ಯ ಮಾಡಬೇಡ. ಯಾರು ತೆಗೆದುಕೊಂಡಿದ್ದಾರೆ ಅವರಿಗೆ ಹೇಳಿ ನನಗಲ್ಲ. ಎಲ್ಲರೂ ಕಳ್ಳರು ಎಂದು ಕಿರುಚಬೇಡ ಎಂದಿದ್ದಾರೆ. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

ponam ali

ಆದರೂ ಸಹ ಪೂನಂ ಮತ್ತು ಅಂಜಲಿ ಪದೇ ಪದೇ ಆಲಿ ಬಗ್ಗೆ ಮಾತನಾಡುತ್ತಿದ್ದರು. ಮತ್ತೆ ಆಲಿ, ನನಗೆ ಮಿಡಲ್ ಫಿಂಗರ್ ತೋರಿಸಿದರೆ ನಿನ್ನ ತುಂಡು ತುಂಡಾಗಿ ಕತ್ತರಿಸುತ್ತೀನಿ’ ಎಂದು ಬೈದಿದ್ದಾನೆ. ಕೊನೆಗೆ ಇಡೀ ಮನೆ ಹುಡುಕಲು ಶುರು ಮಾಡಿದಾಗ ಮಂದನಾ ಹೇರ್ ಡ್ರೈಯರ್ ಕಂಡು ಹಿಡಿಯುತ್ತಾಳೆ.

Share This Article
Leave a Comment

Leave a Reply

Your email address will not be published. Required fields are marked *